ಹಾವೇರಿ: ಪಂಚಮಸಾಲಿ ಮೀಸಲಾತಿ ವಿಚಾರವಾಗಿ ಸರ್ಕಾರ ಮೂರು ಬಾರಿ ಮಾತು ಕೊಟ್ಟು ತಪ್ಪಿತ್ತು. ಮಾತು ತಪ್ಪಿದ್ದಕ್ಕೆ ಜೂನ್ 27 ರಂದು ಸಿಎಂ ಬಸವರಾಜ ಬೊಮ್ಮಾಯಿಯವರ ನಿವಾಸದ ಮುಂದೆ ಒಂದು ದಿನದ ಧರಣಿ ಸತ್ಯಾಗ್ರಹ ಮಾಡಲು ಉದ್ದೇಶಿಸಲಾಗಿತ್ತು. ಆದರೆ ಸರ್ಕಾರ ಎರಡು ಬಾರಿ ನಮ್ಮ ಜೊತೆ ಮಾತುಕತೆ ನಡೆಸಿದೆ. ಹೋರಾಟದ ಕಾವು ಸರ್ಕಾರಕ್ಕೆ ಮುಟ್ಟಿದ್ದರಿಂದ ಆಯೋಗದವರನ್ನು ಅಧ್ಯಯನಕ್ಕೆ ಕಳುಹಿಸಿದೆ. ಸರ್ಕಾರ ಎರಡು ತಿಂಗಳ ಕಾಲವಕಾಶ ಕೇಳಿದೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಬಸವ ಜಯ ಮೃತ್ಯುಂಜಯ ಹೇಳಿದ್ದಾರೆ.
Advertisement
ಹಾವೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎರಡು ತಿಂಗಳಲ್ಲಿ ಸಮಾಜಕ್ಕೆ ಸಿಹಿ ಸುದ್ದಿ ಕೊಡುವುದಾಗಿ ಬಸವರಾಜ ಬೊಮ್ಮಾಯಿಯವರು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‍ರಿಗೆ ನೀಡಿದ್ದಾರೆ. ಎರಡು ತಿಂಗಳು ಕಾಲವಕಾಶ ಕೇಳಿದ್ದರಿಂದ ಸಿಎಂ ನಿವಾಸದ ಮುಂದಿನ ಒಂದು ದಿನದ ಧರಣಿ ಸತ್ಯಾಗ್ರಹವನ್ನು ಮುಂದೂಡಲಾಗಿದೆ. ಆಗಸ್ಟ್ 22ರ ಒಳಗಾಗಿ ಸರ್ಕಾರ ಸಮಾಜಕ್ಕೆ ಸಿಹಿ ಸುದ್ದಿ ಕೊಡುವುದಾಗಿ ಹೇಳಿದೆ. ಬಸವರಾಜ ಬೊಮ್ಮಾಯಿಯವರ ಮೇಲೆ ವಿಶ್ವಾಸವಿದೆ. ಸಮಾಜಕ್ಕೆ ನ್ಯಾಯ ಕೊಡುವ ಭರವಸೆ ಇದೆ. ಆಗಸ್ಟ್ 22ಕ್ಕೆ ಬಸವರಾಜ ಬೊಮ್ಮಾಯಿಯವರಿಗೆ ಶಿಗ್ಗಾಂವಿಯಲ್ಲಿ ಸನ್ಮಾನ ಸಮಾರಂಭ ಮಾಡಲಿದ್ದೇವೆ. ಬೊಮ್ಮಾಯಿಯವರಿಗೆ ರಾಜಕೀಯ ಅನಿವಾರ್ಯತೆ ಮತ್ತು ಸಮಾಜಕ್ಕೆ ಕೊಟ್ಟ ಮಾತು ಉಳಿಸಿಕೊಳ್ಳಲು ನ್ಯಾಯ ಕೊಡುತ್ತಾರೆ ಎಂಬ ವಿಶ್ವಾಸವಿದೆ. ಸಿಎಂ ಭರವಸೆ ಕೊಟ್ಟಿದ್ದಾರೆ ಅಂತಾ ನಾವು ಮೈಮರೆತು ಕೂರುವುದು ಬೇಡ. ಆಗಸ್ಟ್ 22ರವರೆಗೆ ನಾವೆಲ್ಲ ಸಮಾಜದ ಸಂಘಟನೆ ಮಾಡೋಣ ಎಂದು ಕರೆ ನೀಡಿದರು. ಇದನ್ನೂ ಓದಿ: ವಿಷಕಂಟನಂತೆ ಮೋದಿ 19 ವರ್ಷಗಳಿಂದ ಗುಜರಾತ್ ಗಲಭೆ ನೋವನ್ನು ಸಹಿಸಿಕೊಂಡಿದ್ದಾರೆ: ಅಮಿತ್ ಶಾ
