ಬೆಂಗಳೂರು: ನಟ ದಿ. ಡಾ.ಪುನೀತ್ ರಾಜ್‍ಕುಮಾರ್ (Dr. Puneeth RajKumar) ಅಭಿಮಾನಿಗಳಿಗೆ ರಾಜ್ಯ ಸರ್ಕಾರ ಗುಡ್‍ನ್ಯೂಸ್ ಕೊಟ್ಟಿದೆ.
ಹೌದು. ಪುನೀತ್ ರಾಜ್‍ಕುಮಾರ್ ಜನ್ಮದಿನವನ್ನು ಸ್ಫೂರ್ತಿ ದಿನ (Inspiration Day) ಎಂದು ಆಚರಣೆ ಮಾಡೋದಾಗಿ ಘೋಷಿಸಿದೆ. ಮಾರ್ಚ್ 17ರಂದು ಅಂದರೆ ದಿವಂಗತ ಪುನೀತ್ ರಾಜ್‍ಕುಮಾರ್ ಹುಟ್ಟಿದ ದಿನ (Birthday) ದಂದು ರಾಜ್ಯ ಸರ್ಕಾರ ವತಿಯಿಂದಲೇ ಸ್ಫೂರ್ತಿ ದಿನವನ್ನು ಆಚರಣೆ ಮಾಡಲಾಗುತ್ತದೆ.
ಈ ಸಂಬಂಧ ಟ್ವೀಟ್ ಮಾಡಿರುವ ಸಚಿವ ಸುನಿಲ್ ಕುಮಾರ್ (Sunil Kumar), ಸ್ಫೂರ್ತಿ ದಿನ ನಡೆಸಬೇಕೆಂಬ ನನ್ನ ಮನವಿಗೆ ಸ್ಪಂದಿಸಿರುವ ಸಿಎಂಗೆ ಧನ್ಯವಾದಗಳು. ಲಕ್ಷಾಂತರ ಯುವಕರಿಗೆ, ಅಭಿಮಾನಿಗಳಿಗೆ ಇದು ಸ್ಫೂರ್ತಿಯಾಗಲಿದೆ ಅಂತ ತಿಳಿಸಿದ್ದಾರೆ. ಇದನ್ನೂ ಓದಿ: ಮೈಸೂರು ವಿವಿಯಿಂದ ಪುನೀತ್‌ಗೆ ಮರಣೋತ್ತರ ಗೌರವ ಡಾಕ್ಟರೇಟ್
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಜನ್ಮದಿನವನ್ನು ಸ್ಫೂರ್ತಿ ದಿನ ಎಂದು ಸರಕಾರದ ವತಿಯಿಂದಲೇ ನಡೆಸಬೇಕೆಂಬ ನನ್ನ ಮನವಿಗೆ ಸ್ಪಂದಿಸಿರುವ ಮುಖ್ಯಮಂತ್ರಿ @BSBommai ಅವರಿಗೆ ಧನ್ಯವಾದಗಳು.
ಅಪ್ಪು ಜನ್ಮದಿನ, ಮಾರ್ಚ್ 17 ಇನ್ನು ಮುಂದೆ ಸ್ಪೂರ್ತಿ ದಿನವೆಂದು ಆಚರಿಸುವ ಮೂಲಕ ನಾಡಿನ ಲಕ್ಷಾಂತರ ಯುವಕರಿಗೆ ಸ್ಫೂರ್ತಿಯಾಗಲಿದೆ.
— Sunil Kumar Karkala (@karkalasunil) September 15, 2022
ಟ್ವಿಟ್‍ನಲ್ಲೇನಿದೆ..?: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಜನ್ಮದಿನವನ್ನು ಸ್ಫೂರ್ತಿ ದಿನ ಎಂದು ಸರಕಾರದ ವತಿಯಿಂದಲೇ ನಡೆಸಬೇಕೆಂಬ ನನ್ನ ಮನವಿಗೆ ಸ್ಪಂದಿಸಿರುವ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ (Basavaraj Bommai) ಅವರಿಗೆ ಧನ್ಯವಾದಗಳು. ಅಪ್ಪು ಜನ್ಮದಿನ, ಮಾರ್ಚ್ 17 ಇನ್ನು ಮುಂದೆ ಸ್ಪೂರ್ತಿ ದಿನವೆಂದು ಆಚರಿಸುವ ಮೂಲಕ ನಾಡಿನ ಲಕ್ಷಾಂತರ ಯುವಕರಿಗೆ ಸ್ಫೂರ್ತಿಯಾಗಲಿದೆ ಎಂದು ಬರೆದುಕೊಂಡಿದ್ದಾರೆ.