ನಕ್ಸಲ್ ನಿಗ್ರಹ ದಳ ಸಿಬ್ಬಂದಿಗೆ ವಿಶೇಷ ಆಹಾರ ಭತ್ಯೆ ಹೆಚ್ಚಿಸಿದ ಸರ್ಕಾರ

Public TV
1 Min Read
CKM NAXAL COMBING AV 5

ಬೆಂಗಳೂರು: ನಕ್ಸಲ್ ನಿಗ್ರಹ ದಳ (ANF) ಯೋಧರು ಹಾಗೂ ಆಂತರಿಕ ಭದ್ರತಾ ವಿಭಾಗದಲ್ಲಿ ಪ್ರಶಿಕ್ಷಣಾರ್ಥಿಗಳಾಗಿ, ಕಾರ್ಯ ನಿರ್ವಹಿಸುತ್ತಿರುವ  ಪೊಲೀಸ್ ಸಿಬ್ಬಂದಿಗಳಿಗೆ,  ನೀಡಲಾಗುತ್ತಿರುವ ವಿಶೇಷ ಆಹಾರ ಭತ್ಯೆ ದರವನ್ನು ಸರ್ಕಾರ ಹೆಚ್ಚಿಸಿದೆ.

FotoJet 2 35

ಈ ಹಿಂದೆ ಕೊಡುತ್ತಿದ್ದ 130 ರೂ. ಭತ್ಯೆಯನ್ನು 300 ರೂ.ಗಳಿಗೆ ಹೆಚ್ಚಿಸಿ ಸರ್ಕಾರ ಆದೇಶ ಹೊರಡಿಸಿದೆ. ಈ ಸಂಬಂಧ, ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರು, ಆಂತರಿಕ ಭದ್ರತಾ ವಿಭಾಗ, ಸರ್ಕಾರಕ್ಕೆ ಸಲ್ಲಿಸಿದ್ದ ಕೋರಿಕೆಯನ್ನು ಪುರಸ್ಕರಿಸಿ, ಸರ್ಕಾರವು ವಿಶೇಷ ಆಹಾರ ಭತ್ಯೆಯನ್ನು ಪರಿಷ್ಕರಿಸಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ನಾಳೆಯಿಂದ ಥಿಯೇಟರ್‌ ಹೌಸ್‌ ಫುಲ್‌- ಸರ್ಕಾರದಿಂದ ಅನುಮತಿ

ವಿಶೇಷ ಆಹಾರ ಹೆಚ್ಚುವರಿ ಭತ್ಯೆ, ಎಎನ್‍ಎಫ್ ಪೊಲೀಸ್ ಸಿಬ್ಬಂದಿಗಳಿಗೆ ಹಾಗೂ ಆಂತರಿಕ ಭದ್ರತಾ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ, ಸಿಸಿಟಿ ಮತ್ತು ಗರುಡ ಪಡೆಯ ಯೋಧರಿಗೂ ಅನ್ವಯವಾಗುವಂತೆ ಆದೇಶ ಹೊರಡಿಸಲಾಗಿದೆ. ಸರ್ಕಾರ ಹೊರಡಿಸಿರುವ ಭತ್ಯೆ ಹೆಚ್ಚಳ ಆದೇಶ, ನಿಮ್ಹಾನ್ಸ್ ಆಸ್ಪತ್ರೆಯ ಆಹಾರ ತಜ್ಞರು ನಿಗದಿಪಡಿಸಿರುವ 5,600 kcal ನೀಡುವ ಪೌಷ್ಟಿಕ ಆಹಾರವನ್ನು, ಭದ್ರತಾ ಪಡೆಗಳಿಗೆ ಒದಗಿಸಲು ಸಹಾಯಕವಾಗುತ್ತದೆ ಎಂದು ಆದೇಶದಲ್ಲಿ ವಿವರಿಸಿಲಾಗಿದೆ. ಇದನ್ನೂ ಓದಿ: ಓವೈಸಿಗೆ ಝಡ್ ಮಾದರಿಯ ಭದ್ರತೆ ನೀಡಿದ ಕೇಂದ್ರ ಸರ್ಕಾರ

Share This Article
Leave a Comment

Leave a Reply

Your email address will not be published. Required fields are marked *