ಬೆಂಗಳೂರು: ಬೃಹತ್ ಬೆಂಗಲೂರು ಮಹಾನಗರ ಪಾಲಿಕೆ ಚುನಾವಣೆ (BBMP Election) ನಡೆಸಲು ರಾಜ್ಯ ಸರ್ಕಾರ ಸಿದ್ಧವಿದೆ ಅಂತ ಕಂದಾಯ ಸಚಿವ ಅಶೋಕ್ (R Ashok) ತಿಳಿಸಿದ್ದಾರೆ.
ಬಿಬಿಎಂಪಿ ಚುನಾವಣೆ ಸಂಬಂಧ ಹೈಕೋರ್ಟ್ ಆದೇಶ ಕುರಿತು ವಿಧಾನಸೌಧ (VidhanaSoudha) ದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಹೈಕೋರ್ಟ್ ಆದೇಶ ಪೂರ್ಣ ಪ್ರತಿ ಸಿಕ್ಕಿಲ್ಲ. ಆದರೂ ಡಿಸೆಂಬರ್ 31 ರ ಒಳಗೆ ಚುನಾವಣೆ ನಡೆಸಲು ಹೇಳಿದೆ. ಮೀಸಲಾತಿ ಸರಿ ಮಾಡಿ ಅಂತಲೂ ಕೋರ್ಟ್ ಹೇಳಿದೆ. ಈ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡಿ ಮುಂದಿನ ಕ್ರಮ ತಗೋತೀವಿ ಅಂತ ತಿಳಿಸಿದರು.
Advertisement
Advertisement
ಮೀಸಲಾತಿ ಪರಿಷ್ಕರಣೆಗೆ ಕೋರ್ಟ್ ಹೇಳಿದೆ. ಇದಕ್ಕೆ ಪ್ರತ್ಯೇಕ ಸಮಿತಿ ರಚನೆ ಮಾಡಬೇಕಾ? ಅಥವಾ ಅಧಿಕಾರಿಗಳಿಂದಲೇ ಮಾಡಿಸಬೇಕಾ ಅಂತ ಸಿಎಂ ಜೊತೆ ಚರ್ಚೆ ಮಾಡಿ ಮುಂದಿನ ಕ್ರಮ ತಗೋತೀವಿ ಅಂದರು. ಇದನ್ನೂ ಓದಿ: ಸಿದ್ದು, ಡಿಕೆಶಿ ಮಧ್ಯೆ ಮುಸುಕಿನ ಗುದ್ದಾಟ – ರಾಹುಲ್ ಎದುರೇ ಒಬ್ಬರಿಗೊಬ್ಬರು ಠಕ್ಕರ್
Advertisement
Advertisement
ಸರ್ಕಾರ ಚುನಾವಣೆ ಮಾಡಲು ಹಿಂದೇಟು ಹಾಕಲ್ಲ. ಚುನಾವಣೆಗೆ ಸರ್ಕಾರ ಸಿದ್ಧವಾಗಿದೆ. ಹಿಂದುಳಿದ ವರ್ಗಕ್ಕೆ ನ್ಯಾಯ ಸಿಗಬೇಕು ಅನ್ನೋದು ಸರ್ಕಾರದ ಇಚ್ಚೆ. ಹೀಗಾಗಿ ಸಿಎಂ ಜೊತೆ ಚರ್ಚೆ ಮಾಡಿ ಹೈಕೋರ್ಟ್ (HoghCourt) ತೀರ್ಪಿನ ಪ್ರತಿ ಪೂರ್ತಿ ನೋಡಿ ಕ್ರಮ ತಗೋತೀವಿ. ಚುನಾವಣೆ ಮಾಡಲು ಸರ್ಕಾರಕ್ಕೆ ಇಚ್ಚಾಶಕ್ತಿ ಇದೆ. ಹೀಗಾಗಿ ನಾವು ಮೀಸಲಾತಿ ಪ್ರಕಟ ಮಾಡಿದ್ವಿ. ಚುನಾವಣೆ ಮಾಡಬೇಕು ಅನ್ನೋದು ಸರ್ಕಾರದ ಇಚ್ಚೆ ಅಂತ ಸ್ಪಷ್ಟಪಡಿಸಿದರು.