ಮೈಸೂರು: ಜಿಲ್ಲೆಯ ರಾಜೀವ್ ನಗರದಲ್ಲಿ ಅನಕ್ಷರಸ್ಥರಾದ ಸೈಯದ್ ಇಸಾಕ್ ಸ್ಥಾಪಿಸಿದ್ದ ಸಾರ್ವಜನಿಕ ಗ್ರಂಥಾಲಯ ಇಂದು ಉದ್ಘಾಟನೆಗೊಂಡಿದೆ.
Advertisement
ಈ ಹಿಂದೆ ಸೈಯದ್ ಇಸಾಕ್ ಸ್ಥಾಪಿಸಿದ್ದ ಗ್ರಂಥಾಲಯವನ್ನು ಕಿಡಿಗೇಡಿಗಳು ಸುಟ್ಟು ಹಾಕಿದ್ದರು. ಆಗ ಸಾವಿರಾರು ಪುಸ್ತಕಗಳು ಬೆಂಕಿಗಾಹುತಿಯಾಗಿದ್ದವು. ಈ ವೇಳೆ ರಾಜ್ಯ ಸರ್ಕಾರ ತಾನೇ ಗ್ರಂಥಾಲಯ ನಿರ್ಮಿಸುವುದಾಗಿ ಭರವಸೆ ನೀಡಿತ್ತು. ಆದರೆ, ವರ್ಷ ಕಳೆದರೂ ಭರವಸೆ ಈಡೇರಲಿಲ್ಲ. ಅದಕ್ಕಾಗಿ ಮಾಜಿ ಸಚಿವ ಜಮೀರ್ ಅಹಮದ್, ಸಚಿವ ಎಸ್.ಟಿ. ಸೋಮಶೇಖರ್, ಮೈಸೂರು ಸಂಸದ ಪ್ರತಾಪ್ ಸಿಂಹ, ಸುತ್ತೂರು ಮಠದ ಶ್ರೀ ಮಾಡಿದ ವೈಯಕ್ತಿಕ ಧನಸಹಾಯದಲ್ಲಿ ಈಗ ಗ್ರಂಥಾಲಯ ನಿರ್ಮಿಸಲಾಗಿದೆ. ಈ ಗ್ರಂಥಾಲಯ ಇಂದು ಉದ್ಘಾಟನೆಗೊಂಡಿದೆ. ಇದನ್ನೂ ಓದಿ: 11 ಸಾವಿರ ಕನ್ನಡ ಪುಸ್ತಕಗಳಿದ್ದ ಗ್ರಂಥಾಲಯ ಸುಟ್ಟು ಹಾಕಿದ ಕಿಡಿಗೇಡಿಗಳು!
Advertisement
Advertisement
ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಸೈಯದ್ ಇಸಾಕ್, ಈ ಹಿಂದೆ ಸುಟ್ಟುಹೋಗಿದ್ದ ಗ್ರಂಥಾಲಯದ ಮರು ನಿರ್ಮಾಣಕ್ಕೆ ಮೊಟ್ಟ ಮೊದಲ ಬಾರಿಗೆ ಜಮೀರ್ ಅಹಮ್ಮದ್ ಅವರು 2 ಲಕ್ಷ ರೂ., ಪ್ರತಾಪ್ ಸಿಂಹ 50 ಸಾವಿರ ರೂ., ಸಚಿವ ಎಸ್.ಟಿ. ಸೋಮಶೇಖರ್ 25 ಸಾವಿರ ರೂ. ಮತ್ತು ಸುತ್ತೂರು ಮಠದ ಶ್ರೀ 10 ಸಾವಿರ ರೂ. ಮತ್ತು ಪುಸ್ತಕಗಳನ್ನು ನೀಡಿದ್ದಾರೆ ಅಲ್ಲದೆ ವೈಯಕ್ತಿಕವಾಗಿ ಹಲವು ಮಂದಿ ಸಹಾಯ ಮಾಡಿದ್ದಾರೆ. ಇದನ್ನೂ ಓದಿ: ರಾಜಪಥದಲ್ಲಿ ಭಾರತದ ವೈಭವ ಅನಾವರಣ
Advertisement
ಎಲ್ಲಾ ಧಾನಿಗಳು ಸೇರಿ ಒಟ್ಟು 3 ಲಕ್ಷ 45 ಸಾವಿರ ರೂ. ಕೊಟ್ಟಿದ್ದಾರೆ. ಈ ಹಣವನ್ನು ಬ್ಯಾಂಕ್‍ನಲ್ಲಿ ಇಡಿ ನಾವು ಗ್ರಂಥಾಲಯ ಕಟ್ಟಿ ಕೊಡುತ್ತೇವೆ ಎಂದು ಸರ್ಕಾರ ತಿಳಿಸಿತ್ತು. ಆದರೆ ಈವರೆಗೇ ಸರ್ಕಾರ ಕೊಟ್ಟಿಲ್ಲ. ನನಗೆ ಸರ್ಕಾರದ ಮೇಲೆ ನಂಬಿಕೆ ಹೊರಟು ಹೋಯಿತು ಹಾಗಾಗಿ ತಾತ್ಕಾಲಿಕವಾಗಿ ನಾನು ಗ್ರಂಥಾಲಯ ಕಟ್ಟಿದ್ದೇನೆ ಎಂದರು.