ಚಿಕ್ಕಮಗಳೂರು: ಜಿಲ್ಲೆಯ 224 ಗ್ರಾಮ ಪಂಚಾಯಿತಿ ಪಿಡಿಓಗಳ ಮೊಬೈಲ್ ನಂಬರಿಗೆ 6 ತಿಂಗಳಿಂದ ಸರ್ಕಾರ ರಿಚಾರ್ಜ್ ಮಾಡಿಸಿಲ್ಲವಂತೆ.
ಕಾಫಿನಾಡಲ್ಲಿ ಯಾವ ಪಿಡಿಓ ನಂಬರ್‌ಗೆ ಕಾಲ್ ಮಾಡಿದ್ರು ಸ್ವಿಚ್ ಆಫ್ ಎಂದೇ ಬರುತ್ತಿದೆಯಂತೆ. ಪಿಡಿಓ ಹುಡುಕಿಕೊಂಡು ಕೆಲಸ – ಕಾರ್ಯ ಬಿಟ್ಟು ಗ್ರಾಪಂ ಕಚೇರಿಗೆ ಹಳ್ಳಿಗರು ಬರ್ತಿದ್ದಾರೆ. ಗ್ಯಾರಂಟಿಗೆ ಸಾವಿರಾರು ಕೋಟಿ ರೂ. ಹಣ ಖರ್ಚು ಮಾಡುವ ಸರ್ಕಾರಕ್ಕೆ ಮೊಬೈಲ್ ರೀಚಾರ್ಜ್‍ಗೆ ಹಣವಿಲ್ಲದಂತಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಸಿಗರೇಟ್ ಪ್ಯಾಕ್, ಮಾದಕ ವಸ್ತು ಪತ್ತೆ – ಪರಪ್ಪನ ಅಗ್ರಹಾರ ಜೈಲು ವಾರ್ಡರ್ ಅರೆಸ್ಟ್
ಒಂದು ಫೋನ್‌ನಲ್ಲಿ ಆಗೋ ಕೆಲಸಕ್ಕೆ ಇಡೀ ದಿನ ಕಾಯಬೇಕಾಗಿದೆ. ಪಿಡಿಓ ಮೊಬೈಲ್ ನಂಬರ್ ಸ್ವಿಚ್ ಆಫ್ ಎಂದು ಬರುತ್ತಿದೆ. ದೂರದ ಹಳ್ಳಿಗಳಿಂದ ಸಣ್ಣಪುಟ್ಟ ಕೆಲಸಕ್ಕೂ ಕಚೇರಿಗೆ ಬರಬೇಕಿದೆ. ಕೂಡಲೇ ಅಧಿಕಾರಿಗಳ ಸರ್ಕಾರಿ ಮೊಬೈಲ್ ನಂಬರ್‌ಗೆ ರಿಚಾರ್ಜ್ ಮಾಡಿಸಬೇಕು ಎಂದು ಗ್ರಾಮಸ್ಥರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಇದನ್ನೂ ಓದಿ: 2 ಗುಂಪುಗಳ ಮಧ್ಯೆ ಮಾರಾಮಾರಿ – ಕಾಂಗ್ರೆಸ್ ಕಾರ್ಯಕರ್ತನ ಬರ್ಬರ ಹತ್ಯೆ

