– ಪೊಲೀಸರಿಂದ ತನಿಖೆ ಎಚ್.ಕೆ. ಪಾಟೀಲ್
ಬೆಂಗಳೂರು: ಬೆಳಗಾವಿ ಜೈನಮುನಿ (Belagavi Jain Monk) ಕೊಲೆ ಪ್ರಕರಣ ವಿಧಾನ ಪರಿಷತ್ನಲ್ಲಿ (Vidhana Parishad) ಸದ್ದು ಮಾಡಿತು. ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಅಂತ ವಿಪಕ್ಷ ಬಿಜೆಪಿ ಪಟ್ಟು ಹಿಡೀತು. ಆದರೆ ಸರ್ಕಾರ ಮಾತ್ರ ಸಿಬಿಐ ತನಿಖೆ (CBI Investigation) ಇಲ್ಲ ಅಂತ ಹೇಳಿ ಪೊಲೀಸರ ತನಿಖೆ ಮಾಡಿಸಲಾಗುತ್ತೆ ಅಂತ ತಿಳಿಸಿತು.
Advertisement
ಬೆಳಗ್ಗೆ ಅಧಿವೇಶನ ಪ್ರಾರಂಭ ಆದ ಕೂಡಲೇ ಬಿಜೆಪಿ (BJP) ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ (Kota Srinivas Poojary) ನಿಲುವಳಿ ಸೂಚನೆಗೆ ಮುಂದಾದರು. ಕೂಡಲೇ ಸಭಾಪತಿಗಳು ನಿಯಮ 68ರ ಅಡಿ ಚರ್ಚೆಗೆ ಅವಕಾಶ ಕೊಡೋದಾಗಿ ಹೇಳಿದ್ರು. ಬಳಿಕ ಪ್ರಶ್ನೋತ್ತರ ಕಲಾಪದ ವೇಳೆ ನಿಯಮ 68ರ ಅಡಿ ಚರ್ಚೆಗೆ ಅವಕಾಶ ನೀಡಲಾಯ್ತು.
Advertisement
ಈ ವೇಳೆ ಮಾತನಾಡಿದ ಬಿಜೆಪಿಯ ಕೋಟಾ ಶ್ರೀನಿವಾಸ ಪೂಜಾರಿ, ಜೈನ ಮುನಿ ಕೊಲೆ ಪ್ರಕರಣ ತಲ್ಲಣಗೊಳಿಸಿದೆ. ಅಹಿಂಸೆ ಧರ್ಮ ಅನ್ನೋರ ಕೊಲೆ ಆಗಿದೆ.ವಿದ್ಯುತ್ ಶಾಕ್ ಕೊಟ್ಟು, 9 ತುಂಡು ಮಾಡಿದ್ದಾರೆ. ಸರ್ಕಾರ ಈ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿಲ್ಲ. ನಿನ್ನೆಯವರೆಗೂ ಸಿಎಂ, ಗೃಹ ಸಚಿವರು ಸ್ಥಳಕ್ಕೆ ಹೋಗಿಲ್ಲ. ಜೈನಮುನಿ ಕೊಲೆ ಪ್ರಕರಣ ಸಿಬಿಐಗೆ ವಹಿಸಬೇಕು ಅಂತ ಒತ್ತಾಯ ಮಾಡಿದರು.
