ಬೆಂಗಳೂರು: ನಗರದಲ್ಲಿ ಸಂಚಾರ ದಟ್ಟಣೆ ಸಮಸ್ಯೆ ಹೆಚ್ಚಾಗ್ತಾ ಇದೆ. ಟ್ರಾಫಿಕ್ (Bengaluru Traffic) ಕಡಿಮೆ ಮಾಡಲು ಸರ್ಕಾರ ನಾನಾ ಯೋಜನೆ, ಕಾಮಗಾರಿಗಳನ್ನ ಮಾಡ್ತಾ ಇದೆ. ಅದರಲ್ಲೂ ಇತ್ತಿಚೆಗೆ ಚರ್ಚೆಗೆ ಇರುವ ವಿಚಾರ ಅಂದರೆ ಅದು ಹೆಬ್ಬಾಳದ ಬಳಿ ಎರಡೂವರೆ ಸಾವಿರ ಕೋಟಿ ವೆಚ್ಚದಲ್ಲಿ ಟನಲ್ ನಿರ್ಮಾಣ. ಅದರ ಜೊತೆಗೆ ಈಗ ಯಶವಂತಪುರ, ಗೊರುಗುಂಟೆ ಪಾಳ್ಯದಲ್ಲಿ ಟನಲ್ (Tunnel) ನಿರ್ಮಿಸಲು ಪೀಸಿಬಲ್ ವರದಿ ಸಿದ್ದಪಡಿಸಲಾಗ್ತಿದ್ಯಂತೆ.
Advertisement
ಗೊರಗುಂಟೆ ಪಾಳ್ಯದ ಬಳಿ ಮೆಟ್ರೋ ಹಾದು ಹೊಗಿರುವ ಕಾರಣ ಟನಲ್ ನಿರ್ಮಾಣ ಮಾಡಬೇಕಾ ಅಥವಾ ಫ್ಲೈಓವರ್ ಮಾಡಬೇಕಾ ಎಂಬ ಚರ್ಚೆ ನಡೀತಿದೆ. ಸುಮನಹಳ್ಳಿ ವರೆಗೂ ಕೂಡ ಡಬಲ್ ರಸ್ತೆ ಸೇರಿದಂತೆ ನಾನಾ ರೀತಿಯಲ್ಲಿ ಆಲೋಚನೆ ನಡೆಯುತ್ತಾ ಇದೆ. ಆದರೆ ಯಶವಂತಪುರ ಮತ್ತು ಗೊರಗುಂಟೆ ಪಾಳ್ಯದಲ್ಲಿ ಟ್ರಾಫಿಕ್ ಜಾಸ್ತಿ ಆಗ್ತಿದ್ದು ಟ್ರಾಫಿಕ್ ಮುಕ್ತಿಗೆ ಬೇರೆ ಮಾರ್ಗ ಕಂಡುಕೊಳ್ಳಬೇಕಿದೆ.
Advertisement
Advertisement
ಗೊರಗುಂಟೆ ಪಾಳ್ಯ ಮತ್ತು ಯಶವಂತಪುರದಲ್ಲಿ ಟನಲ್ ನಿರ್ಮಾಣ ಚರ್ಚಾ ಹಂತದಲ್ಲಿದ್ದು, ಎಷ್ಟು ಕಿಲೋ ಮೀಟರ್ವರೆಗೆ ಆಗಲಿದೆ. ವೆಚ್ಚ ಎಷ್ಟು ಆಗಲಿದೆ. ಯಾವಾಗ ಆರಂಭ ಅಂತಾ ಕಾದು ನೋಡಬೇಕಿದೆ. ಇದನ್ನೂ ಓದಿ: ಬೆಂಗಳೂರು ವಿವಿಗೆ ಪಿಎಂ ಉಷಾ ಯೋಜನೆಯಡಿ 100 ಕೋಟಿ ಅನುದಾನ ಘೋಷಣೆ