ಬೆಂಗಳೂರು: ರಾಜ್ಯ ಸರ್ಕಾರ ನೂತನವಾಗಿ 50 ಸರ್ಕಾರಿ ಪದವಿ ಪೂರ್ವ ಕಾಲೇಜುಗಳಿಗೆ (College) ಅನುಮತಿ ನೀಡಿದ್ದು, ಅದರಲ್ಲಿ 12 ಕಾಲೇಜುಗಳನ್ನು ಸಿಎಂ ತವರು ಜಿಲ್ಲೆ ಹಾವೇರಿಗೆ ನೀಡಲಾಗಿದೆ.
ರಾಜ್ಯ ಸರ್ಕಾರವು ನೂತನವಾಗಿ ಮಂಜೂರು ಮಾಡಿದ ಕಾಲೇಜುಗಳ ಪೈಕಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ತವರು ಜಿಲ್ಲೆ ಹಾವೇರಿ (Haveri) ಹಾಗೂ ತವರು ಕ್ಷೇತ್ರ ಶಿಗ್ಗಾಂವಿಗೆ (Shiggaon) ಭರ್ಜರಿ ಕಾಲೇಜುಗಳ ಕೊಡುಗೆ ನೀಡಲಾಗಿದೆ. ಒಟ್ಟು 50 ಕಾಲೇಜುಗಳ ಪೈಕಿ 12 ಕಾಲೇಜುಗಳನ್ನು ಸಿಎಂ ತವರು ಜಿಲ್ಲೆ ಹಾವೇರಿಗೆ ನೀಡಲಾಗಿದೆ. ಈ 12ರ ಪೈಕಿ 9 ಸಿಎಂ ಬೊಮ್ಮಾಯಿ ಪ್ರತಿನಿಧಿಸುವ ಶಿಗ್ಗಾಂವಿ ವಿಧಾನಸಭೆ ಕ್ಷೇತ್ರಕ್ಕೆ ನೀಡಲಾಗಿದೆ.
Advertisement
Advertisement
ನೂತನವಾಗಿ ಮಂಜೂರಾದ ಕಾಲೇಜುಗಳಲ್ಲಿ ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಕಡಗೋಳ ಗ್ರಾಮ, ಹಿರೆಮುಗದೂರು, ಅಲ್ಲಿಪೂರ ಹಾಗೂ ಶಿಗ್ಗಾಂವಿಯ ಬಂಕಾಪುರ, ಕೋಣನಕೇರಿ, ಹಿರೇಬೆಂಡಿಗೇರಿ, ಹೊಸೂರು-ಯತ್ನಳ್ಳಿ, ಬಸವನಾಳ ಸೇರಿವೆ. ಇದನ್ನೂ ಓದಿ: ಶಶಿ ತರೂರ್‌ಗೆ ಕೇರಳದಲ್ಲೇ ಸಿಕ್ತಿಲ್ಲ ಬೆಂಬಲ – ರಾಹುಲ್ ಸ್ಪರ್ಧಿಸುವಂತೆ ಒತ್ತಾಯ
Advertisement
Advertisement
ಇನ್ನುಳಿದಂತೆ ಉತ್ತರ ಕನ್ನಡ 2, ಕೊಪ್ಪಳ 9, ಮೈಸೂರು 2, ಚಿತ್ರದುರ್ಗ 1, ರಾಯಚೂರು 3, ಯಾದಗಿರಿ 2, ದಾವಣಗೆರೆ 4, ಕಲಬುರಗಿ 2, ವಿಜಯಪುರ 3, ಬೆಳಗಾವಿ 7, ಬಾಗಲಕೋಟೆ 2, ಹಾಗೂ ಬೆಂಗಳೂರು ದಕ್ಷಿಣಕ್ಕೆ ಒಂದು ಕಾಲೇಜನ್ನು ಮಂಜೂರು ಮಾಡಲಾಗಿದೆ. ಇದನ್ನೂ ಓದಿ: ಆಟೋ ಸಂಸ್ಥೆಯೊಂದರ ಸಿಇಒಗೆ ಬೆದರಿಕೆಯೊಡ್ಡಿದ ಡಿಎಂಕೆ ಶಾಸಕನ ವಿರುದ್ಧ ಕೇಸ್