Advertisement
Advertisement
ಬಿಜೆಪಿ ರವಿಕುಮಾರ್ (Ravi kumar) ಮಾತನಾಡಿ, ಅತ್ಯಂತ ಸರಳ ಸ್ವಾಮಿಗಳು ಇವರು. ಇಂತಹ ಜೈನಮುನಿ ಬರ್ಬರ ಹತ್ಯೆ ಆಗಿದೆ. 6 ಲಕ್ಷ ಹಣ ವಾಪಸ್ ಕೇಳಿದ್ದಕ್ಕೆ ಕೊಲೆ ಆಗಿದೆ ಅಂತ ಪೊಲೀಸ್ ಹೇಳಿದ್ದಾರೆ. ಇದನ್ನ ನಾವು ಒಪ್ಪಲ್ಲ. ತನಿಖೆ ಆಗದೇ ಹೀಗೆ ಪೊಲೀಸರು ಹೇಳೋದು ಎಷ್ಟು ಸರಿ. ಪೊಲೀಸರ ಈ ಹೇಳಿಕೆ ಎಷ್ಟು ಸರಿ? ಸ್ನೇಹಿತರು ಕೊಲೆಗೆ ಸಹಾಯ ಮಾಡಿದ್ದಾರೆ ಅಂತ ಆರೋಪಿ ಹೇಳಿದ್ದಾನೆ. ಅವರ ಬಂಧನ ಕೂಡಾ ಆಗಬೇಕು ಎಂದರು. ಇದನ್ನೂ ಓದಿ: ಎಲ್ಲಾ ಜೈನ ಮುನಿಗಳಿಗೂ ರಕ್ಷಣೆ ಕೊಡಬೇಕು: ಸುನಿಲ್ ಕುಮಾರ್ ಒತ್ತಾಯ
ತೆಲಂಗಾಣ ಸಿಎಂ ಅತ್ಯಾಚಾರಕ್ಕೆ ಸಂಬಂಧಿಸಿದ ಒಂದು ಕೇಸ್ ನಲ್ಲಿ ಕ್ರಮ ತೆಗೆದುಕೊಂಡಿದ್ರು. ಯಾರು ಕೊಲೆ ಮಾಡಿದ್ದಾರೆ ಅವರನ್ನ ಹ್ಯಾಂಗ್ ಮಾಡಬೇಕು. ಸಿಎಂ ಸ್ಥಳಕ್ಕೆ ಹೋಗಬೇಕು. ಕೇವಲ 6 ಲಕ್ಷ ಕೇಳಿದ್ದಕ್ಕೆ ಈ ಕೊಲೆ ಆಗಿಲ್ಲ. ಹೀಗಾಗಿ ಈ ಪ್ರಕರಣದ ಸಂಪೂರ್ಣ ತನಿಖೆ ಆಗಬೇಕು. ರಾಜಕೀಯ ಬಿಟ್ಟು ಸರ್ಕಾರ ಕ್ರಮವಹಿಸಬೇಕು. ಈ ಪ್ರಕರಣದಲ್ಲಿ ಸತ್ಯ ಹೊರಬರಬೇಕಾದ್ರೆ ಸಿಬಿಐ ತನಿಖೆ ಆಗಬೇಕು ಆಗ್ರಹಿಸಿದರು.
ಬಳಿಕ ಬಿಜೆಪಿಯ ವೈಎ ನಾರಾಯಣಸ್ವಾಮಿ, ಛಲವಾದಿ ನಾರಾಯಣಸ್ವಾಮಿ, ತೇಜಸ್ವಿನಿಗೌಡ, ಹನುಮಂತ ನಿರಾಣಿ, ಸೇರಿ ಹಲವರು ಮಾತನಾಡಿ ಸಿಬಿಐ ತನಿಖೆಗೆ ಒತ್ತಾಯಿಸಿದರು. ಜೆಡಿಎಸ್ ನ ಶರವಣ, ಮರಿತಿಬ್ಬೇಗೌಡ, ಭೋಜೇಗೌಡ ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿದರು. ಕಾಂಗ್ರೆಸ್ ನ ಜಗದೀಶ್ ಶೆಟ್ಟರ್, ಪ್ರಕಾಶ್ ಹುಕ್ಕೇರಿ ಪ್ರಕರಣದಲ್ಲಿ ರಾಜಕೀಯ ಬೇಡ ಅಂತ ಪೊಲೀಸರಿಂದಲೇ ತನಿಖೆ ನಡೆಸಿ ಅಂತ ಸರ್ಕಾರದ ಪರ ಮಾತನಾಡಿದ್ರು.
