ಚಿತ್ರದುರ್ಗ: ಆಕೆ ಹೆಸರಿಗೆ ತಕ್ಕಂತೆ ಸ್ಪರದ್ರೂಪಿ ಸುಂದರಿ. ಕೋಟೆನಾಡಿನ ಕುಷ್ಟರೋಗ ನಿಯಂತ್ರಣಾಧಿಕಾರಿ. ಮನೆಯಲ್ಲಿ ದಿಢೀರ್ ಅಂತ ಆಕಸ್ಮಿಕವಾಗಿ ಬಿದ್ದು ಸಾವಿಗೀಡಾಗಿದ್ದಾರೆಂಬ ಸುದ್ದಿ ಹರಡಿತ್ತು. ಆದರೆ ಪೋಸ್ಟ್ ಮಾರ್ಟಂ (Post Mortem) ವೇಳೆ ಆಕೆಯ ತಲೆಯಲ್ಲಿದ್ದ ರಿವಾಲ್ವರ್‌ನ ಗುಂಡು ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ನೀಡಿದೆ.
Advertisement
ಮೃತಳನ್ನು ಡಾಕ್ಟರ್ ರೂಪ ಎಂದು ಗುರುತಿಸಲಾಗಿದೆ. ಚಿತ್ರದುರ್ಗ ಜಿಲ್ಲಾಸ್ಪತ್ರೆ (Chitradurga District Hospital) ಯಲ್ಲಿ ಕುಷ್ಟರೋಗ ನಿಯಂತ್ರಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತಿದ್ರು. ಇವರ ಪತಿ ರವಿ ಕೂಡ ಮೂಳೆರೋಗ ತಜ್ಞರಾಗಿದ್ದು, ವಿಪಿ ಬಡಾವಣೆಯಲ್ಲಿ ಖಾಸಗಿ ಕ್ಲಿನಿಕ್ ನಡೆಸುತ್ತಿದ್ದಾರೆ. ದಂಪತಿ ಸಹ ಕೋಟೆನಾಡಿನ ಮಂದಿಗೆ ಅಚ್ಚುಮೆಚ್ಚಿನವರಾಗಿದ್ದು, ಡಾ.ರೂಪ ಸದಾ ಹಸನ್ಮುಖಿಯಾಗಿ ಇರುತ್ತಿದ್ದರು. ಎಲ್ಲರೊಂದಿಗೆ ಸ್ನೇಹಜೀವಿಯಾಗಿದ್ರು.
Advertisement
Advertisement
ಆದರೆ ಮೊನ್ನೆ ರೂಂನಲ್ಲಿನ ಶೆಲ್ಪ್ ಗೆ ತಲೆಬಡಿಸಿಕೊಂಡ ಪರಿಣಾಮ ತೀವ್ರ ರಕ್ತಸ್ರಾವವಾಗಿ ಸಾವಿಗೀಡಾಗಿದ್ದಾರೆಂದು ಅವರ ಪತಿ ಡಾಕ್ಟರ್ ರವಿ ಎಲ್ಲರಿಗೂ ತಿಳಿಸಿದ್ರು. ಇದನ್ನೇ ನಂಬಿದ್ದ ಪೊಲೀಸರು ರೂಪ ಮೃತದೇಹವನ್ನು ಪೋಸ್ಟ್ ಮಾರ್ಟಂಗೆ ಕಳಿಸಿದ್ರು. ಆಗ ರೂಪ ತಲೆಯಲ್ಲಿದ್ದ ರಿವಾಲ್ವರ್ ನ ಗುಂಡು ಕಂಡ ಪೊಲೀಸರು ಶಾಕ್ ಆಗಿದ್ದಾರೆ. ಹೀಗಾಗಿ ರೂಪ ಅವರ ಸಹೋದರ ಇದೊಂದು ಮರ್ಡರ್ ಅಂತ ಪೊಲೀಸರಿಗೆ ದೂರು ನೀಡಿರುವ ಪರಿಣಾಮ ಎಚ್ಚೆತ್ತ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಇದನ್ನೂ ಓದಿ: 47 ವರ್ಷದ ಹೋರಾಟದ ಬಳಿಕ ದತ್ತಪೀಠದಲ್ಲಿ ನೆರವೇರಿತು ಹಿಂದೂ ಅರ್ಚಕರಿಂದ ಪೂಜೆ
Advertisement
ಪ್ರಕರಣ ದಾಖಲಿಸಿಕೊಂಡ ಚಿತ್ರದುರ್ಗ ನಗರ ಠಾಣೆ ಪೊಲೀಸರು ಪ್ರಕರಣದ ಬೆನ್ನತ್ತಿದಾಗ ಮೃತಳ ಕೊಠಡಿಯಲ್ಲಿ ಡೆತ್‍ನೋಟ್ ಸಿಕ್ಕಿದೆ. ಅದರಲ್ಲಿ ನನ್ನ ಸಾವಿಗೆ ನಾನೇ ಕಾರಣ ಎಂಬುದನ್ನು ಆಕೆ ಬರೆದಿದ್ದಾರೆ. ಹೃದಯಾಘಾತ (Heart Attack) ದಿಂದ ರೂಪ ಸಾವನ್ನಪ್ಪಿದ್ರು ಅಂತ ತಿಳಿಸಿ, ಪೊಲೀಸರಿಗೆ ಮಾಹಿತಿ ನೀಡಬೇಡಿ ಎಂದು ಬರೆದಿದರು ಎನ್ನಲಾಗ್ತಿದೆ. ಆದರೆ ಈ ಬಗ್ಗೆ ರೂಪ ಅವರ ಗಂಡ ಡಾಕ್ಟರ್ ರವಿಗೆ ಕೇಳಿದಾಗ ಹೇಳೋದೇ ಬೇರೆ.
ಒಟ್ಟಾರೆ ಚಿತ್ರದುರ್ಗ ಜಿಲ್ಲಾಸ್ಪತ್ರೆಯ ಸ್ನೇಹಜೀವಿ ಡಾ.ರೂಪ ದಿಢೀರ್ ಅಂತ ಸಾವನ್ನಪ್ಪಿದ್ದಾರೆ. ಅದರಲ್ಲೂ ರಿವಾಲ್ವರ್ ನ ಗುಂಡು ಅವರ ತಲೆಯಲ್ಲಿ ಪತ್ತೆಯಾದ ಪರಿಣಾಮ ಅವರ ಸಾವಿನ ಸುತ್ತ ಅನುಮಾನದ ಹುತ್ತ ಮನೆಮಾಡಿದೆ.