ಲಕ್ನೋ: ಉತ್ತರ ಪ್ರದೇಶದ ಬಾಂಡಾದಲ್ಲಿನ ವಿದ್ಯುತ್ ವಿಭಾಗದ ನೌಕರರು ತಮ್ಮ ಕಚೇರಿ ಕಟ್ಟಡದಲ್ಲೂ ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ಕುಳಿತಿರುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿವೆ.
ದೇಶದಲ್ಲಿ ವಾಹನ ಸವಾರರಿಗೆ ಹೆಲ್ಮೆಟ್ ಕಡ್ಡಾಯ. ಆದರೆ ಈ ಕಚೇರಿಯಲ್ಲಿ ಮೇಲ್ಛಾವಣಿಯಿಂದ ಉದುರುವ ಸಿಮೆಂಟ್‌ನಿಂದ ತಲೆಯನ್ನು ಸುರಕ್ಷಿತವಾಗಿ ಇಟ್ಟಿಕೊಳ್ಳಲು ವಿದ್ಯುತ್ ವಿಭಾಗದ ನೌಕರರು ಕಚೇರಿಯೊಳಗೆ ಕಡ್ಡಾಯವಾಗಿ ಹೆಲ್ಮೆಟ್ ಧರಿಸುತ್ತಿದ್ದಾರೆ.
Advertisement
Advertisement
ಈ ವಿಚಾರದ ಬಗ್ಗೆ ಮಾತನಾಡಿರುವ ಅಲ್ಲಿನ ಅಧಿಕಾರಿಯೊಬ್ಬರು, ಕಚೇರಿಯ ಕಟ್ಟಡ ಶಿಥಿಲಾವಸ್ಥೆಗೆ ತಲುಪಿದೆ. ಇದನ್ನು ದುರಸ್ತಿಗೊಳಿಸಿ ಎಂದು ಮನವಿ ಮಾಡಿದ್ದರೂ ಈ ಬಗ್ಗೆ ಇಲಾಖೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಹೀಗಾಗಿ ಮೇಲ್ಛಾವಣಿಯಿಂದ ಸಿಮೆಂಟ್ ತುಣುಕುಗಳು ಉದುರಿ ಒಂದಷ್ಟು ಸಿಬ್ಬಂದಿ ತಲೆಗೆ ಗಂಭೀರ ಗಾಯಗಳಾಗಿವೆ. ಇದಾದ ನಂತರದಲ್ಲಿ ಎಚ್ಚೆತ್ತುಕೊಂಡಿರುವ ನೌಕರರು ಕಚೇರಿಯಲ್ಲಿ ಕಡ್ಡಾಯವಾಗಿ ಹೆಲ್ಮೆಟ್ ಧರಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
Advertisement
ಕಚೇರಿಯಲ್ಲಿ ದಾಖಲೆಯನ್ನು ಇಟ್ಟುಕೊಳ್ಳಲು ಕೂಡ ಸ್ಥಳವಿಲ್ಲ. ಒಂದು ಬೀರಿನ ವ್ಯವಸ್ಥೆಯಿಲ್ಲ. ಫೈಲ್‌ಗಳು ಮಳೆ ಬಂದು ನೆನೆಯಬಾರದು ಎಂದು ಸಿಬ್ಬಂದಿ ರಟ್ಟನ್ನು ಸುತ್ತಿ ಇಟ್ಟುಹೋಗುತ್ತಿದ್ದಾರೆ. ಕಟ್ಟಡ ಯಾವಾಗ ಬೀಳುತ್ತೆ ಎಂಬುದು ಗೊತ್ತಿಲ್ಲ. ಜೀವವನ್ನು ಕೈಯಲ್ಲಿ ಇಟ್ಟುಕೊಂಡು ಅಲ್ಲಿನ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ.
Advertisement
ನಾನೂ ಎರಡು ವರ್ಷದ ಹಿಂದೆ ಈ ಕಚೇರಿಗೆ ವರ್ಗಾವಣೆ ಆಗಿ ಬಂದ ದಿನದಿಂದಲೂ ಈ ಕಚೇರಿಯಲ್ಲಿ ಇದೇ ಪರಿಸ್ಥಿತಿ ಇದೆ. ಈ ವಿಚಾರದ ಬಗ್ಗೆ ಮೇಲಿನ ಅಧಿಕಾರಿಗಳಿಗೆ ನಾವು ನಿರಂತರವಾಗಿ ದೂರು ನೀಡುತ್ತಿದ್ದೇವೆ. ಆದರೆ ಅಧಿಕಾರಿಗಳು ಈ ವಿಚಾರದ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಲ್ಲಿನ ಹಿರಿಯ ಅಧಿಕಾರಿಯೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ.