ಬೆಂಗಳೂರು: ದೇಶದಲ್ಲಿ ಸತ್ಯವನ್ನು ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ನಗರದ ಅಂಬೇಡ್ಕರ್ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಚಾಲನೆ ನೀಡಿ ಮಾತನಾಡಿದ ಅವರು, ಪವರ್ ಆಫ್ ಟ್ರುತ್..ಟ್ರುತ್ ಆಫ್ ಪವರ್ ಅಗತ್ಯವಿದೆ. ಪ್ರಶ್ನಿಸುವ ಮನೋಭಾವವನ್ನು ಕೆಲಪತ್ರಿಕೋದ್ಯಮಿಗಳಿಂದ ಕಿತ್ತುಕೊಳ್ಳಲಾಗುತ್ತಿದೆ. ಸತ್ಯವನ್ನು ನಿಷ್ಪಕ್ಷಪಾತವಾಗಿ ಹೇಳುವ ಕೆಲಸ ನ್ಯಾಷನಲ್ ಹೆರಾಲ್ಡ್ ಮಾಡಲಿದೆ ಎಂದು ಅವರು ತಿಳಿಸಿದರು.
Advertisement
ಇದೊಂದು ವಿಶೇಷ ಕಾರ್ಯಕ್ರಮ. 70 ವರ್ಷದ ಇತಿಹಾಸವುಳ್ಳ ಪತ್ರಿಕೆ ಇಲ್ಲಿ ಪುನರಾರಂಭಗೊಳ್ಳುತ್ತಿರುವುದು ಹೆಮ್ಮೆ. ಸ್ವಾತಂತ್ರ, ಸಮಾನತೆ, ಸಾಮಾಜಿಕತೆ ಪತ್ರಿಕೆಯ ನೀತಿಯಾಗಿದ್ದು, ನ್ಯಾಷನಲ್ ಹೆರಾಲ್ಡ್ ಯಾವತ್ತಿದ್ದರೂ ಚಾಂಪಿಯನ್. ಕ್ವಿಟ್ ಇಂಡಿಯಾ ಚಳುವಳಿ ಸೇರಿದಂತೆ ಹಲವು ರಾಜಕೀಯ ಕಾರಣಗಳಿಂದಾಗಿ ಇದು ಸ್ಥಗಿತಗೊಂಡಿತು. ನೆಹರು ಸಂಪಾದಕರಾಗಿ ವರದಿಗಾರರಾಗಿ ಪತ್ರಿಕೆಗೆ ದುಡಿದರು. ಆದರೆ ಆದ್ರೆ ಎಂದಿಗೂ ಸಂಪಾದಕೀಯ ಮಂಡಳಿ ಮಧ್ಯ ಪ್ರವೇಶ ಮಾಡಲಿಲ್ಲ. ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಪತ್ರಿಕೆಯನ್ನ ಪುನರಾರಂಭಿಸಿದ್ದು ಮಹತ್ತರ ಕಾರ್ಯ ಎಂದು ಸಿಎಂ ಸಿದ್ದರಾಮಯ್ಯ ಶ್ಲಾಘಿಸಿದರು.
Advertisement
ಸ್ಮರಣ ಸಂಚಿಕೆಯನ್ನು ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಬಿಡುಗಡೆಗೊಳಿಸಿದರು. ಕಾರ್ಯಕ್ರಮದಲ್ಲಿ ರಾಜ್ಯಪಾಲ ವಿಆರ್ ವಾಲಾ, ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್, ಎಐಸಿಸಿ ಖಚಾಂಚಿ ಮೋತಿಲಾಲ್ ವೋರಾ ಸೇರಿದಂತೆ ಕಾಂಗ್ರೆಸಿನ ಶಾಸಕರು, ಸಂಸದರು, ಪದಾಧಿಕಾರಿಗಳು ಭಾಗಿಯಾಗಿದ್ದರು.
Advertisement
ಆರಂಭದಲ್ಲಿ ವಾರಪತ್ರಿಕೆಯಾಗಿ ಬಿಡುಗಡೆಯಾಗಲಿರುವ ನ್ಯಾಷನಲ್ ಹೆರಾಲ್ಡ್ ಒಂದೂವರೆ ತಿಂಗಳಿನಲ್ಲಿ ದಿನಪತ್ರಿಕೆಯಾಗಿ ಬದಲಾಗಲಿದೆ.
Advertisement
This Govt is forcing everyone into silence,but @NH_India has a spirit-a very strong spirit & it will not be silenced #NationalHeraldLive pic.twitter.com/ilgl7Yckwt
— Rahul Gandhi (@RahulGandhi) June 12, 2017
NH should speak the truth, "criticise the Congress whenever you feel so," @OfficeOfRG Rahul Gandhi says:India@70 #NationalHeraldLive pic.twitter.com/fAxgKdDJny
— National Herald (@NH_India) June 12, 2017
.@NH_India National Herald Commemorative Publication #NationalHeraldLive https://t.co/ZRJBsPfZNU
— National Herald (@NH_India) June 12, 2017
Hearty wishes to the editorial team of @NH_India for its resurgence in its new avtaar #NationalHeraldLive
— CM of Karnataka (@CMofKarnataka) June 12, 2017
— CM of Karnataka (@CMofKarnataka) June 12, 2017
ಪತ್ರಿಕಾರಂಗದಲ್ಲಿ ವಿಶಿಷ್ಟ ಛಾಪು ಮೂಡಿಸಿದ್ದ 'ನ್ಯಾಷನಲ್ ಹೆರಾಲ್ಡ್' ಪತ್ರಿಕೆಯ ಮರುಹುಟ್ಟಿನ ಸಂದರ್ಭದಲ್ಲಿ ಸಂಪಾದಕೀಯ ಬಳಗಕ್ಕೆ ಅಭಿನಂದನೆಗಳು #NationalHeraldLive pic.twitter.com/HmsWzrMa7G
— CM of Karnataka (@CMofKarnataka) June 12, 2017
ಬೆಂಗಳೂರಿಗೆ ಆಗಮಿಸಿದ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಎಚ್ ಎ ಎಲ್ ವಿಮಾನ ನಿಲ್ದಾಣದಲ್ಲಿ ಬರ ಮಾಡಿಕೊಂಡ ಕ್ಷಣ. pic.twitter.com/uayotZMXRO
— CM of Karnataka (@CMofKarnataka) June 12, 2017