– ಹಾಜರಾತಿ ಕಡ್ಡಾಯ ಅಲ್ಲ
ಬೆಂಗಳೂರು: ರಾಜ್ಯದಲ್ಲಿ ಆಗಸ್ಟ್ 23 ರಿಂದ ಶಾಲೆಗಳು ಆರಂಭ ಮಾಡುವ ವಿಚಾರವಾಗಿ ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ.
Advertisement
ಆಗಸ್ಟ್ 23 ರಿಂದ ರಾಜ್ಯಾದ್ಯಂತ 9 ರಿಂದ 10ನೇ ತರಗತಿ ವರೆಗಿನ ಮಕ್ಕಳಿಗೆ ಶಾಲೆ ಆರಂಭಗೊಳಿಸಲು ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ನಿತ್ಯ ಅರ್ಧ ದಿನ ಮಾತ್ರ ತರಗತಿ ನಡೆಸಲು ಸರ್ಕಾರ ಸೂಚಿಸಿದೆ. ಸೋಮವಾರ ದಿಂದ ಶುಕ್ರವಾರ 10 ರಿಂದ 1.30 ತರಗತಿ ಮಾಡಬೇಕು, ಶನಿವಾರ 10 ರಿಂದ 12.50 ವರೆಗೆ ಕ್ಲಾಸ್ ಮಾಡಬೇಕು, ಪೋಷಕರ ಅನುಮತಿ ಪತ್ರ ಕಡ್ಡಾಯವಾಗಿ ಶಾಲೆಗಳಲ್ಲಿ ಪಡೆದುಕೊಳ್ಳಬೇಕು ಎಂದು ತಿಳಿಸಿದೆ. ಇದನ್ನೂ ಓದಿ: ಅಫ್ಘಾನಿಸ್ತಾನದ ಸ್ಥಿತಿ ಘನಘೋರ – ವಿಮಾನದಿಂದ ಬಿದ್ದು ಮೂವರು ಸಾವು
Advertisement
ಮಕ್ಕಳು ಮನೆಯಿಂದ ನೀರು, ಉಪಹಾರ ತರಲು ಅವಕಾಶವಿದ್ದು, ಶಾಲೆಗಳಲ್ಲಿ ಕುಡಿಯುವ ಬಿಸಿ ನೀರು ವ್ಯವಸ್ಥೆ ಮಾಡಬೇಕು. ಹಾಜರಾತಿ ಕಡ್ಡಾಯ ಅಲ್ಲ, ಆನ್‍ಲೈನ್ ನಲ್ಲಿ ಬೇಕಾದರು ಕೂಡ ಹಾಜರಾತಿ ಆಗಬಹುದು. ಒಂದು ತಂಡದಲ್ಲಿ 15-20 ವಿದ್ಯಾರ್ಥಿಗಳು ಮಾತ್ರ ಇರಬೇಕು. ವಿದ್ಯಾರ್ಥಿಗಳು ಪೆನ್ನು, ಪುಸ್ತಕ, ರಬ್ಬರ್ ಸೇರಿದಂತೆ ಯಾವ ವಸ್ತುಗಳನ್ನು ಹಂಚಿಕೊಳ್ಳಬಾರದು ಎಂದು ಮಾರ್ಗಸೂಚಿಯಲ್ಲಿ ತಿಳಿಸಿದೆ.
Advertisement
Advertisement
ಮಾರ್ಗಸೂಚಿಯಲ್ಲಿ ಏನಿದೆ?
