ಹಾಸನ: ಸಿಎಂ ಜೊತೆ ತಜ್ಞರ ಚರ್ಚೆ ನಂತರ ಆರರಿಂದ ಎಂಟು ಅಥವಾ ಒಂದರಿಂದ ಎಂಟನೇ ತರಗತಿ ಆರಂಭದ ಬಗ್ಗೆ ನಿರ್ಧಾರವಾಗಲಿದೆ ಎಂದು ಶಿಕ್ಷಣ ಸಚಿವ ಬಿ.ನಾಗೇಶ್ ತಿಳಿಸಿದ್ದಾರೆ.
ಅರಸೀಕೆರೆಯಲ್ಲಿ ಮಾತನಾಡಿದ ಅವರು, ಸಿಎಂ ಅಧ್ಯಕ್ಷತೆಯಲ್ಲಿ ಇಂದು ಟೆಕ್ನಿಕಲ್ ಟೀಂ ಮೀಟಿಂಗ್ ನಡೆಸಲಿದೆ. 23 ರಿಂದ 30 ರವರೆಗೆ ನಡೆದಿರುವ ತರಗತಿಗಳ ಬಗ್ಗೆ ತಾಂತ್ರಿಕ ಸಮಿತಿ ವರದಿ ಸಲ್ಲಿಸಲಿದೆ. ಆ ವರದಿ ಆಧಾರದ ಮೇಲೆ ಬೇರೆ ತರಗತಿ ತೆರೆಯುವ ಬಗ್ಗೆ ಆಲೋಚನೆ ಇದೆ. 9 ರಿಂದ 12ನೇ ತರಗತಿಯವರು ಶೇ.70 ರಷ್ಟು ಮಕ್ಕಳು ಹಾಜರಾಗಿದ್ದಾರೆ. ಎಲ್ಲಿಯೂ ಸಮಸ್ಯೆಯಾಗಿಲ್ಲ. ಆ ಮಾನದಂಡದ ಆಧಾರದ ಮೇಲೆ 6 ರಿಂದ 8 ಅಥವಾ 1 ರಿಂದ 8 ನೇ ತರಗತಿ ತೆರೆಯುವ ಆಲೋಚನೆ ಮಾಡುತ್ತೇವೆ. ಆನ್‍ಲೈನ್ ಎಷ್ಟು ಕಡಿಮೆ ಸಾಧ್ಯವೋ ಅಷ್ಟು ಕಡಿಮೆ ಮಾಡ್ತೀವಿ. 9 ರಿಂದ 12 ನೇ ತರಗತಿಗೆ ಒಳ್ಳೇ ರೆಸ್ಪಾನ್ಸ್ ಸಿಕ್ಕಿದೆ ಎಂದು ತಿಳಿಸಿದರು. ಇದನ್ನೂ ಓದಿ: ಶಾಲೆ ಆರಂಭಕ್ಕೆ ಗ್ರೀನ್ ಸಿಗ್ನಲ್ ಸಿಗುತ್ತಾ?
ಬಾಲಕನ ಜೊತೆ ಮಾತು
ಶೃಂಗೇರಿಯಿಂದ ತಿಪಟೂರಿಗೆ ತೆರಳುವ ಮಾರ್ಗಮಧ್ಯೆ ಅರಸೀಕೆರೆಯಲ್ಲಿ ಉದ್ಯಮಿ ದತ್ತಾತ್ರೇಯ ಅವರ ಮನೆಗೆ ಶಿಕ್ಷಣ ಸಚಿವರು ಭೇಟಿ ನೀಡಿದ್ದರು. ಈ ವೇಳೆ ದತ್ತಾತ್ರೇಯ ಅವರ ಮೊಮ್ಮಗ ಶಿಕ್ಷಣ ಸಚಿವರಿಗೆ ಯಾವಾಗ ಶಾಲೆ ಆರಂಭ ಆಗುತ್ತೆ ಎಂದು ಪ್ರಶ್ನೆ ಮಾಡಿದ್ದಾನೆ. ಈ ವೇಳೆ ಬಾಲಕನಿಗೆ ಶಾಲೆ ಯಾವಾಗ ಆರಂಭಿಸಬೇಕು ಎಂದು ಶಿಕ್ಷಣ ಸಚಿವರು ಮರು ಪ್ರಶ್ನಿಸಿದ್ದಾರೆ. ತಕ್ಷಣ ಬಾಲಕ ನಾಳೆ ಎಂದು ಉತ್ತರ ಕೊಟ್ಟಿದ್ದಾನೆ. ಅದಕ್ಕೆ ಶಿಕ್ಷಣ ಸಚಿವರು, ಗ್ಯಾರಂಟಿನಾ.. ನಾಳೆಯಿಂದ ಹೋಗ್ತೀಯಾ ನೀನು..? ಎಂದು ತಮಾಷೆ ಮಾಡಿದ್ದು ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ: ಯಾವುದೇ ಒತ್ತಡಕ್ಕೆ ಮಣಿದು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲಿಲ್ಲ: ಬಿಎಸ್‍ವೈ