ಬೆಂಗಳೂರು: ದುಡಿಯುವವನಿಗೆ ಒಂದು ಕಾಲ, ಹಾಗೇ ಅರಸನಿಗೆ ಒಂದು ಕಾಲ ಎಂಬ ಮಾತು ಕೇಳ್ತಿರಾ. ಈಗ ಇದು ಕೊಂಚ ಅಪ್‍ಡೇಟ್ ಆಗಿದೆ. ಖಾಸಗಿ ಶಾಲೆಗಳ ಟ್ರೆಂಡ್ ಒಂದ್ ಕಾಲ, ಈಗ ಸರ್ಕಾರಿ ಶಾಲೆಗಳ ಟ್ರೆಂಡ್ ಕಾಲ ಶುರುವಾಗಿದೆ.
ಬೆಂಗಳೂರಿನ ಮೂಡಲಪಾಳ್ಯದಲ್ಲಿರೊ ರೈಲ್ವೇ ಸ್ಟೇಷನ್‍ನಲ್ಲಿ ನಿತ್ಯ ಮಕ್ಕಳು ಓದುವುದಕ್ಕಾಗಿ ರೈಲು ಹತ್ತುತ್ತಾರೆ ಹಾಗೂ ಇಳಿಯುತ್ತಾರೆ. ಬಡ ಮಕ್ಕಳನ್ನು ಆಕರ್ಷಿಸಲು ಹಾಗೂ ಸರ್ಕಾರಿ ಶಾಲೆಗೆ ಹೊಸ ಲುಕ್ ಕೊಡಲು ಹೀಗೆ ವಿಭಿನ್ನ ಪೇಂಟಿಂಗ್ ಮಾಡಲಾಗಿದೆ. ಈ ಸರ್ಕಾರಿ ಶಾಲೆಯನ್ನು ನಂಬಿರುವ ಬಡ ಮಕ್ಕಳಿಗೆ ಈಗ ವಿದ್ಯೆ ಜೊತೆಗೆ ಖುಷಿಯೂ ಫ್ರೀ ಆಗಿ ಸಿಕ್ಕಿದೆ. ಕರ್ನಾಟಕ ರಾಜ್ಯ ನಾಮಫಲಕ ಕಲಾವಿದರ ಸಂಘದ ವತಿಯಿಂದ ಹೀಗೆ ಶಾಲೆಗೆ ಹೊಸ ರಂಗು ನೀಡಿದ್ದಾರೆ.
Advertisement
Advertisement
ಸರ್ಕಾರಿ ಶಾಲೆ ಎಂದರೆ ಮಕ್ಕಳು ಬರುವ ಸಂಖ್ಯೆ ಕಡಿಮೆ ಆಗಿದೆ. ಸರ್ಕಾರಿ ಶಾಲೆ ಮಕ್ಕಳನ್ನು ಆರ್ಕಷಿಸುವ ಸಲುವಾಗಿ ಇಲ್ಲಿ ಬದಲಾವಣೆ ಮಾಡಬೇಕು ಎಂದು ನಮ್ಮ ವಾರ್ಡಿನ ರಾಜ್ಯ ನಾಮಫಲಕ ಕಲಾವಿದರ ಸಂಘದ ಯುವಕರು ಸೇರಿ ರೈಲಿನ ಪೇಟಿಂಗ್ ಮಾಡಲಾಗಿದೆ. ಈಗಾಗಲೇ ಬೇರೆ ಶಾಲೆಯಲ್ಲಿ ಗಿಡ-ಮರ ಚಿತ್ರ, ಸಾಹಿತಿಗಳ ಚಿತ್ರ ಕಾಮನ್ ಆಗಿತ್ತು. ವಿಭಿನ್ನವಾಗಿ ಇರಲಿ ಎಂದು ಈ ರೈಲಿನ ಪೇಟಿಂಗ್ ಮಾಡಿದ್ದೇವೆ ಎಂದು ಕಾರ್ಪೋರೇಟರ್ ದಾಸೇಗೌಡರು ತಿಳಿಸಿದ್ದಾರೆ.
Advertisement
Advertisement
ಸರ್ಕಾರಿ ಶಾಲೆ ಉಳಿಸಿ ಆಂದೋಲನ ಸಮಿತಿ ಸಿಎಂಗೆ ಪತ್ರ ಬರೆದು 3 ವರ್ಷ ಸರ್ಕಾರಿ ಶಾಲೆ ಹೈಟೆಕ್ ಮಾಡ್ತೀವಿ. ಇದರಲ್ಲಿ ನಟ ರಿಷಭ್ ಶೆಟ್ಟಿ, ನಟಿ ಪ್ರಣಿತಾ ಹೀಗೆ ಹಲವರು ಕೈ ಜೋಡಿಸ್ತಾರೆ ಎಂದಿದ್ದು, ಸಿಎಂ ಸಹ ಶಿಕ್ಷಣ ಇಲಾಖೆ ಗಮನ ಹರಿಸುವಂತೆ ಸೂಚನೆ ನೀಡಿದ್ದಾರೆ.