ಬೆಂಗಳೂರು: ಓಲಾ ಮತ್ತು ಊಬರ್ ಗೆ ಪೈಪೋಟಿ ನೀಡಲು ಕರ್ನಾಟಕ ಸಾರಿಗೆ ಇಲಾಖೆ ಮುಂದಾಗಿದೆ. ಓಲಾ ಮತ್ತು ಊಬರ್ ಮಾದರಿಯಲ್ಲೇ ಕ್ಯಾಬ್ ಸೇವೆ ಜಾರಿಗೆ ತರಲು ಸಾರಿಗೆ ಇಲಾಖೆ ಯೋಜಿಸಿದೆ.
ಜುಲೈ 5ರಂದು ಮಂಡಿಸಲು ಉದ್ದೇಶಿಸಿರುವ ಬಜೆಟ್ ನಲ್ಲಿ ಈ ಬಗ್ಗೆ ಘೋಷಣೆ ಮಾಡುವುದು ಬಹುತೇಕ ಖಚಿತವಾಗಿದೆ. ಮೆಟ್ರೋ ರೈಲಿನಿಂದ ಇಳಿದವರು ಮುಂದಿನ ದಾರಿಗೆ ಸಂಪರ್ಕ ಕಲ್ಪಿಸುವುದು ಈ ಯೋಜನೆಯ ಉದ್ದೇಶವಾಗಿದೆ. ಇದಕ್ಕಾಗಿ ಓಲಾ ಹಾಗೂ ಊಬರ್ ಮಾದರಿಯಲ್ಲೇ ಆ್ಯಪ್ ರಚಿಸಿ, ಯೋಜನೆ ಜಾರಿಗೊಳಿಸಲು ನಿರ್ಧರಿಸಲಾಗಿದೆ.
Advertisement
ಈಗಾಗಲೇ ಇದಕ್ಕಾಗಿ ಆ್ಯಪ್ ರೂಪಿಸಿ ಯೋಜನೆ ಜಾರಿಗೊಳಿಸಲು ಬಜೆಟ್ ಪ್ರಸ್ತಾವನೆಗೆ ಸಲ್ಲಿಕೆಯಾಗಿದ್ದು, ಪ್ರಸ್ತಾವನೆಗೆ ಸಿಕ್ಕಿದೆ ಪ್ರಾಥಮಿಕ ಅನುಮತಿಯೂ ಕೂಡ ಸಿಕ್ಕಿದೆ. ಅಧಿಕೃತವಾಗಿ ಘೋಷಣೆಯೊಂದೇ ಬಾಕಿ ಇದೆ. ಜೊತೆಗೆ ಮುಂದಿನ ಹಂತದಲ್ಲಿ ಬೈಕ್ ಟ್ಯಾಕ್ಸಿ ಯೋಜನೆಗೂ ಸರ್ಕಾರ ಚಿಂತಿಸಿದೆ.
Advertisement
ಈ ಯೋಜನೆಯಲ್ಲಿ ಕಾರು, ಆಟೋ ಸೇವೆ ಮೊದಲ ಹಂತದಲ್ಲಿ ಸಿಗಲಿದೆ. ಮುಂದಿನ ಹಂತದಲ್ಲಿ ಬೈಕ್ ಟ್ಯಾಕ್ಸಿ ಒದಗಿಸುವ ಕುರಿತು ಚಿಂತನೆ ನಡೆಸಲಾಗಿದೆ. ಮೆಟ್ರೋ ನಿಲ್ದಾಣದಿಂದ ಮುಂದಿನ ಸ್ಥಳಗಳಿಗೆ ಬಸ್ ಕಲ್ಪಿಸುವ ಯೋಜನೆಯಲ್ಲಿ ಬಿಎಂಟಿಸಿಗೆ ನಷ್ಟ ಆದ್ದರಿಂದ ಈ ಯೋಜನೆ ರೂಪಿಸಲಾಗಿದೆ. ಈ ಯೋಜನೆಗೆ ಆಕರ್ಷಕ, ಕ್ಯಾಚಿ ಹೆಸರು ಇಡುವ ಹೊಣೆಯನ್ನ ನಾಗರಿಕರಿಗೆ ವಹಿಸುವ ಕುರಿತು ಸಾರಿಗೆ ಇಲಾಖೆ ಆಲೋಚಿಸಿದೆ.
Advertisement