ಮಂಡ್ಯ: ವಿಧವೆಯರಿಗೆ ಪೆನ್ಷನ್ ಮಾಡಿದ್ದು ಇಂದಿರಾಗಾಂಧಿ, ರೇಷನ್ ಕಾರ್ಡ್ (Ration Card) ತಂದಿದ್ದು ಇಂದಿರಾಗಾಂಧಿ ನೇತೃತ್ವದ ಕಾಂಗ್ರೆಸ್ ಸರ್ಕಾರ (Congress Government). ರೇಷನ್ ಕಾರ್ಡ್ ಕೊಟ್ಟಿದ್ದು ಬಿಜೆಪಿ, ಜೆಡಿಎಸ್ ನಿಂದ ಅಲ್ಲ ಎಂದು ಮಾಜಿ ಸಚಿವೆ ಉಮಾಶ್ರೀ (Umashree) ಹೇಳಿದ್ದಾರೆ.
ಮಂಡ್ಯ ಜಿಲ್ಲೆಯ ಕೊಪ್ಪದಲ್ಲಿ ನಡೆದ ಕಾಂಗ್ರೆಸ್ ಮಹಿಳಾ ಸಮಾವೇಶದಲ್ಲಿ ಮಾತನಾಡಿದ ಅವರು, ಉಳುವವನೇ ಭೂಮಿಯ ಒಡೆಯ ಎಂದ್ರು. ಅವರು ಇಂದು ನಮ್ಮ ಜೊತೆ ಇಲ್ಲ. ಬಡವರನ್ನ ಎಬ್ಬಿಸಿದ ಆ ತಾಯಿಯನ್ನ ನಾವು ನೆನೆಯಬೇಕು. ಮಹಾತ್ಮಗಾಂಧಿಗೆ ಗುಂಡೇಟು ಹೊಡೆದ ಜನರೇ ಇಂದಿರಾಗಾಂಧಿ ಕೊಂದರು. ಆ ತಾಯಿಗೆ 18 ಗುಂಡುಗಳನ್ನ ಹೊಡೆದ್ರು. ಇಡೀ ದೇಶದ ಜನರಿಂದ ಕಣ್ಣೀರ ಕೋಡಿ ಹರಿಯಿತು. ಅಂತಹ ನಾಯಕಿಯನ್ನ ನಾವು ಇಂದು ನೆನಪಿಸಿಕೊಳ್ಳಬೇಕು ಎಂದರು. ಇದನ್ನೂ ಓದಿ: ರೈಲ್ವೆ ಪ್ಲಾಟ್‌ಫಾರ್ಮ್‌ನಲ್ಲಿ ದರ್ಗಾ ಹೋಲುವ ಕಟ್ಟಡ – ತೆರವಿಗೆ ಸಂಸದ ಪತ್ರ
ಕಾಂಗ್ರೆಸ್ ಪಕ್ಷಕ್ಕೆ ಮತಹಾಕಬೇಕು. ಕೋಮುವಾದ ಸೃಷ್ಟಿಮಾಡುವ ಬಿಜೆಪಿ ಇಡೀ ದೇಶವನ್ನ ಛಿದ್ರ ಮಾಡಿಬಿಟ್ಟರು. ಬಿಜೆಪಿ ಪಕ್ಷದವರು ಜಾತಿ-ಜಾತಿ, ಧರ್ಮ ಧರ್ಮಗಳ ನಡುವೆ ನಂಜುಕಾರುವ ಆಗೆ ಮಾಡಿದ್ದಾರೆ. ಬಿಜೆಪಿ ಇರುವವರೆಗೂ ಬಡವರು, ರೈತರು ಜೀವನ ಮಾಡಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಬಿಜೆಪಿ ಸರ್ಕಾರವನ್ನ ಹಿಟ್ಲರ್ ಆಡಳಿತಕ್ಕೆ ಉಮಾಶ್ರೀ ಹೋಲಿಸಿದರು.
ಧರ್ಮ, ಸುಳ್ಳುಗಳ ಮೇಲೆ ಬಿಜೆಪಿ ಆಡಳಿತ ನಡೆಸುತ್ತಿದೆ. ಚಿಕ್ಕಮಗಳೂರಿನಲ್ಲಿ ದತ್ತಮಾಲೆ ಕಥೆ. ಮಂಡ್ಯದಲ್ಲಿ ಉರಿಗೌಡ, ನಂಜೇಗೌಡ ಕಥೆ ಕಟ್ತಾರೆ. ಇನ್ನೊಂದು ಕಡೆ ಹಿಜಬ್ ತರ್ತಾರೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತೆ ಅಂತಾ ಬಿಜೆಪಿಗೆ ಉರಿ. ಆದ್ದರಿಂದ ಜನರ ಮನಸ್ಸನಲ್ಲಿ ಕಥೆ ಕಟ್ಟಿ ಬೇರೆ ಕಡೆ ತಿರುಗಿಸುತ್ತಾರೆ ಎಂದು ಹೇಳಿದರು.
ಗೌಡರು ಬೇಡ, ಲಿಂಗಾಯರು ಬೇಕಾಗಿಲ್ಲ. ಎಲ್ಲ ಜಾತಿಗಳನ್ನ ಛಿದ್ರಮಾಡಬೇಕು, ಮತವಿಭಜನೆ ಮಾಡಬೇಕೆಂಬುದೆ ಬಿಜೆಪಿ (BJP) ತಂತ್ರ. ಬಂಡವಾಳ ಶಾಹಿಗಳನ್ನ ಮೇಲೆ ತರಲು ಈ ರೀತಿ ವಿಷಯ ತರುತ್ತಿದ್ದಾರೆ. ತೇಜಸ್ವಿ ಸೂರ್ಯ ರೈತರ ಸಾಲ ಮಾಡಿದ್ರೆ ದೇಶಕ್ಕೆ ಕಂಟಕ ಅಂತಾರೆ. ಅಯ್ಯೋ ಪುಣ್ಯಾತ್ಮ ನಿನಗೆ ಏನು ಗೊತ್ತಪ್ಪ ಎಂದು ಉಮಾಶ್ರೀ ಪ್ರಶ್ನಿಸಿದರು.