ಬೆಂಗಳೂರು: ಲೋಕಾಯುಕ್ತ ಕಚೇರಿಯಲ್ಲಿ ನ್ಯಾ. ವಿಶ್ವನಾಥ್ ಶೆಟ್ಟಿ ಅವರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ ಆರೋಪಿ ತೇಜರಾಜ್ ಸರ್ಕಾರಿ ಅಧಿಕಾರಿಗಳು ನಡೆಸುತ್ತಿದ್ದ ಹಲವು ಅಕ್ರಮಗಳ ವಿರುದ್ಧ ದೂರು ದಾಖಲಿಸಿದ್ದು, ಈ ಪ್ರಕರಣಗಳಲ್ಲೇ ತೇಜರಾಜ್ ರನ್ನು ಸಿಲುಕಿಸುವ ಪ್ರಯತ್ನ ನಡೆಸಲಾಗಿತ್ತು ಎಂಬ ಮಾಹಿತಿ ಮೂಲಗಳಿಂದ ಪಬ್ಲಿಕ್ ಟಿವಿಗೆ ಲಭಿಸಿದೆ.
Advertisement
ಆರೋಪಿ ತೇಜರಾಜ್ ಕಳೆದ ಆರು ಏಳು ತಿಂಗಳಿನಿಂದ ಲೋಕಾಯುಕ್ತ ಕಚೇರಿಯಲ್ಲಿ ಕೆಲ ಆಕ್ರಮಗಳ ವಿರುದ್ಧ ದೂರು ದಾಖಲಿಸಿದ್ದ. ಈ ವೇಳೆ ತೇಜರಾಜ್ ಬ್ಲಾಕ್ ಮೇಲ್ ಮಾಡುತ್ತಿದ್ದಾನೆ ಎಂದು ಆರೋಪಿಸಿ ಆತನ ಖಾತೆಗೆ ದೂರುದಾರರು 50 ಸಾವಿರ ರೂ. ಹಣವನ್ನು ಹಾಕಿದ್ದರು. ಈ ಪ್ರಕರಣದಲ್ಲಿ ತನ್ನನ್ನು ಸಿಲುಕಿಸಲು ಖಾತೆಗೆ ಹಣ ಹಾಕಿದ್ದಾರೆ ಎಂದು ಲೋಕಾಯುಕ್ತರಲ್ಲಿ ತೇಜ್‍ರಾಜ್ ಮನವಿ ಮಾಡಿದ್ದ. ಇದನ್ನೂ ಓದಿ: ದೂರುಗಳ ಮೇಲೆ ದೂರು ಕೊಟ್ಟರೂ ಪ್ರಯೋಜನ ಆಗಿಲ್ಲ- ಪೊಲೀಸ್ ಮುಂದೆ ತಪ್ಪೊಪ್ಪಿಕೊಂಡ ತೇಜರಾಜ್
Advertisement
ಪ್ರಕರಣದಲ್ಲಿ ತಾನೂ ದೂರು ನೀಡಿದ ಅಧಿಕರಿಗಳ ಕೈ ಮೇಲಾಗುತ್ತಿದೆ ಎನ್ನುವುದನ್ನು ತಿಳಿದು ಮಾನಸಿಕ ಖಿನ್ನತೆಗೆ ತೇಜರಾಜ್ ಜಾರಿದ್ದ. ಅಲ್ಲದೇ ಪ್ರಕರಣಗಳ ವಿರುದ್ಧ ತನಿಖೆ ನಡೆಸಿ ಕ್ರಮಕೈಗೊಳ್ಳಲು ತೇಜರಾಜ್ ಹಲವು ಬಾರಿ ಲೋಕಾಯುಕ್ತ ಕಚೇರಿಗೆ ಪದೇ ಪದೇ ಭೇಟಿ ನೀಡಿ ಮನವಿ ಮಾಡಿದ್ದ. ಈ ಪ್ರಕರಣಗಳನ್ನು ಗಂಭೀರ ವಾಗಿ ಪರಿಗಣಿಸದ ಕಾರಣ ಕೋಪಗೊಂದು ಇಂದು ಮಧ್ಯಾಹ್ನ ಚಾಕುವಿನಿಂದ ಇರಿದಿದ್ದಾನೆ. ಇದನ್ನೂ ಓದಿ: ಇದು ಸರ್ಕಾರ ಏನ್ರೀ? ಮೊದಲು ಈ ಸರ್ಕಾರ ತೊಲಗಬೇಕು: ಮಾಜಿ ಉಪಲೋಕಾಯುಕ್ತ ಚಂದ್ರಶೇಖರಯ್ಯ