ಚಿಕ್ಕಬಳ್ಳಾಪುರ: ಮಸೀದಿಗಳಲ್ಲಿ ಧ್ವನಿವರ್ಧಕಗಳ ಬಳಕೆ ವಿವಾದ ವಿಚಾರದಲ್ಲಿ ಯಾವುದೇ ಧರ್ಮದವರನ್ನು ಹತ್ತಿಕ್ಕುವ ಹಾಗೂ ಅವರ ಮನಸ್ಸಿಗೆ ನೋವು ತರುವ ಉದ್ದೇಶ ಸರ್ಕಾರಕ್ಕಿಲ್ಲ ಎಂದು ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್ ಹೇಳಿದರು.
Advertisement
ಚಿಕ್ಕಬಳ್ಳಾಪುರ ನಗರದ ಜೈಭೀಮ್ ವಸತಿ ನಿಲಯದ ಬಳಿ ಬಾಬು ಜಗಜೀವನರಾಂ ಜಯಂತಿ ಹಾಗೂ ಅಂಬೇಡ್ಕರ್ ಜಯಂತಿ ಆಚರಣೆ ಸಂಬಂಧ ಸಮುದಾಯದ ಮುಖಂಡರೊಂದಿಗೆ ಸಭೆ ನಡೆಸಿ ನಂತರ ಸುಧಾಕರ್ ಮಾಧ್ಯಮಗಳ ಜೊತೆ ಮಾತನಾಡಿದರು. ಇದನ್ನೂ ಓದಿ: ಸಿದ್ದು ಸರ್ಕಾರದಲ್ಲಿ ಗಣೇಶ ಹಬ್ಬಕ್ಕೆ ಡಿಜೆ ಬ್ಯಾನ್ ಆಗಿತ್ತು, ಈಗ ಧ್ವನಿವರ್ಧಕ ವಿರುದ್ಧ ಅಭಿಯಾನ: ಸಂಬರಗಿ
Advertisement
Advertisement
ಈ ವೇಳೆ ಸುಧಾಕರ್, ಧ್ವನಿವರ್ಧಕಗಳ ಬಳಕೆ ಹಾಗೂ ಶಬ್ದಮಾಲಿನ್ಯ ಬಗ್ಗೆ ಈಗಾಗಲೇ ನ್ಯಾಯಾಲಗಳಲ್ಲಿ ವಾದ ಪ್ರತಿವಾದಗಳಾಗಿರುವ ನಿದರ್ಶನಗಳಿವೆ. ಪರಿಸರಮಾಲಿನ್ಯದಂತೆ ಶಬ್ದಮಾಲಿನ್ಯವೂ ಇದೆ. ಶಬ್ದವೂ ಸಹ ಇಷ್ಟು ಡೆಸಿಬಲ್ ಇರಬೇಕು ಎಂಬ ನಿಯಮವಿದೆ. ಈ ವಿಚಾರ ವಿವಾದದಲ್ಲಿ ಯಾವುದೇ ಧರ್ಮದವರನ್ನು ಹತ್ತಿಕ್ಕುವ ಮನಸ್ಸು ಘಾಸಿಗೊಳಿಸುವ ಉದ್ದೇಶ ಸರ್ಕಾರಕ್ಕಿಲ್ಲ ಎಂದರು. ಇದನ್ನೂ ಓದಿ: ಮೈಕ್ ತೆಗೆಸದಿದ್ದರೆ, ನಾವೂ ಬೆಳಗ್ಗೆ 5ಕ್ಕೆ ಮಂದಿರಗಳಲ್ಲಿ ಈಶ್ವರನ ಭಜನೆ, ಓಂಕಾರ ಹಾಕಿಸುತ್ತೇವೆ: ಮುತಾಲಿಕ್
Advertisement