CrimeLatestMain PostNational

ವರ್ಗಾವಣೆಯಿಂದ ನೊಂದ ಶಿಕ್ಷಕನಿಗೆ ಹೃದಯಾಘಾತ

ಹೈದರಾಬಾದ್: ವರ್ಗಾವಣೆಯಿಂದ ನೊಂದ ಶಿಕ್ಷಕ ರೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ತೆಲಂಗಾಣದ ಮೆಹಬೂಬಾಬಾದ್ ಜಿಲ್ಲೆಯಲ್ಲಿ ನಿನ್ನೆ ರಾತ್ರಿ ನಡೆದಿದೆ.

ಬಾನೋತ್ ಜೆತ್ರಾ (57) ಮೃತರಾಗಿದ್ದಾರೆ. ಇವರು ಮೆಹಬೂಬಾಬಾದ್ ಜಿಲ್ಲೆಯ ನೆಲ್ಲಿಕುದುರು ಮಂಡಲದ ಚಿನ್ನ ಮುಪ್ಪರಂ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಈ ಶಾಲೆಯಿಂದ ಬೇರೆ ಕಡೆಗೆ ವರ್ಗಾವಣೆ ಆಗಿರುವ ವಿಚಾರಕ್ಕೆ ಮನನೊಂದಿರುವ ಶಿಕ್ಷಕ ಬಾನೋತ್ ಚೆತ್ರಾ ಅವರಿಗೆ ಹೃದಯಾಘಾತವಾಗಿ ಪ್ರಾಣ ಬಿಟ್ಟಿದ್ದಾರೆ. ಇದನ್ನೂ ಓದಿ: ರಿಕ್ಷಾ ಕೊಡಿಸೆಂದು ತಾಯಿ ಜೊತೆ ಜಗಳವಾಡ್ತಿದ್ದವ ಸಹೋದರನಿಂದ್ಲೇ ಕೊಲೆಯಾದ!

ಇತ್ತೀಚೆಗೆ ಬಾನೋತ್ ಜೆತ್ರಾ ಅವರನ್ನು ಚಿನ್ನ ಮುಪ್ಪರಂ ಸರ್ಕಾರಿಯಿಂದ ಮುಲುಗು ಜಿಲ್ಲೆಯ ಶಾಲೆಗೆ ವರ್ಗಾಯಿಸಿ ಆದೇಶ ಹೊರಡಿಸಲಾಗಿತ್ತು. ಅಂದಿನಿಂದ ಪ್ರತಿದಿನ ದೂರದ ಊರಿಗೆ ಹೋಗುವುದು ಹೇಗೆ ಎಂದು ಅದರ ಬಗ್ಗೆಯೇ ಯೋಚಿಸುತ್ತಿದ್ದರು. ಬಾನೋತ್ ಅವರಿಗೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ನಿನ್ನೆ ಹೃದಯಾಘಾತವಾಗಿದೆ. ಕೋಮಾ ಸ್ಥಿತಿಯಲ್ಲಿದ್ದ ಅವರನ್ನು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ಅಷ್ಟರಲ್ಲಾಗಲೇ ಅವರು ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಸಿಡಿಲು ಬಡಿತದಿಂದ ವ್ಯಕ್ತಿ ಜಸ್ಟ್ ಮಿಸ್ – ಬೆಚ್ಚಿ ಬೀಳಿಸುವ ವೀಡಿಯೋ ವೈರಲ್

ಎಂದು ಬಾನೋತ್ ಅವರ ಪುತ್ರ ಗೋಪಾಲ್‍ತಂದೆಯ ಸಾವಿನ ಕುರಿತಾಗಿ ಮಾತನಾಡಿ, ನಮ್ಮ ತಾಯಿ ಅಂಗನವಾಡಿ ಶಿಕ್ಷಕಿ. ಗಂಡ-ಹೆಂಡತಿಗೆ ಇಬ್ಬರಿಗೂ ಒಂದೇ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುವ ಅವಕಾಶವನ್ನು ಕಿತ್ತೊಗೆಯಬೇಡಿ ಎಂದುನ್ನ ತಂದೆ ಬಾನೋತ್ ಬೇಡಿಕೊಂಡಿದ್ದರು. ಅಷ್ಟೇ ಅಲ್ಲ ಅವರು ಪಾಶ್ರ್ವವಾಯು ರೋಗದಿಂದ ಬಳಲುತ್ತಿರುವುದಾಗಿ ತಿಳಿಸಿದರೂ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಬಾನೋತ್ ಅವರ ಪುತ್ರ ಅಳಲು ತೋಡಿಕೊಂಡಿದ್ದಾರೆ. ಇದನ್ನೂ ಓದಿ: ಸೇವಾ ಭಾರತಿ ಟ್ರಸ್ಟ್​ನಿಂದ ಕಿಮ್ಸ್​​ಗೆ ಆಂಬುಲೆನ್ಸ್ ಹಸ್ತಾಂತರ

ಬಾನೋತ್ ಜೆತ್ರಾ ಸಾವಿಗೆ ಸರ್ಕಾರವೇ ಹೊಣೆ ಹೊರಬೇಕು. ಸುಮಾರು 30 ವರ್ಷಗಳ ಕಾಲ ಒಂದೇ ಜಿಲ್ಲೆಯಲ್ಲಿಯೇ ಸೇವೆ ಸಲ್ಲಿಸಿ ಬೇರೆ ಜಿಲ್ಲೆಗೆ ಹೋಗಬೇಕೆನ್ನುವ ವೇದನೆಯಿಂದ ಅವರು ತೀರಿಕೊಂಡರು ಎಂದು ಕುಟುಂಬಸ್ಥರು ಹೇಳಿದ್ದಾರೆ.

Leave a Reply

Your email address will not be published.

Back to top button