ಬೆಂಗಳೂರು: ಸರ್ಕಾರಿ ಕೆಲಸ ಸಿಗತ್ತೆ ಅಂತ ಕಾಯುತ್ತಿದ್ದವರನ್ನೇ ಬಂಡವಾಳ ಮಾಡಿಕೊಂಡು ಕೆಲಸ ಕೊಡಿಸುವುದಾಗಿ ವಂಚನೆ ಮಾಡಿದ್ದು, ಇದೀಗ ಲಕ್ಷ ಲಕ್ಷ ಲಪಟಾಯಿಸಿ ವ್ಯಕ್ತಿಯೊಬ್ಬ ಪರಾರಿಯಾಗಿದ್ದಾನೆ.
ನಯಾಜ್ ಪಾಷಾ ಸರ್ಕಾರಿ ಕೆಲಸ ಕೊಡಿಸುವುದಾಗಿ ಮೋಸ ಮಾಡಿದ್ದಾನೆ. ತಾನು ಬಿಇಎಲ್ (ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್) ಕಂಪನಿಯ ಆಡಳಿತ ನಿರ್ದೇಶಕರ ಕಾರ್ ಡ್ರೈವರ್ ಎಂದು ಹೇಳಿಕೊಂಡು ಸುಮಾರು 14 ಮಂದಿಗೆ ಪಂಗನಾಮ ಹಾಕಿದ್ದಾನೆ. 5 ಲಕ್ಷ ಹಣ ಕೊಟ್ಟರೆ ಕೆಲಸ ಕೊಡಿಸುತ್ತೇನೆ. ಮೊದಲು ಲಿಸ್ಟ್ ನಲ್ಲಿ ನಿಮ್ಮ ಹೆಸರು ಅನೌನ್ಸ್ ಆದಾಗ 1.50 ಲಕ್ಷ ಕೊಡಿ. ನೇಮಕಾತಿ ಬಳಿಕ ಬಾಕಿ ಹಣ ನೀಡುವಂತೆ ಹೇಳಿದ್ದಾನೆ. ಇತ್ತ ಕೆಲಸ ಸಿಗುತ್ತದೆ ಎಂಬ ಆಸೆಯಿಂದ ಜನ ಹಣ ಕೊಟ್ಟಿದ್ದಾರೆ. ಹಣ ಸಿಕ್ಕಿದ ಕೂಡಲೇ ಫೋನ್ ಸ್ವಿಚ್ ಆಫ್ ಮಾಡಿ ಪರಾರಿಯಾಗಿದ್ದಾನೆ.
Advertisement
Advertisement
ವಾಟ್ಸಪ್ ಮೂಲಕ ಬಿಇಎಲ್ ಫ್ಯಾಕ್ಟರಿಯ ಲೇಟರ್ ಹೇಡ್‍ನಲ್ಲಿ ನಕಲಿ ಲಿಸ್ಟ್ ತೋರಿಸಿ 2018 ನವಂಬರ್ 8ಕ್ಕೆ ಸಂದರ್ಶನಕ್ಕೆ ಅಪಾಯಿಂಟ್ ಮೆಂಟ್ ಸಿಕ್ಕಿದೆ ಎಂದು ಹಣ ಪಡೆದಿದ್ದಾನೆ. ಬಳಿಕ ನಯಾಜ್ ಮಹಿಳೆಯೊಬ್ಬಳಿಂದ ಕರೆ ಮಾಡಿಸಿ ಸಂದರ್ಶನದ ದಿನಾಂಕವನ್ನು 2019 ಜನವರಿ 29ಕ್ಕೆ ಮುಂದೂಡಲಾಗಿದೆ ಎಂದು ಸುಳ್ಳು ಹೇಳಿಸಿದ್ದನು. ನಂತರ ಜನವರಿ 28ಕ್ಕೆ ಕರೆ ಮಾಡಿದಾಗ ಫೋನ್ ಸ್ವಿಚ್ ಆಫ್ ಮಾಡಿಕೊಂಡು ಪರಾರಿಯಾಗಿದ್ದಾನೆ ಎಂದು ಹಣ ಕಳೆದುಕೊಂಡ ಗಂಗಾಧರ್ ಹೇಳಿದ್ದಾರೆ.
Advertisement
ಈ ಬಗ್ಗೆ ಅನುಮಾನ ಬಂದು ಬಿಇಎಲ್ ಫ್ಯಾಕ್ಟರಿ ಎಂ.ಡಿ ಅವರನ್ನ ಸಂಪರ್ಕಿಸಿದಾಗ ಮೋಸ ಹೋಗಿರುವುದು ಬೆಳಕಿಗೆ ಬಂದಿದೆ. ಇನ್ನೂ ನಯಾಜ್ ಇದುವರೆಗೂ 14 ಜನರಿಂದ ಸುಮಾರು 21 ಲಕ್ಷ ಹಣ ಪೀಕಿದ್ದಾನೆ. ಈ ಸಂಬಂಧ ವಂಚನೆಗೊಳಗಾದವರು ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv