ಅಂಕಾರ/ಬೆಂಗಳೂರು: ಭೀಕರ ಭೂಕಂಪದಿಂದಾಗಿ (Earthquake) ನಲುಗಿರುವ ಟರ್ಕಿ (Turkey) ಹಾಗೂ ಸಿರಿಯಾ (Syria) ದೇಶಗಳಲ್ಲಿ ಇಲ್ಲಿಯವರೆಗೆ ಸಾವಿನ ಸಂಖ್ಯೆ 15 ಸಾವಿರಕ್ಕೆ ಏರಿಕೆಯಾದೆ. ಈ ನಡುವೆ ಟರ್ಕಿಯಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗೆ ಕರ್ನಾಟಕ ಸರ್ಕಾರ (Government Of Karnataka) ಮುಂದಾಗಿದೆ.
ಟರ್ಕಿ, ಸಿರಿಯಾ ಅವಘಡದಲ್ಲಿ ಸಿಲುಕಿದ ಕನ್ನಡಿಗರ ರಕ್ಷಣೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದಿಂದ ನೋಡೆಲ್ ಅಧಿಕಾರಿಗಳನ್ನ ನೇಮಕ ಮಾಡಲಾಗಿದೆ. ಟರ್ಕಿ, ಸಿರಿಯಾ ರಾಯಭಾರ ಕಚೇರಿಗಳೊಂದಿಗೆ ಸಂಪರ್ಕಿಸಿ ಕನ್ನಡಿಗರ ಮಾಹಿತಿ ಪಡೆಯಲು ಸರ್ಕಾರದಿಂದ ಸೂಚನೆ ನೀಡಿದೆ.
ಸುಮಾರು 3,000 ಭಾರತೀಯರು ಟರ್ಕಿಯಲ್ಲಿ ವಾಸವಿದ್ದು, ಅವರಲ್ಲಿ 75 ಜನರು ಸಹಾಯವನ್ನು ಕೋರಿ ಕರೆ ಮಾಡಿರುವುದಾಗಿ ಸಚಿವಾಲಯ ತಿಳಿಸಿದೆ. ಇದನ್ನೂ ಓದಿ: ಟರ್ಕಿ ಮಾರಣಾಂತಿಕ ಭೂಕಂಪ – ಬೆಂಗಳೂರಿನ ಕಂಪನಿಯ ಉದ್ಯೋಗಿ ನಾಪತ್ತೆ
ಟರ್ಕಿಯಲ್ಲಿ ಸಿಲುಕಿರೋದು ಬೆಂಗಳೂರು ಟಿಕ್ಕಿಯಲ್ಲ: ಟರ್ಕಿಯಲ್ಲಿ ಸಿಲುದ್ದಾರೆ ಎನ್ನಲಾದ ಟೆಕ್ಕಿ ಬೆಂಗಳೂರಿನ (Bengaluru Techie) ವ್ಯಕ್ತಿಯಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಆತ ಬೇರೆ ರಾಜ್ಯದಿಂದ ಬಂದು ಬೆಂಗಳೂರಿನ ಕಂಪನಿಯೊಂದರಲ್ಲಿ ಕೆಲಸ ಮಾಡ್ತಿದ್ದ. ಅದೇ ಕಂಪನಿಯಿಂದ ಬ್ಯುಸಿನೆಸ್ ಟ್ರಿಪ್‌ಗಾಗಿ ಟರ್ಕಿಗೆ ತೆರಳಿದ್ದ, ಕಳೆದ ವಾರವಷ್ಟೇ ಬೆಂಗಳೂರು ಕಂಪನಿ ಪರವಾಗಿ ಪ್ರವಾಸ ಕೈಗೊಂಡಿದ್ದ ಎನ್ನಲಾಗಿದೆ.
ಸದ್ಯ ಭಾರತ ಸರ್ಕಾರ (Government Of India) ಈ ವ್ಯಕ್ತಿ ಪತ್ತೆಗೆ ಮುಂದಾಗಿದೆ. ಇಲ್ಲಿ ತನಕ ವ್ಯಕ್ತಿ ನಾಪತ್ತೆ ಬಗ್ಗೆ ವಿಪತ್ತು ನಿರ್ವಹಣಾ ಸಹಾಯವಾಣಿಗೆ ಯಾವುದೇ ಕರೆಗಳು ಬಂದಿಲ್ಲ ಎಂದು ರಾಜ್ಯ ವಿಪತ್ತು ನಿರ್ವಹಣಾ ಇಲಾಖೆ `ಪಬ್ಲಿಕ್ ಟಿವಿ’ಗೆ ಮಾಹಿತಿ ನೀಡಿದೆ. ಇದನ್ನೂ ಓದಿ: ಪಾಕ್‌ನಲ್ಲಿ ಪರಸ್ಪರ ಡಿಕ್ಕಿಯಾಗಿ ಆಳವಾದ ಕಂದರಕ್ಕೆ ಉರುಳಿದ ಬಸ್, ಕಾರು – 30 ಮಂದಿ ದುರ್ಮರಣ
ಇದೇ ತಿಂಗಳ ಫೆಬ್ರವರಿ 6ರ ನಸುಕಿನ ಜಾವದಲ್ಲಿ ಟರ್ಕಿಯಲ್ಲಿ 7.8 ತೀವ್ರತೆಯ ಭೂಕಂಪ ಸಂಭವಿಸಿದೆ. ಕಳೆದ ಮೂರು ದಿನಗಳಲ್ಲಿ 5 ಬಾರಿ ಸತತವಾಗಿ ಭೂಕಂಪ ಸಂಭವಿಸಿದ್ದು ಸಾವಿನ ಸಂಖ್ಯೆ 15 ಸಾವಿರಕ್ಕೆ ತಲುಪಿದೆ. ಈಗಾಗಲೇ ವಿಶ್ವಸಂಸ್ಥೆ ಸಾವಿನ ಸಂಖ್ಯೆ 20 ಸಾವಿರಕ್ಕೆ ಏರಿಕೆಯಾಗಬಹುದು ಎಂದು ಎಚ್ಚರಿಕೆ ನೀಡಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k