ಬೆಂಗಳೂರು: ಕೊರೊನಾ ವೈರಸ್ ನಿಯಂತ್ರಿಸುವ ಸಲುವಾಗಿ ಬಿಬಿಎಂಪಿಯ 8 ವಲಯಗಳಿಗೆ ರಾಜ್ಯ ಸರ್ಕಾರ ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿಗಳನ್ನು ನೇಮಕ ಮಾಡಿದೆ.
ಪಾಲಿಕೆ ವ್ಯಾಪ್ತಿಯಲ್ಲಿ ಅಹಿತಕರ ಘಟನೆಗಳು ಸಂಭವಿಸದಂತೆ ದಂಡಾಧಿಕಾರಿಗಳು ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುತ್ತಾರೆ. 1973 ಪಕ್ರಿಯೆ ಸಂಹಿತೆ, ಕೇಂದ್ರ ಅಧಿನಿಯಮ 2/1974 ಸೆಕ್ಷನ್ 21ರಡಿ ಅಧಿಕಾರ ಚಲಾಯಿಸಿ ಈ ಅಧಿಕಾರಿಗಳ ನೇಮಕ ಮಾಡಲಾಗಿದೆ. ಕೊರೊನಾ ವಿರುದ್ಧದ ಹೋರಾಟಕ್ಕೆ ಅಡ್ಡಿ ಪಡಿಸುವವರಿಗೆ ಶಿಕ್ಷಿಸುವ ಅಧಿಕಾರವನ್ನು ಈ ದಂಡಾಧಿಕಾರಿಗಳಿಗೆ ನೀಡಲಾಗಿದೆ. ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿ ಸ್ಥಾನಮಾನ ನೀಡಿ ಆದೇಶ ಹೊರಡಿಸಲಾಗಿದೆ.
ಜಂಟಿ ಆಯುಕ್ತರಾದ ಕೆ.ಆರ್ ಪಲ್ಲವಿ, ವೀರಭದ್ರಸ್ವಾಮಿ, ಜಗದೀಶ್ ಎಂ. ರಾಮಕೃಷ್ಣ, ವೆಂಕಟಾಚಲಪತಿ, ಎನ್. ಚಿದಾನಂದ, ಡಾ.ಅಶೋಕ್, ನರಸಿಂಹಮೂರ್ತಿ, ಕೆಐಎಡಿಬಿ ಅಧಿಕಾರಿ ವಿಜಯಕುಮಾರ್ ಅವರಿಗೆ ವಿಶೇಷ ದಂಡಾಧಿಕಾರಿ ಸ್ಥಾನಮಾನ ನೀಡಲಾಗಿದೆ.