ನವದೆಹಲಿ: ಭಾರತದಿಂದ ಬೇರೆ ದೇಶಗಳಿಗೆ ಕೂದಲು ರಫ್ತು ಮಾಡುವುದಕ್ಕೆ ವಿದೇಶಿ ವ್ಯವಹಾರಗಳ ಮಹಾ ನಿರ್ದೇಶನಾಲಯ(ಡಿಜಿಎಫ್‍ಟಿ)ಕೆಲವು ನಿರ್ಬಂಧ ಹೇರಿದೆ.
Advertisement
ಪರವಾನಗಿ ಇರುವವರು ಅಥವಾ ಡಿಜಿಎಫ್‍ಟಿಯಿಂದ ಅನುಮತಿ ಪಡೆದವರು ಮಾತ್ರವೇ ಕೂದಲು ರಪ್ತು ಮಾಡಬಹುದು. ಕೂದಲಿನ ಕಳ್ಳಸಾಗಣೆಯನ್ನು ತಪ್ಪಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಾಗಿದೆ. ರಫ್ತುದಾರರು ಭಾರತದ ಹೊರಗೆ ಕೂದಲಿನ ಸಾಗಣೆಯನ್ನು ಕಳುಹಿಸಲು ವಿದೇಶಿ ವ್ಯಾಪಾರದ ಮಹಾನಿರ್ದೇಶನಾಲಯದಿಂದ ಅನುಮತಿ ಅಥವಾ ಪರವಾನಗಿಯನ್ನು ಪಡೆಯಬೇಕಾಗುತ್ತದೆ ಎಂದು ಡಿಜಿಎಫ್‍ಟಿ ತಿಳಿಸಿದೆ.
Advertisement
Advertisement
ದೇಶದಲ್ಲಿ ಪಶ್ಚಿಮ ಬಂಗಾಳ, ಆಂಧ್ರಪ್ರದೇಶ, ತೆಲಂಗಾಣ ಮತ್ತು ತಮಿಳನಾಡು ಅತಿ ಹೆಚ್ಚು ಕೂದಲು ರಪ್ತು ಮಡುವ ರಾಜ್ಯಗಳಾಗಿವೆ. ಭಾರತ ಈ ಆರ್ತೀಕ ವರ್ಷದ ಏಪ್ರಿಲ್-ನವೆಂಬರ್ ಅವಧಿಯಲ್ಲಿ 1 ಸಾವಿರ ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಕೂದಲು ರಫ್ತು ಮಾಡಿದೆ.
Advertisement
ಕೂದಲು ರಫ್ತುದಾರರು ಈ ಕ್ರಮವನ್ನು ಸ್ವಾಗತಿಸಿದ್ದಾರೆ. ಮ್ಯಾನ್ಮಾರ್ ಮತ್ತು ಚೀನಾದಂತಹ ದೇಶಗಳಿಗೆ ಕಚ್ಚಾ ಮಾನವ ಕೂದಲನ್ನು ಕಳ್ಳಸಾಗಣೆ ಮಾಡುವ ವಿಚಿತ್ರ ಸವಾಲನ್ನು ಎದುರಿಸುತ್ತಿದೆ ಆರೋಪಿಸಿದ್ದಾರೆ. ಇದು ಸ್ಥಳೀಯ ಕೈಗಾರಿಕೆಗಳು ಮತ್ತು ರಫ್ತುಗಳಿಗೆ ಹಾನಿಯನ್ನುಂಟುಮಾಡುತ್ತಿದೆ. ಈಗ ಈ ನಿರ್ಬಂಧದಿಂದ, ನಿಜವಾದ ರಫ್ತುದಾರರು ಮಾತ್ರ ಉತ್ಪನ್ನವನ್ನು ರಫ್ತು ಮಾಡಲು ಸಾಧ್ಯವಾಗುತ್ತದೆ. ಇದು ತಮ್ಮ ಬಹುಕಾಲದ ಬೇಡಿಕೆಯಾಗಿದೆ ಎಂದು ಮಾನವ ಕೂದಲು ಮತ್ತು ಕೂದಲಿನ ಉತ್ಪನ್ನಗಳ ತಯಾರಕರು ಮತ್ತು ರಫ್ತುದಾರರ ಸಂಘ ಆಫ್ ಇಂಡಿಯಾ ಸುನೀಲ್ ಎಮಾನಿ ಹೇಳಿದ್ದಾರೆ.