DistrictsKarnatakaKoppalLatestMain Post

ಸರ್ಕಾರಿ ಶಾಲೆಯಲ್ಲಿ ಮೊಟ್ಟೆ ನೀಡುತ್ತಿರುವುದರಿಂದ ಮಗನ ಟಿಸಿ ಪಡೆದ ತಂದೆ

ಕೊಪ್ಪಳ: ಶಾಲೆಗಳಲ್ಲಿ ಮಕ್ಕಳಿಗೆ ಮೊಟ್ಟೆ ನೀಡುತ್ತಿರುವ ಹಿನ್ನೆಲೆಯಲ್ಲಿ ತಂದೆ ಸರ್ಕಾರಿ ಶಾಲೆಯಿಂದ ಮಗನ ಟಿಸಿ ಪಡೆದ ಘಟನೆ ಕೊಪ್ಪಳ ಜಿಲ್ಲೆಯಲ್ಲಿ ನಡೆದಿದೆ.

ಕೊಪ್ಪಳದ ವೀರಣ್ಣ ಕೋರ್ಲಹಳ್ಳಿ ಮಗ ಟಿಸಿ ಪಡೆದವರು. ವೀರಣ್ಣ ಅಖಿಲ ಭಾರತ ಲಿಂಗಾಯತ್ ಮಹಾಸಭಾ ರಾಜ್ಯಾಧ್ಯಕ್ಷರಾಗಿದ್ದಾರೆ. ಅವರ ಮಗ ಶರಣಬಸವಕಿರಣ ರೈಲ್ವೆ ನಿಲ್ದಾಣದ ಬಳಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದನೇ ತರಗತಿ ಓದುತ್ತಿದ್ದನು. ಆದರೆ ಸರ್ಕಾರಿ ಶಾಲೆಯಲ್ಲಿ ಮೊಟ್ಟೆ ನೀಡುತ್ತಿರುವುದನ್ನು ವಿರೋಧಿಸಿದ ಅವರು ತಮ್ಮ ಮಗನ ವರ್ಗಾವಣೆ ಪತ್ರವನ್ನು ಸರ್ಕಾರಿ ಶಾಲೆಯಿಂದ ಪಡೆದು ಖಾಸಗಿ ಶಾಲೆಗೆ ಸೇರಿಸಿದ್ದಾರೆ. ಇದನ್ನೂ ಓದಿ: BJP ಅವಧಿಯಲ್ಲಿ ಅಭಿವೃದ್ಧಿಯಾಗಿದ್ದು ಮೋದಿ ಸ್ನೇಹಿತರಷ್ಟೇ: ಪ್ರಿಯಾಂಕಾ ಗಾಂಧಿ

ಈ ಬಗ್ಗೆ ಮಾತನಾಡಿದ ವೀರಣ್ಣ, ಸರ್ಕಾರಿ ಶಾಲೆಯಲ್ಲಿ ಮೊಟ್ಟೆ ನೀಡುತ್ತಿದ್ದಾರೆ. ಆದರೆ ಮೊಟ್ಟೆ ತಿನ್ನುವುದು ನನ್ನ ಧರ್ಮದಲ್ಲಿ ವಿರೋಧವಿದೆ. ಒಂದೆರೆಡು ದಿನ ನನ್ನ ಮಗ ಮೊಟ್ಟೆ ತಿನ್ನದೆ ಇರಬಹುದು. ಆದರೆ ಬೇರೆ ಮಕ್ಕಳು ತಿನ್ನುವುದನ್ನು ನೋಡಿ ನನ್ನ ಮಗನೂ ತಿನ್ನಬಹುದು. ಇದೇ ಕಾರಣಕ್ಕೆ ಸರ್ಕಾರಿ ಶಾಲೆ ಬಿಡಿಸಿದ್ದೇನೆ ಎಂದು ಹೇಳಿದ್ದಾರೆ. ಮಗನ ಟಿಸಿ ಪಡೆದ ವಿಷಯವನ್ನು ವೀರಣ್ಣ ಕೋರ್ಲಹಳ್ಳಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಒಳಚರಂಡಿಯಲ್ಲಿ ಅನಿಲ ಸ್ಫೋಟ 14 ಮಂದಿ ಸಾವು

Leave a Reply

Your email address will not be published.

Back to top button