ಬೆಂಗಳೂರು: ಮಾಜಿ ಶಾಸಕ ಅಶೋಕ್ ಖೇಣಿ ಸಮ್ಮಿಶ್ರ ಸರ್ಕಾರದಲ್ಲಿ ನನಗೆ ಬೆಂಬಲ ನೀಡಬಾರದು ಎಂದು ಜನಗಳೇ ಅವರನ್ನೇ ಮನೆಯಲ್ಲಿ ಕೂರಿಸಿದ್ದಾರೆ ಎಂದು ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ರಾಜ್ಯಪಾಲರ ವಂದನಾ ನಿರ್ಣಯದ ಮೇಲೆ ನಡೆದ ಚರ್ಚೆಯಲ್ಲಿ ಸಿಎಂ ವಿರೋಧ ಪಕ್ಷದ ವಿರೋಧ ನಾಯಕರ ಹೇಳಿಕೆಗಳಿಗೆ ತಿರುಗೇಟು ನೀಡುತ್ತಿದ್ದರು. ಚುನಾವಣೆ ಸಂದರ್ಭದಲ್ಲಿ ತಮ್ಮ ಪ್ರತಿ ಸ್ಪರ್ಧಿಗಳ ವಿರುದ್ಧ ಮಾತನಾಡಿದ್ದಾರೆ. ಅಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜೆಡಿಎಸ್ ವಿರುದ್ಧ ಮಾತನಾಡಿದರು. ರಾಜಕಾರಣದಲ್ಲಿ ಯಾರು ಶತ್ರುಗಳಲ್ಲಿ, ಮಿತ್ರರೂ ಅಲ್ಲ. ಬದಲಾದ ಪರಿಸ್ಥಿತಿ ಮತ್ತು ಸನ್ನಿವೇಶದಲ್ಲಿ ಇಂದು ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಯಾಗಿದೆ ಎಂದು ತಿಳಿಸಿದರು.
Advertisement
ಈ ಹಿಂದೆ ನೈಸ್ ಕಂಪೆನಿಯ ಒಪ್ಪಂದವನ್ನು ರದ್ದುಗೊಳಿಸಲು ಸಂಪುಟ ಸಭೆಯನ್ನು ಕರೆದರೆ, ಬಿಜೆಪಿಯವರು 6 ಗಂಟೆಗಳ ಕಾಲ ಸಭೆಯಿಂದ ಹೊರ ನಡೆದಿದ್ದರು ಎಂದು ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು. ಈ ವೇಳೆ ಮಾಜಿ ಸಚಿವ ಎಸ್.ಆರ್.ಬೊಮ್ಮಾಯಿ ಈಗ ಖೇಣಿ ನಿಮ್ಮ ಬಳಿಯಲ್ಲಿದ್ದಾರೆ. ಇವಾಗ ನೀವೇ ಮುಖ್ಯಮಂತ್ರಿಯಾಗಿದ್ದು, ನೈಸ್ ಪ್ರಸ್ತಾಪವನ್ನು ಸಂಪುಟದಲ್ಲಿಟ್ಟು ಚರ್ಚಿಸಿ. ಈಗಲೂ ನಮ್ಮ ಮುಂದೆ ಜಯಚಂದ್ರ ವರದಿ ಇದೆ. ಆದ್ರೆ ನೈಸ್ ಪ್ರಸ್ತಾಪವನ್ನು ಸಂಪುಟದಲ್ಲಿಡಲು ನಿಮ್ಮಿಂದ ಸಾಧ್ಯವಾಗಲ್ಲ. ಅಶೋಕ್ ಖೇಣಿಗೆ ಕಾಂಗ್ರೆಸ್‍ನಿಂದ ದೊಡ್ಡ ಬೆಂಬಲವಿದೆ ಎಂದು ಟೀಕಿಸಿದರು.
Advertisement
ಬೊಮ್ಮಾಯಿ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿಎಂ, ಇನ್ನು ಕಾಲಾವಕಾಶವಿದ್ದು, ನೈಸ್ ಕಂಪೆನಿ ಪ್ರಸ್ತಾಪವನ್ನು ಸಂಪುಟದಲ್ಲಿ ಇಡುತ್ತೇವೆಯೋ ಇಲ್ಲವೋ ಎಂಬುವುದನ್ನು ಮುಂದಿನ ದಿನಗಳಲ್ಲಿ ತಿಳಿಯಲಿದೆ ಅಂತಾ ಉತ್ತರಿಸಿದರು.