ಮೈಸೂರು: ಇಲ್ಲಿನ ಚಾಮುಂಡಿ ಬೆಟ್ಟದ ಬಗ್ಗೆ ರಾಜ್ಯ ಸರ್ಕಾರಕ್ಕೆ ಇರುವ ನಿರ್ಲಕ್ಷ್ಯ ಎಂಥದ್ದು ಎಂಬುದಕ್ಕೆ ಕನ್ನಡಿ ಈ ವರದಿ. ಚಾಮುಂಡಿ ಬೆಟ್ಟದ ನಂದಿ ಮಾರ್ಗದಲ್ಲಿ ಭೂ ಕುಸಿತ ಉಂಟಾಗಿ ಒಂದು ವರ್ಷ ಕಳೆದಿದೆ. ಆದರೆ ದುರಸ್ತಿ ಕಾಮಗಾರಿ ಮಾತ್ರ ಇನ್ನೂ ಶುರುವಾಗಿಲ್ಲ. ಈ ನಡುವೆ ಈ ರಸ್ತೆಯ ಮತ್ತಷ್ಟು ಭಾಗ ಬಿರುಕು ಮೂಡಿದೆ. ಅಲ್ಲಿಗೆ ಈ ಬಾರಿಯ ಅಬ್ಬರದ ಮುಂಗಾರಿನ ಎಫೆಕ್ಟ್ ನಲ್ಲಿ ಚಾಮುಂಡಿ ಬೆಟ್ಟದ ನಂದಿ ಮಾರ್ಗದ ಭಾಗ ಮತ್ತಷ್ಟು ಕುಸಿಯುವುದು ನಿಶ್ಚಿತ.
Advertisement
ಅತಿಯಾದ ಮಳೆ ಪರಿಣಾಮ ಒಂದು ವರ್ಷದ ಹಿಂದೆ ಚಾಮುಂಡಿ ಬೆಟ್ಟದ ನಂದಿ ಮಾರ್ಗ ದಲ್ಲಿ ಬೆಟ್ಟ ಕುಸಿತವಾಗಿತ್ತು. ಮೂರು ವರ್ಷದಲ್ಲಿ ಎರಡನೇ ಬಾರಿಗೆ ಅತಿ ದೊಡ್ಡ ಪ್ರಮಾಣದ ಬೆಟ್ಟ ಕುಸಿತ ಇದಾಗಿತ್ತು. ಅಂದಿನಿಂದ ನಂದಿ ದರ್ಶನಕ್ಕೆ ರಸ್ತೆ ಮಾರ್ಗದಲ್ಲಿ ಪ್ರಮಾಸಿಗರು ಹೋಗಲು ಆಗುತ್ತಿಲ್ಲ. ಈ ರಸ್ತೆಯ ದುರಸ್ತಿ ಮಳೆಗಾಲ ನಿಂತ ಕೂಡಲೇ ಮಾಡುತ್ತೇವೆ ಎಂದು ಹೇಳಿದ್ದ ಸರ್ಕಾರ ಅದನ್ನು ಮರೆತಿದೆ. ಈಗ ಕುಸಿತದ ಪ್ರದೇಶದ ಆಸು-ಪಾಸು ಕೂಡ ಇದೆ ರಸ್ತೆ ಬಿರುಕು ಬಿಟ್ಟಿದ್ದು ಈ ಬಾರಿಯ ಮುಂಗಾರಿನಲ್ಲಿ ಅದು ಕುಸಿತವಾಗುವುದು ನಿಶ್ಚಿತ.
