ಮಂಡ್ಯ: ಕೊನೆಗೂ ಮಂಡ್ಯ ಜಿಲ್ಲೆಯ ರೈತರ (Mandya Farmers) ಒತ್ತಡಕ್ಕೆ ಮಣಿದು ರಾಜ್ಯ ಸರ್ಕಾರ ಬೆಳೆ ರಕ್ಷಣೆಗಾಗಿ ನಾಲೆಗಳಿಗೆ KRS ಜಲಾಶಯದಿಂದ ನೀರು ಬಿಡುಗಡೆ ಮಾಡಿದೆ. ಈ ಮೂಲಕ ನೀರಿಲ್ಲದೇ ಒಣಗುತ್ತಿದ್ದ ಕಬ್ಬು, ಭತ್ತದ ಬೆಳೆಗಳ ರಕ್ಷಣೆಗೆ ಸರ್ಕಾರ ಮುಂದಾಗಿದೆ.
ಕಳೆದ 15 ದಿನಗಳಿಂದ ನಾಲೆಗಳಿಗೆ ಕಾವೇರಿ ನೀರಾವರಿ ನಿಗಮ ನೀರು ನಿಲ್ಲಿಸಿತ್ತು. ಡ್ಯಾಂನಲ್ಲಿ 82 ಅಡಿಗೆ ನೀರಿನ ಮಟ್ಟ ಕುಸಿದಿದ್ದರಿಂದ ನಾಲೆಗಳಿಗೆ ನೀರು ಹರಿಸದಿರಲು ಅಧಿಕಾರಿಗಳು ನಿರ್ಧರಿಸಿದ್ದರು. ಸದ್ಯ ಡ್ಯಾಂನಲ್ಲಿ ಸಂಗ್ರಹವಿರುವ 12 TMC ನೀರಲ್ಲಿ 5 ಟಿಎಂಸಿ ನೀರು ಮಾತ್ರ ಬಳಕೆಗೆ ಯೋಗ್ಯವಾಗಿದೆ. ಹೀಗಾಗಿಯೇ ಕುಡಿಯುವ ನೀರಿಗೆ ಮೀಸಲಿಡುವ ಉದ್ದೇಶದಿಂದ ಅಧಿಕಾರಿಗಳು ನಾಲೆಗಳಿಗೆ ನೀರು ಹರಿಸದಿರಲು ನಿರ್ಧರಿಸಿದ್ದರು.
ನಾಲೆಯಲ್ಲಿ ನೀರಿಲ್ಲದೆ, ಅತ್ತ ಮಳೆಯೂ ಇಲ್ಲದೇ ಸಾವಿರಾರು ಎಕರೆ ಪ್ರದೇಶದ ಕಬ್ಬು, ಭತ್ತದ ಬೆಳಗೆಗಳು ಒಣಗುತ್ತಿದ್ದು, ರೈತರು ಆತಂಕದಲ್ಲಿದ್ದರು. ನಾಲೆಗಳಿಗೆ ನೀರು ಕೊಡದಿದ್ರೆ ಬೀದಿಗಳಿದು ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದರು. ಇದನ್ನೂ ಓದಿ: ಬಾಲಕನನ್ನು ಕೊಂದು ತಿಂದ ಮೊಸಳೆಯನ್ನೇ ಥಳಿಸಿ ಹತ್ಯೆಗೈದ್ರು- ವೀಡಿಯೋ ವೈರಲ್
ರೈತರು ಬೀದಿಗಿಳಿಯುವ ಮುನ್ನವೇ ಎಚ್ಚೆತ್ತ ಸರ್ಕಾರ ನಾಲೆಗಳಿಗೆ ನೀರು ಹರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದೆ. ಸರ್ಕಾರದ ನಿರ್ದೇಶನದಂತೆ ಅಧಿಕಾರಿಗಳು ಮಂಗಳವಾರ ರಾತ್ರಿಯೇ ನಾಲೆಗಳಿಗೆ ನೀರು ಹರಿಸಿದ್ದಾರೆ. ನಾಲೆಗೆ ನೀರು ಬಿಡುತ್ತಿದ್ದಂತೆ ಮಂಡ್ಯ ಜಿಲ್ಲೆಯ ರೈತರು ಹರ್ಷಗೊಂಡಿದ್ದಾರೆ. ಇದನ್ನೂ ಓದಿ: EDಯಿಂದ ತಮಿಳುನಾಡು ಅಬಕಾರಿ ಸಚಿವ ಅರೆಸ್ಟ್ – ಕಾರಿನಲ್ಲಿ ಭಾರೀ ಹೈಡ್ರಾಮಾ, ಆಸ್ಪತ್ರೆಗೆ ಶಿಫ್ಟ್