Advertisement
Advertisement
ಪ್ರತಿ ಜಿಲ್ಲಾ ಪಂಚಾಯತ್ ಕ್ಷೇತ್ರದಲ್ಲಿ ಸಮಾಜ ಬಾಂಧವರ ಸಭೆ ಮಾಡಿ ಸಂಘಟನೆ ಮಾಡುತ್ತೇವೆ. ಪಂಚಮಸಾಲಿಗಳು ನಾವು ಮೂಲತಃ ಲಿಂಗಾಯಿತರು. ಒಳಪಂಗಡಗಳ ಆಧಾರದ ಮೇಲೆ ನಮಗೆ ಮೀಸಲಾತಿ ಕೇಳುತ್ತಿದ್ದೇವೆ. ಉಪಜಾತಿಗಳಿಗೆ ಸಿಗಬೇಕಾದ ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ಮಾಡುತ್ತಿದ್ದೇವೆ. ಇದರಲ್ಲಿ ಯಾವುದೇ ರೀತಿಯ ಉಪಜಾತಿ ಪಾಲಿಟಿಕ್ಸ್ ಇಲ್ಲ. ನಮ್ಮ ಜನಾಂಗಕ್ಕೆ ನನ್ನ ಮೊದಲ ಆದ್ಯತೆ. ನಮ್ಮ ಜನಾಂಗದ ನಂತರ ಎಲ್ಲ ಶೋಷಿತ ಸಮಾಜದ ಮೇಲೆ ನನ್ನ ಅಭಿಮಾನ. ರಾಜಕಾರಣ ಬೇರೆ, ಚಳುವಳಿ ಬೇರೆ. ಯಡಿಯೂರಪ್ಪ ಅವರನ್ನು ಲಿಂಗಾಯತ ನಾಯಕರು ಅಂತಾರೆ, ಅವರ ಮೇಲೆ ಗೌರವವಿದೆ. ನಾವು ಬೆಂಗಳೂರಿನಲ್ಲಿ ಹೋರಾಟ ಮಾಡಿದ್ಮೇಲೆ ಎಲ್ಲರೂ ಲಿಂಗಾಯತರಲ್ಲೇ ಪಂಚಮಸಾಲಿಗರು ಬಹುಸಂಖ್ಯಾತರು ಅನ್ನೋದು ಗೊತ್ತಾಗಿದೆ. ಪಾದಯಾತ್ರೆ ಮಾಡಿದ್ಮೇಲೆ ನಮ್ಮ ಪಂಚಮಸಾಲಿ ಸಮಾಜದ ಮುಖಂಡರು ರಾಷ್ಟ್ರನಾಯಕರಾಗಿ ಬೆಳೆದರು. ಹೋರಾಟ ಮಾಡದಿದ್ದರೆ ಬೇರೆ ಒಳಪಂಗಡಗಳ ಮುಖಂಡರನ್ನೇ ನಾವು ನಾಯಕರೆಂದುಕೊಂಡು ಹೋಗಬೇಕಾಗಿತ್ತು. ಇದನ್ನೂ ಓದಿ: ನಾವು ಬುಡಕಟ್ಟು ಸಮುದಾಯದ ಪರ ಎಂದ ಮಾಯಾವತಿ- ಬಿಎಸ್‍ಪಿಯಿಂದ ದ್ರೌಪದಿ ಮುರ್ಮುಗೆ ಬೆಂಬಲ
Advertisement
ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯ ಸ್ಥಾಪನೆ ಕುರಿತ ಸಚಿವ ಉಮೇಶ ಕತ್ತಿ ಹೇಳಿಕೆ ಕುರಿತಾಗಿ ಮಾತನಾಡಿ, ಅವರಲ್ಲಿ ನೋವಿದೆ ಮಲತಾಯಿ ಧೋರಣೆ ಆದಾಗ ಆ ನೋವು ಇರುತ್ತೆ. ಪ್ರತ್ಯೇಕ ಉತ್ತರ ಕರ್ನಾಟಕದ ಬದಲು ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಮುಂದಾಗಬೇಕು. ಸಮಗ್ರ ಕರ್ನಾಟಕಕ್ಕೆ ಅನೇಕರು ಹೋರಾಟ ಮಾಡಿದ್ದಾರೆ. ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಪ್ರತ್ಯೇಕ ಪ್ಯಾಕೇಜ್ ಘೋಷಿಸಬೇಕು ಎಂದು ಅಭಿಪ್ರಾಯಪಟ್ಟರು.
Live Tv