ಚರ್ಚೆಗೆ ಸರ್ಕಾರದ ಪರ ಉತ್ತರ ನೀಡಿದ ಕಾನೂನು ಸಚಿವ ಎಚ್.ಕೆ. ಪಾಟೀಲ್ (H. K Patil), ಇದೊಂದು ಹೇಯಕೃತ್ಯ. ನಾಗರೀಕ ಸಮಾಜ ತಲೆ ತಗ್ಗಿಸೋ ಘಟನೆ. 6 ಲಕ್ಷ ಸಾಲದ ವಿಚಾರ ಆರೋಪಿ ಪೊಲೀಸರಿಗೆ ಹೇಳಿದ್ದು. ಅದನ್ನ ಪೊಲೀಸರು ಹೇಳಿದ್ದಾರೆ. ತನಿಖೆ ಸರ್ಕಾರ ಮಾಡಿಸುತ್ತಿದೆ. ಇದನ್ನ ಗಂಭೀರ, ವಿಶೇಷ ಪ್ರಕರಣ ಅಂತ ಡಿಎಸ್ಪಿ ನೇತೃತ್ವದ ತನಿಖೆ ಮಾಡಿಸಲಾಗ್ತಿದೆ ಅಂತ ತಿಳಿಸಿದರು.
ಈ ಕೃತ್ಯ ಮಾಡಿದ ವ್ಯಕ್ತಿಗೆ ವಿಕೃತ ಮನಸು. ಮೃತ ದೇಹವನ್ನ ಕಟ್ ಮಾಡ್ತಾರೆ ಅಂದರೆ ಅವರಿಗೆ ಮನುಷ್ಯತ್ವದ ಗುಣ ಇಲ್ಲ. ಸಿಬಿಐಗೆ ಕೊಡಬೇಕು ಅಂತ ಹೇಳಿದ್ರು. ಯಾವ ಕಾರಣಕ್ಕೆ ಸಿಬಿಐಗೆ ಕೊಡಬೇಕು ಅಂತ ಪ್ರಶ್ನೆ ಮಾಡಿದ್ರು. ನಾವು ಯಾರ ರಕ್ಷಣೆ ಮಾಡುತ್ತಿಲ್ಲ. ಬಿಜೆಪಿ ಅವಧಿಯಲ್ಲಿ ಇದ್ದ ಅಧಿಕಾರಿಗಳೇ ತನಿಖೆ ಮಾಡ್ತಿದ್ದಾರೆ. ರಾಜಕೀಯ ಬೆರೆಸದೇ ಪ್ರಕರಣವನ್ನ ಖಂಡಸಬೇಕು. ಈ ಪ್ರಕರಣವನ್ನು ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸುತ್ತೆ. ಟೆಕ್ನಾಲಜಿ ಬಳಸಿಕೊಂಡು, ನಿಷ್ಠಾವಂತ ಅಧಿಕಾರಿ ನೇಮಕ ಮಾಡಿ ಪ್ರಕರಣ ತನಿಖೆ ಮಾಡಿಸುತ್ತೇವೆ. ಯಾರನ್ನೂ ನಮ್ಮ ಸರ್ಕಾರ ರಕ್ಷಣೆ ಮಾಡಲ್ಲ. ಯಾರೇ ವ್ಯಕ್ತಿಗಳು ಇದ್ದರೂ ತನಿಖೆ ಮಾಡಿ ನ್ಯಾಯ ಕೊಡಿಸುವ ಕೆಲಸ ಮಾಡಿಸ್ತೀವಿ ಅಂತ ಸಿಬಿಐ ತನಿಖೆ ನಿರಾಕರಿಸಿದರು. ಬಳಿಕ ನಾಳೆ ಗೃಹ ಸಚಿವರು ಸ್ಪಷ್ಟ ಉತ್ತರ ಕೊಡೋದಾಗಿ ತಿಳಿಸಿದರು.
Web Stories