ಬೆಂಗಳೂರು: ನಗರದ ಬಿ ಖಾತಾದಾರರಿಗೆ ಸರ್ಕಾರ ಗುಡ್ ನ್ಯೂಸ್ ಕೊಟ್ಟಿದೆ. ಬಿ ಖಾತಾಗಳಿಗೂ (B Khata) ಎ ಖಾತಾದಂತೆ (A Khata) ಮಾನ್ಯತೆ ನೀಡುವ ಬಗ್ಗೆ ಕ್ಯಾಬಿನೆಟ್ ನಿರ್ಧರಿಸಿದ್ದು, ಈ ಪರಿವರ್ತನೆಯಾಗಬೇಕು ಅಂದರೆ ಒಂದಷ್ಟು ಮಾನದಂಡಗಳನ್ನ ಅನುಸರಿಸಬೇಕಾಗುತ್ತದೆ.
ಒಟ್ಟು 30 ಲಕ್ಷಕ್ಕೂ ಅಧಿಕ ಬಿ ಖಾತಾದಾರರಿದ್ದು, ಸರ್ಕಾರದ ಮಾನದಂಡಗಳನ್ನು ಅನುಸರಿಸಬೇಕಾಗುತ್ತದೆ.ಇದನ್ನೂ ಓದಿ: ಐಷಾರಾಮಿ ಮನೆಯಲ್ಲೇ ಬಾರ್, ಮಲೇಷ್ಯಾ ಹುಡುಗಿಯರು – ಉದ್ಯಮಿಗಳಿಗೆ 200 ಕೋಟಿ ವಂಚಿಸಿದ್ದ ಕಿಂಗ್‌ಪಿನ್ ಅರೆಸ್ಟ್
ಹಾಗಾದ್ರೆ ಬಿ ಖಾತಾದಾರರು ಅನುಸರಿಸಬೇಕಾದ ಮಾನದಂಡಗಳೇನು?
1. ಬಿ ಖಾತದಾರರು ಖಾಸಗಿ ರಸ್ತೆಗಳನ್ನು ಸಾರ್ವಜನಿಕ ರಸ್ತೆಗಳನ್ನಾಗಿ ಘೋಷಣೆ ಮಾಡಬೇಕು.
2. ಬಿ ಖಾತಾದಾರರು ಎ ಖಾತಾ ಮಾದರಿಯಲ್ಲಿ ಸಕಲ ಸೌಲಭ್ಯ ಪಡೆಯಲು ಮಾರ್ಗಸೂಚಿ ದರ ಶೇ.5ರಷ್ಟು ಪಾವತಿ ಮಾಡಬೇಕು.
3. ಸಾವಿರ ಮಾರ್ಗಸೂಚಿ ದರವಿರುವ 30*40 ಅಡಿ ನಿವೇಶನಕ್ಕೆ ಸುಮಾರು 3 ಲಕ್ಷ ರೂ. ಶುಲ್ಕ ಆಗಬಹುದು
4. ಬಿ ಖಾತಾ ನಿವೇಶನ ಅಥವಾ ಸೈಟ್ ಇದ್ದರೆ ಅದರ ಮುಂದಿನ ಖಾಸಗಿ ರಸ್ತೆಯನ್ನು ಸಾರ್ವಜನಿಕ ರಸ್ತೆಗಾಗಿ ಕನಿಷ್ಟ 30 ಅಡಿ ಅಗಲ ಬಿಡಬೇಕು
5. 25 ಅಡಿ ರಸ್ತೆಯಲ್ಲಿ ಬಿ ಖಾತಾ ನಿವೇಶನಗಳಿದ್ದರೆ ಕಡಿಮೆ ಇರುವ ಐದು ಅಡಿಯನ್ನು ಎರಡು ಬದಿಯ ನಿವೇಶನಗಳಿಂದ ತಲಾ ಎರಡೂವರೆ ಅಡಿ ಸಾರ್ವಜನಿಕ ರಸ್ತೆಗೆ ಜಾಗ ಬಿಡಬೇಕು
6. 30 ಅಡಿ ರಸ್ತೆ ನಿಗದಿಯಾದ ಮೇಲೆ ಬಿಬಿಎಂಪಿ ಕಾಯ್ದೆಯ ಪ್ರಕಾರ ಸಾರ್ವಜನಿಕ ರಸ್ತೆ ಎಂದು ಘೋಷಣೆ ಮಾಡಬೇಕು
7. ಈಗಾಗಲೇ ಬಿ ಖಾತಾ ಸೈಟ್‌ಗಳಲ್ಲಿ ಕಟ್ಟಡ ಕಟ್ಟಿದ್ದರೆ ಅಂತಹವರು ಸಾರ್ವಜನಿಕ ರಸ್ತೆಯನ್ನ ಘೋಷಣೆ ಮಾಡಿಕೊಳ್ಳಿ ಎಂದು ಬಿಬಿಎಂಪಿಗೆ ಪತ್ರ ಬರೆಯಬೇಕು
8. ಸಾರ್ವಜನಿಕ ರಸ್ತೆ ಜಾಗದಲ್ಲಿ ಕಟ್ಟಡ ಕಟ್ಟಿದ್ದರೆ ಅದಕ್ಕೆ ಅಳತೆ ಪ್ರಕಾರವಾಗಿ ಎಷ್ಟು ಒತ್ತುವರಿ ಮಾಡಿದೆ ಅಷ್ಟಕ್ಕೆ ಹಣ ಪಾವತಿ ಮಾಡಬೇಕು ಎಂದು ತಿಳಿಸಿದೆ.ಇದನ್ನೂ ಓದಿ: ಉತ್ತರ ಪ್ರದೇಶ| 8ರ ಬಾಲಕಿಯ ರೇಪ್ & ಕೊಲೆ ಕೇಸ್ – ಆರೋಪಿ ಎನ್‌ಕೌಂಟರ್‌ಗೆ ಬಲಿ