ನವದೆಹಲಿ: ಭಾರತ ಸರ್ಕಾರ ಗೂಗಲ್, ಫೇಸ್‌ಬುಕ್‌ಗಳಲ್ಲಿ ಪ್ರಕಟವಾಗುವ ಡಿಜಿಟಲ್ ಸುದ್ದಿಗಳಿಗೆ ಹೊಸದಾದ ಕಾನೂನನ್ನು ರಚಿಸಲು ಮುಂದಾಗಿದೆ. ಆಸ್ಟ್ರೇಲಿಯಾ, ಕೆನಡಾ, ಫ್ರಾನ್ಸ್ ಬಳಿಕ ಇದೀಗ ಭಾರತವೂ ಗೂಗಲ್ ಹಾಗೂ ಫೇಸ್‌ಬುಕ್‌ನಂತಹ ಪ್ಲಾಟ್‌ಫಾರ್ಮ್‌ಗಳಲ್ಲಿ ಪ್ರಕಟವಾಗುವ ಸುದ್ದಿಗಳಿಗೆ ಪಾವತಿಸುವ ಕಾನೂನನ್ನು ತರಲು ಯೋಜಿಸಿದೆ.
ಸರ್ಕಾರದ ಯೋಜನೆಯ ಪ್ರಕಾರ ಜಾಗತಿಕ ದೈತ್ಯ ಟೆಕ್ ಪ್ಲಾಟ್‌ಫಾರ್ಮ್‌ಗಳಾದ ಆಲ್ಫಾಬೆಟ್ (ಗೂಗಲ್, ಯೂಟ್ಯೂಬ್), ಮೆಟಾ (ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಹಾಗೂ ವಾಟ್ಸಪ್), ಟ್ವಿಟ್ಟರ್ ಹಾಗೂ ಅಮೆಜಾನ್ ಮಾಲೀಕರು ಭಾರತೀಯ ಪತ್ರಿಕೆಗಳು ಹಾಗೂ ಡಿಜಿಟಲ್ ಸುದ್ದಿ ಪ್ರಕಾಶಕರಿಗೆ ತಮ್ಮ ಆದಾಯದ ಪಾಲನ್ನು ಪಾವತಿಸಬೇಕಾಗುತ್ತದೆ. ಏಕೆಂದರೆ ಸಾಮಾನ್ಯವಾಗಿ ಸುದ್ದಿ ವಾಹಿನಿಗಳು ತಯಾರಿಸಿದ ವಿಷಯಗಳನ್ನು ಬಳಸಿಕೊಂಡು ಈ ಪ್ಲಾಟ್‌ಫಾರ್ಮ್‌ಗಳು ಹಣ ಗಳಿಸುತ್ತವೆ. ಇದನ್ನೂ ಓದಿ: ಈ ದೇಶಗಳಿಗೂ ಬರಲಿದೆ ಶ್ರೀಲಂಕಾ ಪರಿಸ್ಥಿತಿ – ಆರ್ಥಿಕ ಸಂಕಷ್ಟದ ಹೊಸ್ತಿಲಲ್ಲಿ 12 ರಾಷ್ಟ್ರಗಳು
Advertisement
Advertisement
ಈ ಪ್ಲಾಟ್‌ಫಾರ್ಮ್‌ಗಳು ಸುದ್ದಿ ಸಂಸ್ಥೆಗಳಿಂದ ವಿಷಯಗಳನ್ನು ಹಾಕಿ ಆದಾಯ ಗಳಿಸಿದರೆ, ಅದರ ಪಾಲನ್ನು ನ್ಯಾಯುತವಾಗಿ ಸಂಸ್ಥೆಗಳೊಂದಿಗೆ ಹಂಚಿಕೊಳ್ಳುವುದಿಲ್ಲ ಎಂಬ ಕಾರಣಕ್ಕೆ ಈ ಕಾನೂನಿನ ಅಗತ್ಯತೆ ಇದೀಗ ಉದ್ಭವವಾಗುತ್ತಿದೆ. ಡಿಜಿಟಲ್ ಮಧ್ಯವರ್ತಿಗಳು ಸುದ್ದಿ ಸಂಸ್ಥೆಗಳೊಂದಿಗೆ ತಮ್ಮ ಆದಾಯದ ಮಾಹಿತಿಗಳನ್ನು ಗೌಪ್ಯವಾಗಿಡುತ್ತವೆ ಎಂಬ ಕಾರಣಕ್ಕೆ ಇದೀಗ ಆತಂಕಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಮೈಕ್ರೋಸಾಫ್ಟ್‌ನೊಂದಿಗೆ ನೆಟ್‌ಫ್ಲಿಕ್ಸ್ ಪಾರ್ಟ್ನರ್‌ಶಿಪ್ – ಅಗ್ಗದ ಯೋಜನೆಗೆ ತಯಾರಿ
Advertisement
ಇದೀಗ ದೊಡ್ಡ ಟೆಕ್ ಕಂಪನಿಗಳು ತಮ್ಮ ಪ್ರಾಬಲ್ಯವನ್ನು ದುರುಪಯೋಗಪಡಿಸಿಕೊಳ್ಳುತ್ತಿವೆ ಎಂದು ವಿಶ್ವದಾದ್ಯಂತ ಸುದ್ದಿ ಸಂಸ್ಥೆಗಳು ಹೋರಾಟ ಪ್ರಾರಂಭಿಸಿವೆ. ಈಗಾಗಲೇ ಕೆಲವು ದೇಶಗಳು ಟೆಕ್ ಕಂಪನಿಗಳ ಮೇಲೆ ಕಾನೂನು ಅಸ್ತ್ರ ಹಾಗೂ ದಂಡಗಳನ್ನು ವಿಧಿಸುವ ಮೂಲಕ ಪ್ರಾಬಲ್ಯವನ್ನು ದುರುಪಯೋಗಪಡಿಸಿಕೊಳ್ಳುವುದನ್ನು ನಿಗ್ರಹಿಸಲು ಮುಂದಾಗುತ್ತಿವೆ.