ನವದೆಹಲಿ: ಈ ಬಾರಿ ಚಳಿಗಾಲದ ಸಂಸತ್ ಅಧಿವೇಶನ ನಡೆಯೋದು ಅನುಮಾನ ಎಂದು ಹೇಳಲಾಗ್ತಿದೆ. ಇದೇನಾದ್ರೂ ನಿಜವೇ ಆದಲ್ಲಿ ಹೀಗೆ ಆಗೋದು ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿ.
ಗುಜರಾತ್-ಹಿಮಾಚಲ ಪ್ರದೇಶ ವಿಧಾಸಭೆ ಚುನಾವಣೆ, ರಾಜ್ಯದಲ್ಲಿ ಪರಿವರ್ತನೆ ಯಾತ್ರೆಗಳಲ್ಲಿ ಪ್ರಧಾನಿ ಮೋದಿ ಸೇರಿದಂತೆ ಇಡೀ ಸಂಪುಟ ಫುಲ್ ಬ್ಯುಸಿ ಇದೆ. ಕೇಂದ್ರ ಸಚಿವರು ಪುರುಸೊತ್ತು ಇಲ್ಲದಂತೆ ಪಕ್ಷದ ಪರ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಹೀಗಾಗಿ ಈ ಬಾರಿ ಚಳಿಗಾಲದ ಅಧಿವೇಶನ ನಡೆಸೋದು ಬೇಡ ಎಂಬ ನಿರ್ಧಾರಕ್ಕೆ ಬಿಜೆಪಿ ನಾಯಕರು ಬಂದಿದ್ದಾರೆ ಎನ್ನಲಾಗುತ್ತಿದೆ.
Advertisement
Advertisement
ಸಂವಿಧಾನದ ಪ್ರಕಾರ, ಎರಡು ಅಧಿವೇಶನಗಳ ನಡುವಿನ ಅಂತರ 6 ತಿಂಗಳು ಮೀರಬಾರದು. ಆದ್ರೆ ವರ್ಷದಲ್ಲಿ ಮೂರು ಬಾರಿ ಅಧಿವೇಶನ ಕರೆಯಬೇಕೆಂಬ ಕಡ್ಡಾಯ ನಿಯಮವೇನೂ ಇಲ್ಲ. ಆದ್ರೂ ಇದುವರೆಗೂ ಬಜೆಟ್ ಅಧಿವೇಶನ, ಮಳೆಗಾಲದ ಅಧಿವೇಶನ ಮತ್ತು ಚಳಿಗಾಲದ ಅಧಿವೇಶನ ನಡೆಸೋದು ಒಂದು ಸಂಪ್ರದಾಯವೇ ಆಗಿ ಹೋಗಿದೆ.
Advertisement
ಆದ್ರೆ ಈ ಬಾರಿ ಇದಕ್ಕೆ ಬ್ರೇಕ್ ಬೀಳೋ ಸಾಧ್ಯತೆ ಇದೆ. ಮಳೆಗಾಲದ ಸಂಸತ್ ಅಧಿವೇಶ ಆಗಸ್ಟ್ 11ಕ್ಕೆ ಮುಗಿದಿತ್ತು. ಹೀಗಾಗಿ ಮುಂದಿನ ಅಧಿವೇಶನ ನಡೆಸೋದಕ್ಕೆ ಫೆಬ್ರವರಿವರೆಗೂ ಸರ್ಕಾರಕ್ಕೆ ಟೈಂ ಇದೆ. ಈ ಬಗ್ಗೆ ವಿಪಕ್ಷಗಳು ತಕರಾರು ತೆಗೆದಲ್ಲಿ ಡಿಸೆಂಬರ್‍ನಲ್ಲಿ 10 ದಿನ ಅಧಿವೇಶನ ಕರೆಯಲು ಸಹ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎನ್ನಲಾಗಿದೆ.
Advertisement
ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಿದ ಎರಡೂವರೆ ಲಕ್ಷ ಕೋಟಿ ರೂ. ಅನುದಾನ ಏನಾಯ್ತು: ಸಿದ್ದರಾಮಯ್ಯಗೆ ಅಮಿತ್ ಶಾ ಪ್ರಶ್ನೆ https://t.co/X5rDb5nmrH#Parivartanyatra pic.twitter.com/iarsH8pJT3
— PublicTV (@publictvnews) November 2, 2017
ಬಿಜೆಪಿ ಪರಿವರ್ತನಾ ಯಾತ್ರೆ: ವೇದಿಕೆಯ ಮೇಲೆ ರಾಜ್ಯ ನಾಯಕರಿಗೆ ಶಾ ಕ್ಲಾಸ್ https://t.co/64CC2c6xcH#Parivartanyatra #AmitShah #BJP #Bengaluru pic.twitter.com/JzZo2r2jja
— PublicTV (@publictvnews) November 2, 2017
Exclusive: ಬಿಜೆಪಿ ಪರಿವರ್ತನಾ ಯಾತ್ರೆಗೆ ಬೆದರಿದ್ರಾ ಸಿಎಂ ಸಿದ್ದರಾಮಯ್ಯ? https://t.co/npvUFwQMgw#Parivartanyatra #AmitShah #BJP #Bengaluru pic.twitter.com/TV2pw6o8si
— PublicTV (@publictvnews) November 2, 2017
ಬಿಜೆಪಿ ಪಕ್ಷ ಪಶ್ಚಾತ್ತಾಪ ಯಾತ್ರೆ ಮಾಡಿದ್ರೆ ಜನರು ನೋಡಬಹುದು: ದಿನೇಶ್ ಗುಂಡೂರಾವ್ https://t.co/EGPxQSqtjy#Parivartanyatra #BJP #Congress pic.twitter.com/2wMv2pJqCB
— PublicTV (@publictvnews) November 2, 2017