ನಿತ್ಯ ವಿದ್ಯಾರ್ಥಿಗಳಿಗೆ ಶಾಲಾ-ಕಾಲೇಜುಗಳಲ್ಲಿ ಥರ್ಮಲ್ ಸ್ಕ್ಯಾನಿಂಗ್ ಮಾಡಿ ತಾಪಮಾನ ಪರಿಶೀಲನೆ ಮಾಡಬೇಕು. ಡೆಸ್ಕ್ ನಲ್ಲಿ ಕೂರಿಸುವುದು, ವಿದ್ಯಾರ್ಥಿಯಗಳ ಆಗಮನ ಮತ್ತು ನಿರ್ಗಮದ ವೇಳೆ ಶಾಲಾ-ಕಾಲೇಜುಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಅಗತ್ಯ ಕ್ರಮವಹಿಸಬೇಕು. ಶಾಲಾ-ಕಾಲೇಜು ಕೊಠಡಿಗಳು, ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಸಮರ್ಪಕವಾಗಿ ಮಾಡಬೇಕು. ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ಸ್ಯಾನಿಟೈಸ್ ವ್ಯವಸ್ಥೆ ಶಾಲಾ-ಕಾಲೇಜುಗಳಲ್ಲಿ ಮಾಡಬೇಕು. ಇದನ್ನೂ ಓದಿ: ಕೊಟ್ಟ ಮಾತಿನಂತೆ ಸಿಂಧು ಜೊತೆ ಐಸ್‍ಕ್ರೀಂ ಸವಿದ ಮೋದಿ
ಆರೋಗ್ಯ ವ್ಯತ್ಯಾಸ ಇರೋ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸಿಬ್ಬಂದಿಗಳಿಗೆ ಶಾಲೆ ಪ್ರವೇಶ ಇಲ್ಲ. ಪ್ರಾರ್ಥನೆ ಸಮಯ, ಊಟದ ಸಮಯದಲ್ಲಿ ಅಗತ್ಯ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಕ್ರಮವಹಿಸಬೇಕು. ಗುಂಪು ಕ್ರೀಡೆಗಳ ಆಯೋಜನೆ ಮಾಡುವಾಗ ಎಚ್ಚರವಹಿಸಬೇಕು. ಕಾಲೇಜುಗಳಲ್ಲಿ ಸ್ವಿಮ್ಮಿಂಗ್ ಪೂಲ್ ಇದ್ದರೆ ಕಡ್ಡಾಯವಾಗಿ ಅದನ್ನ ಕ್ಲೋಸ್ ಮಾಡಬೇಕು. ಶಾಲಾ-ಕಾಲೇಜು ಕ್ಯಾಂಪಸ್ ಗೆ ಸಾರ್ವಜನಿಕ ನಿಷೇಧ ಹೇರಬೇಕು. ವಿದ್ಯಾರ್ಥಿಗಳು ಲೈಬ್ರರಿಗಳಲ್ಲಿ ಕುಳಿತು ಓದಲು ನಿಷೇಧ. ಪುಸ್ತಕ ಪಡೆದು ಮನೆಯಲ್ಲಿ ಓದುವ ನಿಯಮ ಪಾಲನೆ ಮಾಡಬೇಕು. ಶಾಲಾ-ಕಾಲೇಜುಗಳ ಹಂತದ ಕ್ರೀಡಾ ಕೂಟಗಳ ಆಯೋಜನೆ ಮಾಡಬಾರದು.
ಬಿಸಿಯೂಟ ಬದಲಾಗಿ ದಿನಸಿ ಪದಾರ್ಥಗಳನ್ನು ವಿದ್ಯಾರ್ಥಿಗಳಿಗೆ ಕೊಡುವ ನಿಯಮ ಮುಂದುವರೆಸಬೇಕು. ತರಗತಿಗಳು ಮುಗಿದ ಮೇಲೆ ನಿತ್ಯ ಕೊಠಡಿಗಳನ್ನ ಸ್ಯಾನಿಟೈಸ್ ಮಾಡಲು ಅಗತ್ಯ ಕ್ರಮವಹಿಸಬೇಕು. ಆರೋಗ್ಯ ವ್ಯತ್ಯಾಸ ಇರೋ ವಿದ್ಯಾರ್ಥಿಗಳಿಗೆ ಶಾಲೆಗೆ ಪ್ರವೇಶ ನೀಡಬಾರದು. ಪ್ರತಿ ಶಾಲೆಯಲ್ಲಿ ಐಸೋಲೇಷನ್ ಕೊಠಡಿ ತೆರೆಯಬೇಕು. ಆರೋಗ್ಯ ವ್ಯತ್ಯಾಸ ಕಂಡು ಬರೋ ವಿದ್ಯಾರ್ಥಿಗೆ ಈ ಕೊಠಡಿ ಕೂರಿಸಲು ಕ್ರಮವಹಿಸಬೇಕು. ವಿದ್ಯಾರ್ಥಿಗಳಿಗೆ ಮಾಸ್ಕ್, ಸ್ಯಾನಿಟೈಸ್ ವ್ಯವಸ್ಥೆ ಮಾಡಲು ಕ್ರಮವಹಿಸಬೇಕು.