ಕಲಬುರಗಿ: ಆರು ತಿಂಗಳ ಹಿಂದೆ ಮೃತಪಟ್ಟ ಅಧಿಕಾರಿಯನ್ನು ವರ್ಗಾವಣೆ ಮಾಡಿ ಸರ್ಕಾರ ಮತ್ತು ಪೌರಾಡಳಿತ ಇಲಾಖೆ ಯಡವಟ್ಟು ಮಾಡಿರುವ ಘಟನೆ ಕಲಬುರಗಿಯಲ್ಲಿ (Kalaburagi) ನಡೆದಿದೆ.
ನಗರಾಭಿವೃದ್ಧಿ ಇಲಾಖೆಯ ಕಿರಿಯ ಎಂಜಿನಿಯರ್ ಅಶೋಕ ಪುಟಪಾಕ ವರ್ಗಾವಣೆ ಮಾಡಿ ಯಡವಟ್ಟು ಮಾಡಿದೆ. ಅಶೋಕ ಪುಟಪಾಕ ಜನವರಿ 12 ರಂದು ಮೃತಪಟ್ಟಿದ್ದರು. ಜು.9 ರಂದು ಕೊಡಗಿಗೆ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿ ಲೇವಡಿಗೆ ಗುರಿಯಾಗಿದೆ. ಇದನ್ನೂ ಓದಿ: ತಗ್ಗಿದ ಮಳೆ – ಕೆಆರ್‌ಎಸ್ ಡ್ಯಾಂ ಒಳಹರಿವು 3,406 ಕ್ಯೂಸೆಕ್‌ಗೆ ಇಳಿಕೆ
ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ದಿಗ್ಗಾಂವ್ ಗ್ರಾಮದ ನಿವಾಸಿಯಾಗಿದ್ದ ಅಶೋಕ್ ಸೇಡಂ ಪುರಸಭೆಯಲ್ಲಿ ಕಿರಿಯ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು.
ಇಲಾಖೆಯ ನೌಕರ ಮೃತಪಟ್ಟ ವಿಚಾರ ಗೊತ್ತಿಲ್ಲದೆಯೇ ವರ್ಗಾವಣೆ ಮಾಡಲಾಗಿದೆಯಾ ಅಥವಾ ಸಾಯುವ ಮುನ್ನ ಅಶೋಕ್ ಪುಟಪಾಕ ವರ್ಗಾವಣೆ ಬಯಸಿದ್ದರಾ ಎಂಬ ಪ್ರಶ್ನೆ ಮೂಡಿದೆ. ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯಗೆ ಕೊಟ್ಟ ಮನವಿ ಪತ್ರಗಳು ಕಸದ ರಾಶಿಯಲ್ಲಿ ಪತ್ತೆ