ಬೆಂಗಳೂರು: ಕಲಬುರಗಿ (Kalaburagi), ಬೆಳಗಾವಿ (Belagavi), ಬಳ್ಳಾರಿ ಹಾಗೂ ಬೆಂಗಳೂರು (Bengaluru) ಸೇರಿದಂತೆ ರಾಜ್ಯದ 11 ಐಪಿಎಸ್ (IPS) ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಸರ್ಕಾರ (Government Of Karnataka) ಆದೇಶ ಹೊರಡಿಸಿದೆ.
Advertisement
ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರು ಹಾಗೂ ಪ್ರಿನ್ಸಿಪಲ್ ಸೆಕ್ರೇಟರಿ ಆಗಿದ್ದ ಮಾಲಿನಿ ಕೃಷ್ಣ ಮೂರ್ತಿ ಅವರನ್ನು ಐಎಸ್‌ಡಿ ಹೆಚ್ಚುವರಿ ಪೊಲೀಸ್ (Police) ಮಹಾ ನಿರ್ದೇಶಕರಾಗಿ ವರ್ಗಾಯಿಸಲಾಗಿದೆ. ಎಸಿಬಿ (ACB) ಸೀಮಂತ್ ಕುಮಾರ್ ಸಿಂಗ್ ಅವರನ್ನ ಕೆಎಸ್‌ಆರ್‌ಪಿ (KSRP) ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ. ಇದನ್ನೂ ಓದಿ: ಮತ್ತೆ ಟೀಂ ಇಂಡಿಯಾ ಸೇರಲಿದ್ದಾರೆ ಜಡೇಜಾ
Advertisement
Advertisement
ಕೆಎಸ್‌ಆರ್‌ಪಿ ಐಜಿಪಿ (IGP) ಆಗಿದ್ದ ಎಸ್.ರವಿ ಅವರನ್ನು ಪೊಲೀಸ್ ಅಂಡ್ ಪ್ರಿನ್ಸಿಪಲ್ ಸೆಕ್ರಟೆರಿ ಆಗಿ ವರ್ಗಾಯಿಸಲಾಗಿದೆ. ಅಜಯ್ ಹಿಲೋರಿ ಅವರನ್ನ ಡಿಸಿಆರ್‌ಇ (DCRE) ಪೊಲೀಸ್ ಅಧೀಕ್ಷಕರಾಗಿ ವರ್ಗಾವಣೆ ಮಾಡಿದೆ. ಇದನ್ನೂ ಓದಿ: ಮೋರ್ಬಿ ಸೇತುವೆ ದುರಂತ, 9 ಮಂದಿ ಅರೆಸ್ಟ್ – ಟೆಂಡರ್ ಪಡೆದು ಇನ್ನೊಂದು ಕಂಪನಿಯಿಂದ ರಿಪೇರಿ
Advertisement
ಇನ್ನುಳಿದಂತೆ ಎಸಿಬಿ ಪೊಲೀಸ್ ಅಧೀಕ್ಷಕರಾಗಿದ್ದ ಯತೀಶ್ ಚಂದ್ರ ಅವರನ್ನ ಡಿಸಿಪಿ-2 ಅಪರಾಧ ವಿಭಾಗಕ್ಕೆ, ಕಲಬುರಗಿ ಜಿಲ್ಲೆಯ ಎಸಿಬಿ ಎಸ್ಪಿ ಆಗಿದ್ದ ವೈ ಅಮರನಾಥ ರೆಡ್ಡಿ ಅವರನ್ನ ಗುಪ್ತಚರ ದಳದ ಅಧೀಕ್ಷಕರಾಗಿ, ಎಸಿಬಿ ಎಸ್ಪಿ ಆಗಿದ್ದ ಡಾ.ಶೋಭಾರಾಣಿ ಅವರನ್ನ ಬೆಂಗಳೂರಿನ ಬಿಎಂಟಿಎಫ್ ಆಗಿ, ಎಸಿಬಿ ಎಸ್ಪಿ ಆಗಿದ್ದ ವಿ.ಜಿ ಸುಜೀತ್, ಬಳ್ಳಾರಿ ಎಸಿಬಿ ಎಸ್ಪಿ ಆಗಿದ್ದ ಬಿ.ಎಲ್. ಶ್ರೀಹರಿ ಬಾಬು ಹಾಗೂ ವಿಜಯಪುರದ ಹೆಚ್ಚುವರಿ ಎಸ್ಪಿ ಆಗಿದ್ದ ರಾಮ್ ಎಲ್ ಅರಸಿದ್ದಿ ಅವರನ್ನ ಲೋಕಾಯುಕ್ತ ಎಸ್ಪಿ ಆಗಿ ವರ್ಗಾಯಿಸಿದರೆ, ಬೆಳಗಾವಿ ಎಸಿಬಿ ಎಸ್ಪಿ ಆಗಿದ್ದ ಬಾಬಸಾಬ್ ನೇಮಗೌಡ್ ಅವರನ್ನು ಬೆಳಗಾವಿ ಗುಪ್ತಚರ ದಳದ ಅಧೀಕ್ಷರಾಗಿ ನೇಮಿಸಿ ಆದೇಶ ಹೊರಡಿಸಿದೆ.