ಗದಗ: ಸರ್ಕಾರಿ ಆಸ್ಪತ್ರೆಗಳು ಅಂದರೆ ಬಡವರ ಪಾಲಿನ ಸಂಜೀವಿನಿ ಅಂತಾರೆ. ಆದರೆ ಸರ್ಕಾರಿ ವೈದ್ಯರ ನಿರ್ಲಕ್ಷ್ಯಕ್ಕೆ ರಾತ್ರಿ ಇಡೀ ಮಗು ನರಳಾಡಿರುವ ಘಟನೆ ಗದಗ ಜಿಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ.
ಜಿಲ್ಲೆ ಶಿರಹಟ್ಟಿ ಪಟ್ಟಣದ ಸಾಯಿನ್ ಕೊನಿವಾಳ ಅವರ ಮಗು ಕಟ್ಟೆ ಮೇಲಿಂದ ಬಿದ್ದು ಕೈ ಮುರಿದುಕೊಂಡಿದೆ. ಮನೆಯ ಮುಂಭಾಗದ ಕಟ್ಟೆಯ ಮೇಲೆ ಆಟವಾಡುತ್ತಾ ಕೆಳಗೆ ಬಿದ್ದಿದೆ. ಮಗುಬಿದ್ದ ತಕ್ಷಣ ಪೋಷಕರ ಶಿರಹಟ್ಟಿ ತಾಲೂಕಿನ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಅಲ್ಲಿ ಮಗುವಿನ ಕೈ ಮುರಿದಿದ್ದು ಒಂದುಕಡೆ ಆದರೆ ಶಿರಹಟ್ಟಿ ವೈದ್ಯರು ಮತ್ತೊಂದು ಕಡೆಗೆ ಕಟ್ಟು ಹಾಕಿ ಗದಗ ಜಿಮ್ಸ್ ಆಸ್ಪತ್ರೆಗೆ ಕಳುಹಿಸಿದ್ದಾರೆ.
Advertisement
Advertisement
ಬಲಗೈನ ತೊಳ(ರಟ್ಟೆ)ನ ಭಾಗದಲ್ಲಿ ಮುರಿತವಾದರೆ ಮುಂಗೈಗೆ ಬ್ಯಾಂಡೇಜ್ ಮಾಡಿ ಕಳುಹಿಸಿದ್ದಾರೆ. ಗದಗ ಜಿಮ್ಸ್ ಆಸ್ಪತ್ರೆಗೆ ಕರೆತಂದರೇ ಅಲ್ಲಿ ನೈಟ್ ಡ್ಯೂಟಿ ಡಾಕ್ಟರ್ ನಿರ್ಲಕ್ಷ್ಯ ಮಾಡಿದ್ದಾರೆ. ಆರ್ಥೊಫಿಡಿಕ್ ಡಾಕ್ಟರ್ ಮಾರ್ನಿಂಗ್ ನೋಡುತ್ತೇನೆ, ಸದ್ಯ ನೀವೆ ಚಿಕಿತ್ಸೆ ಕೊಡಿ ಎಂದು ನರ್ಸ್ ಗೆ ಹೇಳಿ ಸುಮ್ಮನಾಗಿದ್ದಾರೆ.
Advertisement
ಇತ್ತ ಶಿರಹಟ್ಟಿ ತಾಲೂಕ ಆಸ್ಪತ್ರೆ ಹಾಗೂ ಗದಗ ಜಿಮ್ಸ್ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯ ಮಗು ನರಳಾಡುವಂತಾಗಿದೆ. ಎಕ್ಸರೆ ರಿಪೋರ್ಟ್ ನಲ್ಲಿ ಶಿರಹಟ್ಟಿ ವೈದ್ಯರ ಎಡವಟ್ಟು ಬಯಲಾಗಿದೆ.