ಬೆಂಗಳೂರು: ಕಲ್ಯಾಣ ಕರ್ನಾಟಕ (Kalyana Karnataka) ಭಾಗದಲ್ಲಿ ಆಗುತ್ತಿರುವ ಪ್ರವಾಹಕ್ಕೆ (Flood) ಸರ್ಕಾರ ಯುದ್ಧೋಪಾದಿಯಾಗಿ ಪರಿಹಾರ ತೆಗೆದುಕೊಳ್ಳಬೇಕು ಎಂದು ಬಿಜೆಪಿ ನಾಯಕ ಸಿಟಿ ರವಿ (CT Ravi) ಸರ್ಕಾರವನ್ನ ಆಗ್ರಹಿಸಿದ್ದಾರೆ.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರವಾಹ ಆಗುತ್ತಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸಿಎಂ ಅವರು ಪ್ರವಾಹ ಸಮಯವನ್ನ ಫಿಲ್ಮ್ ಶೂಟಿಂಗ್ ರೀತಿ ಅಂದುಕೊಂಡಿದ್ದಾರೆ. ಪ್ರವಾಹ ಅನ್ನೋದು ಪಿಕ್ಚರ್ ಶೂಟಿಂಗ್ ಅಲ್ಲ. ಈ ಮೂವಿ ಶೂಟಿಂಗ್ ಟೈಂನಲ್ಲಿ ಮುಂಚೆಯೇ ಎಲ್ಲಾ ಲೋಕೇಶನ್ ನೋಡಿ, ಅಮೇಲೆ ಅಲ್ಲಿಗೆ ಕ್ಯಾಮೆರಾ ಕಳಿಸಿ ಅಲ್ಲಿ ಡೈರಕ್ಟರ್ ಎಲ್ಲಾ ತಯಾರಿ ಮಾಡಿಕೊಂಡು ಅಲ್ಲಿಗೆ ಹೋಗುತ್ತಾರೆ. ಆಕ್ಷನ್ ಕಟ್ ಹೇಳೋ ರೀತಿಯಲ್ಲಾ ಇದು. ಇದಕ್ಕೆ ಸಂವೇದನೆ ಇರಬೇಕು. ಸಿಎಂಗೆ ಸಂವೇದನೆ ಇದ್ದಿದ್ದರೆ ಮುಳುಗಿರೋ ಪ್ರದೇಶಕ್ಕೆ ಹೋಗಬೇಕಿತ್ತು. ಸಿದ್ದರಾಮಯ್ಯ ಅವರು ಎರಡನೇ ಬಾರಿ ಸಿಎಂ ಆದ ಮೇಲೆ ಸಂವೇದನೆ ಸತ್ತು ಹೋಗಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಚಿಕ್ಕಮಗಳೂರು | ಮದ್ಯ ಕುಡಿದು ನನ್ನ ಬಳಿ ಬರಬೇಡಿ – ವಾಹನ ಸವಾರರಿಗೆ ಯಮರಾಜನ ಎಚ್ಚರಿಕೆ!
ಸರ್ಕಾರದಲ್ಲೂ ಸಂವೇದನೆ ಸತ್ತು ಹೋಗಿದೆ. ಎಲ್ಲಾ ಕೆಲಸ ಬದಿಗೊತ್ತಿ ಆದ್ಯತೆ ವಿಷಯ ಆಗಬೇಕಿತ್ತು. ನಾನು ನೀವು ಮಾಡಿದ ಬೆಂಗಳೂರು ಸಿಟಿ ರೌಂಡ್ಸ್ ನೋಡಿದೆ. ನೀವು ಹಾಕಿದ್ದ ಬಿಳಿ ಪಂಚೆ, ಜುಬ್ಬ ಕೊಳೆ ಆಗದ ರೀತಿ ರೌಂಡ್ಸ್ ಮಾಡಿದ್ದೀರಿ. ಚಪ್ಪಲಿಗೆ ನೀರು ತಾಗದ ರೀತಿ ಮುಗಿಸಿದ್ರಿ. ಇದು ಹಾಗೇನಾ? ಇದು ಪಿಕ್ಚರ್ ಶೂಟಿಂಗ್ ಅಲ್ಲ. ಜನರ ಕಷ್ಟಕ್ಕೆ ಸ್ಪಂದನೆ ಮಾಡಬೇಕು. ಜನರ ಬವಣೆಗೆ ಸ್ಪಂದಿಸೋ ಕೆಲಸ ಮಾಡಬೇಕಿತ್ತು. ಸರ್ಕಾರದ ಸಂವೇದನೆ ಸತ್ತು ಹೋಗಿದೆ. ತಕ್ಷಣ ಯುದ್ಧೋಪಾದಿಯಲ್ಲಿ ಪರಿಹಾರ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಜಾತಿಗಣತಿಗೆ ಬಿಜೆಪಿ ವಿರೋಧ ಮಾಡೋದಿಲ್ಲ: ಸಿ.ಟಿ ರವಿ

