ಬೆಳಗಾವಿ: ಆಸ್ಪತ್ರೆಗಾಗಿ (Hospital) 60 ವರ್ಷಗಳ ಹಿಂದೆ ಭೂಮಿ ಕಳೆದುಕೊಂಡ ರೈತರಿಗೆ (Farmers) ಇನ್ನೂ ಪರಿಹಾರ ನೀಡದ ಹಿನ್ನೆಲೆ ಬೆಳಗಾವಿ (Belagavi) ಜಿಲ್ಲಾ ಆರೋಗ್ಯ ಅಧಿಕಾರಿಗಳ ಕಾರನ್ನು ಜಪ್ತಿ ಮಾಡುವಂತೆ ನ್ಯಾಯಾಲಯ ಆದೇಶಿಸಿದೆ.
ರೈತರಾದ ಫಕ್ಕೀರಪ್ಪ ತಳವಾರ, ಮಲ್ಲಿಕಾರ್ಜುನ ತಳವಾರ ಹಾಗೂ ಅಶೋಕತಾಯಿ ತಳವಾರ ಅವರು ಆಸ್ಪತ್ರೆಗಾಗಿ ಜಮೀನು ಕಳೆದುಕೊಂಡಿದ್ದರು. ಮೂರು ಜನ ರೈತರು, ನ್ಯಾಯಾಲಯದ ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ, ಪರಿಹಾರ ನೀಡಲು ವಿಳಂಬವಾದ ಹಿನ್ನೆಲೆ ಡಿಹೆಚ್‍ಓ (DHO) ಕಾರನ್ನು ಜಪ್ತಿ ಮಾಡುವಂತೆ ನ್ಯಾಯಾಲಯ (Court) ಆದೇಶಿಸಿದೆ.
ವಕೀಲರ ಸಮೇತ ರೈತರು ಬಂದು ಕಾರನ್ನು ಜಪ್ತಿ ಮಾಡಿದ್ದಾರೆ. ಜಪ್ತಿಗೆ ಬರುತ್ತಿರುವ ವಿಚಾರ ತಿಳಿದು ಚಾಲಕ ಕಾರನ್ನು ತೆಗೆದುಕೊಂಡು ಪರಾರಿಯಾಗಿದ್ದ. ಈ ವೇಳೆ ಅಧಿಕಾರಿಗಳಿಗೆ ವಕೀಲರು ಹಿಗ್ಗಾಮಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ತೀವ್ರ ತರಾಟೆಗೆ ತೆಗೆದುಕೊಳ್ಳುತ್ತಿದ್ದಂತೆ ಸಿಬ್ಬಂದಿ ಕಾರನ್ನು ತಂದುಕೊಟ್ಟಿದ್ದಾರೆ.