ಬೀದರ್: ಶಾರ್ಟ್ ಸರ್ಕ್ಯೂಟ್‌ನಿಂದ ಸರ್ಕಾರಿ ಬಸ್ಸಿಗೆ ಬೆಂಕಿ ತಗುಲಿ ಹೊತ್ತಿ ಉರಿದಿರುವ ಘಟನೆ ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಕಪ್ಪಿಕೇರಿ ಕ್ರಾಸ್ ಬಳಿ ನಡೆದಿದೆ.ಇದನ್ನೂ ಓದಿ: ಮದುವೆಗೆ ಸಜ್ಜಾದ ‘ಬಿಗ್ ಬಾಸ್’ ಖ್ಯಾತಿಯ ತೇಜಸ್ವಿ ಪ್ರಕಾಶ್, ಕರಣ್ ಕುಂದ್ರಾ ಜೋಡಿ
ಔರಾದ್ ಘಟಕಕ್ಕೆ ಸೇರಿದ ಏಂ38 ಈ1033 ನಂಬರ್‌ನ ಸರ್ಕಾರಿ ಬಸ್ ಬೀದರ್‌ನಿಂದ ಔರಾದ್‌ಗೆ ಹೋಗುತ್ತಿತ್ತು. ಈ ವೇಳೆ ಶಾರ್ಟ್ ಸರ್ಕ್ಯೂಟ್‌ನಿಂದ ಬಸ್‌ಗೆ ಬೆಂಕಿ ತಗುಲಿದೆ. ಪರಿಣಾಮ ಬಸ್ ಸುಟ್ಟು ಕರಕಲಾಗಿದೆ. ಬಸ್ಸಿಗೆ ಬೆಂಕಿ ತಗಲುತ್ತಿದ್ದಂತೆ ಚಾಲಕ ಹಾಗೂ ನಿರ್ವಾಹಕ ಬಸ್ಸಿನಲ್ಲಿದ್ದ ಪ್ರಯಾಣಿಕರನ್ನು ಕೂಡಲೇ ಕೆಳಗಿಳಿಸಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ಅಗ್ನಿಶಾಮಕ ದಳ ದೌಡಾಯಿಸಿದ್ದು, ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಳೆಯ ಬಸ್ ಸಂಚಾರಕ್ಕೆ ಅನುಮತಿ ನೀಡಿದ್ದರಿಂದ ಈ ಅವಘಡ ಸಂಭವಿಸಿದೆ ಎಂದು ಸಾರಿಗೆ ಅಧಿಕಾರಿಗಳ ವಿರುದ್ಧ ಜನರು ಕಿಡಿಕಾರಿದ್ದಾರೆ.ಇದನ್ನೂ ಓದಿ: 2028ರಲ್ಲಿ ನಮ್ಮ ಸರ್ಕಾರ ಬಂದ್ರೆ ಗೃಹಲಕ್ಷ್ಮಿ ಹಣವನ್ನ 4,000 ರೂ.ಗೆ ಏರಿಸುತ್ತೇವೆ : ಕುಣಿಗಲ್ ರಂಗನಾಥ್