Advertisement
Advertisement
ಮಳೆಗಾಲ ಮುಗಿದು ಬಿರು ಬೇಸಿಗೆ ಬಂದು ಮತ್ತೆ ಮಳೆ ಶುರುವಾಗುತ್ತಿದ್ದರು ಕಾಮಗಾರಿ ಆರಂಭಿಸುವ ಮಾತಿರಲಿ, ಅದರ ಟೆಂಡರ್ ಪ್ರಕ್ರಿಯೆ ಪೂರ್ಣವಾಗಿಲ್ಲ. ಕುಸಿತ ಉಂಟಾದ ಪ್ರದೇಶದ ಎಡ – ಬಲದ ಭಾಗದ ರಸ್ತೆ ಸಂಪೂರ್ಣವಾಗಿ ಬಿರುಕು ಬಿಟ್ಟಿದ್ದು ಮತ್ತಷ್ಟು ಮಣ್ಣಿನ ಕುಸಿತ ಆಗುವ ಅಪಾಯ ಸೂಚಿಸುತ್ತಿದೆ. ಇದನ್ನೂ ಓದಿ: ಕೊಲ್ಲೋದೊಂದೇ ಮಾರ್ಗವಾದ್ರೆ ಬಹಳಷ್ಟು ಜನ ಬದುಕೋ ಅರ್ಹತೆ ಕಳೆದುಕೊಳ್ತಾರೆ: ಸಿ.ಟಿ ರವಿ
Advertisement
ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ತಜ್ಞರು ನೀಡಿರುವ ವರದಿಯಂತೆ ವೈಜ್ಞಾನಿಕ ಹಾಗೂ ನವ ತಂತಜ್ಞಾನದ ಮೂಲಕ ಕಾಮಗಾರಿ ನಡೆಸಲು ಲೋಕೋಪಯೋಗಿ ಇಲಾಖೆ 9.75 ಕೋಟಿ ರೂ. ಅಂದಾಜು ವೆಚ್ಚ ತಯಾರಿಸಿದೆ. ತಮಿಳುನಾಡಿನ ಹೊಸೂರು ಹಾಗೂ ಮಡಿಕೇರಿ ಮೂಲದ ಕಂಪನಿಗಳು ಟೆಂಡರ್‍ಗೆ ಪೈಪೋಟಿ ನಡೆಸಿದ್ದು, ಸದ್ಯ ಮಡಿಕೇರಿ ಮೂಲದ ಕಂಪೆನಿಗೆ ಟೆಂಡರ್ ಆಗಿದ್ದರೂ ಸರ್ಕಾರದಿಂದ ಇನ್ನೂ ಅನುಮೋದನೆ ಸಿಕ್ಕಿಲ್ಲ. ವರ್ಕ್ ಆರ್ಡರ್ ಇಲ್ಲದೆ ಟೆಂಡರ್ ಪಡೆದಿರುವ ಕಂಪನಿ ಕೆಲಸ ಆರಂಭಿಸಿಲ್ಲ. ಈಗ ಮುಂಗಾರು ರಾಜ್ಯಕ್ಕೆ ಆಗಮಿಸುವ ದಿನಗಣನೆ ಶುರುವಾಗಿದೆ.
ಭೂಮಿ ಕುಸಿತ ಉಂಟಾಗಿದ್ದ ಜಾಗದಲ್ಲಿ ಹೆಚ್ಚು ಮಳೆ ಸುರಿದರೆ ಭೂಮಿ ತೇವಾಂಶ ಮತ್ತೆ ಹೆಚ್ಚಾಗುತ್ತದೆ. ಈ ವೇಳೆ ಜೆಸಿಬಿ ಹಾಗೂ ಇತರ ಉಪಕರಣಗಳನ್ನು ಬಳಸಲು ಸಾಧ್ಯವಾಗುವುದಿಲ್ಲ. ಮಳೆ ಸಂಪೂರ್ಣವಾಗಿ ನಿಂತು ಭೂಮಿ ಗಟ್ಟಿಯಾದ ನಂತರವಷ್ಟೇ ಕಾಮಗಾರಿ ಆರಂಭಿಸಬೇಕಾಗುತ್ತದೆ. ಆದರೆ ಈ ಬಾರಿ ಒಂದು ತಿಂಗಳು ಮುಂಚಿತವಾಗಿ ಬೇಸಿಗೆ ಶುರುವಾಗಿದ್ದ ಹಿನ್ನೆಲೆಯಲ್ಲಿ ಮಳೆಗಾಲವೂ ಬೇಗ ಆರಂಭವಾಗುತ್ತಿದೆ. ಅಲ್ಲಿಗೆ ಈ ಬಾರಿ ಕಾಮಗಾರಿ ನಡೆಸುವುದು ಅಸಾಧ್ಯ.
ಬೆಟ್ಟದಲ್ಲಿ ಪದೇ ಪದೆ ಭೂ ಕುಸಿತ ಉಂಟಾಗದಂತೆ ತಡೆಯಲು ಹೇಗೆ ವೈಜ್ಞಾನಿಕ ವಾಗಿ ತಡೆಗೋಡೆ ಕಟ್ಟ ಬೇಕೆಂದು ವಿಜ್ಞಾನಿಗಳು ಸ್ಪಷ್ಟವಾಗಿ ವರದಿ ಕೊಟ್ಟಿದ್ದಾರೆ. ಸರ್ಕಾರದ ವಿಳಂಬ ನೀತಿ ಪರಿಣಾಮ ಈ ಬಾರಿಯ ಮುಂಗಾರಿನ ಅಬ್ಬರದಲ್ಲೂ ಚಾಮುಂಡಿ ಬೆಟ್ಟದಲ್ಲಿ ಭೂ ಕುಸಿತ ನಿಶ್ಚಿತ ಎಂಬ ಸ್ಥಿತಿಗೆ ಬಂದಿದೆ.