ಬೆಂಗಳೂರು: ಅದು ರಾಜ್ಯದ ಮೊದಲ ಲಾಕಪ್‍ಡೆತ್ ಪ್ರಕರಣ. ಅದೆಂತಹ ಕೋಲಾಹಲ ಸೃಷ್ಟಿಸಿತ್ತೆಂದರೆ ಅಂದಿನ ಸಿಎಂ ಆ ಲಾಕಪ್‍ಡೆತ್‍ನಿಂದ (Lockup Death Case) ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕಾಯ್ತು. ಶತಮಾನಗಳಷ್ಟು ಹಳೆಯದಾದ, ಸಿಎಂ ರಾಜೀನಾಮೆಗೆ ಕಾರಣವಾದ ಶೇಷಾದ್ರಿಪುರಂ ಪೊಲೀಸ್ ಸ್ಟೇಷನ್ ಬಿಲ್ಡಿಂಗ್ ಇನ್ನೂ ನೆನಪು ಮಾತ್ರ.
ಒಂದು ಲಾಕಪ್‍ಡೆತ್‍ಗೆ ಸಿಎಂ ರಾಜೀನಾಮೆ ಕೊಟ್ಟ ಇತಿಹಾಸ ಬೆಂಗಳೂರಲ್ಲೇ (Bengaluru) ಸೃಷ್ಟಿಯಾಗಿದೆ. ಅದು ಏ.9 1958ರ ಮಾತು, ಕಳ್ಳತನ ಆರೋಪದಲ್ಲಿ ಮುನಿಯಮ್ಮ ಎಂಬ ಮನೆ ಕೆಲಸದಾಕೆಯನ್ನ ಶೇಷಾದ್ರಿಪುರಂ ಪೊಲೀಸ್ರು (Seshadripuram Police Station) ಬಂಧಿಸಿದ್ದರು. ಆಕೆ ಪೊಲೀಸ್ ಠಾಣೆಯಲ್ಲಿ ಸಾವನ್ನಪ್ಪುತ್ತಾಳೆ. ಅಖಂಡ ಮೈಸೂರು ರಾಜ್ಯದ ಅಧಿವೇಶನ ನಡೆಯುತ್ತಿದ್ದಾಗ ಈ ವಿಚಾರ ಸದನದಲ್ಲಿ ಜೋರಾಗಿಯೇ ಪ್ರಸ್ತಾಪವಾಗುತ್ತದೆ. ಇದನ್ನೂ ಓದಿ: ಬಿಜೆಪಿಯಲ್ಲಿ ವಿದೂಷಕನ ಪಾತ್ರ ಮಾಡಲು ಪೈಪೋಟಿ ನಡೆಯುತ್ತಿದೆ: ರಮೇಶ್ ಬಾಬು
Advertisement
Advertisement
ಅಂದಿನ ಪ್ರಜಾ ಸೋಷಿಯಲಿಸ್ಟ್ ಪಾರ್ಟಿಯ ವಿಪಕ್ಷ ನಾಯಕ ಶಾಂತವೇರಿ ಗೋಪಾಲಗೌಡರು ಸರ್ಕಾರದ ವಿರುದ್ಧ ಕಿಡಿಕಾರಿದ್ದರು. ಪೊಲೀಸರನ್ನು ಸಮರ್ಥಿಸಿಕೊಳ್ಳಬೇಕಿದ್ದ ಗೃಹ ಸಚಿವ ಪೂಣಚ್ಚ, ವಿಪಕ್ಷದೆದರು ಸಪ್ಪೆಯಾದಾಗ ಸಿಎಂ ಎಸ್.ನಿಜಲಿಂಗಪ್ಪ ಪೊಲೀಸರಿಗೆ ಮುನಿಯಮ್ಮಳನ್ನ ಸಾಯಿಸುವ ಉದ್ದೇಶವಿರಲಿಲ್ಲ ಅಂತಾರೆ. ಪರೋಕ್ಷವಾಗಿ ಪೊಲೀಸ್ರು ಹಲ್ಲೆ ಮಾಡಿದ್ದಾರೆ ಎಂದು ಸಿಎಂ ಒಪ್ಪಿಕೊಂಡಿದ್ದಾರೆ ಅಂತಾ ವಿಪಕ್ಷಗಳು ದೊಡ್ಡ ಹುಯಿಲೆಬ್ಬಿಸ್ತಾರೆ.
Advertisement
Advertisement
ಕೇಂದ್ರದಿಂದ ಬಂದ ಸದಸ್ಯರು ಶಾಸಕರ ಅಭಿಪ್ರಾಯ ಸಂಗ್ರಹಿಸಿ ಮೇ 16 1958 ರಂದು ನಿಜಲಿಂಗಪ್ಪರನ್ನ (S.Nijalingappa) ಮುಖ್ಯಮಂತ್ರಿ ಪದವಿಯಿಂದ ಕೆಳಗಿಳಿಸಿ, ಬಿ.ಡಿ ಜತ್ತಿಯವರನ್ನ ಮುಖ್ಯಮಂತ್ರಿಯನ್ನಾಗಿ ಮಾಡ್ತಾರೆ.
ಇಷ್ಟಕ್ಕೆಲ್ಲ ಕಾರಣವಾದ ಶೇಷಾದ್ರಿಪುರಂ ಪೊಲೀಸ್ ಸ್ಟೇಷನ್ ಕಟ್ಟಡವನ್ನು ಕೆಡವಿ ಹೊಸ ಕಟ್ಟಡ ಕಟ್ಟಲು ಯೋಜನೆ ಮಾಡಲಾಗಿದೆ. ಈಗಾಗಲೆ ಪೊಲೀಸ್ ಠಾಣೆಯನ್ನ ಬೇರೆ ಕಡೆ ವರ್ಗಾವಣೆ ಮಾಡಲಾಗಿದೆ.
1893 ರಲ್ಲಿ ಮೈಸೂರಿನ ದಿವಾನರಾಗಿದ್ದ ಶೇಷಾದ್ರಿ ಅಯ್ಯರ್ ಅವರ ಹೆಸರಿನಲ್ಲಿ ನಿರ್ಮಾಣವಾದ ಏರಿಯಾವೆ ಶೇಷಾದ್ರಿಪುರ. ಸರ್ಕಾರಿ ಕಟ್ಟಡವಾಗಿದ್ದ ಈ ಬಿಲ್ಡಿಂಗ್ ಕಾಲಾಂತರದಲ್ಲಿ ಪೊಲೀಸ್ ಠಾಣೆಯಾಗಿತ್ತು. ಈ ಸ್ಟೇಷನ್‍ಗೆ ಇನ್ನೊಂದು ಇತಿಹಾಸವಿದೆ. ಇಡೀ ಬೆಂಗಳೂರಲ್ಲಿ ಯಾವುದಾದ್ರು ಸ್ಟೇಷನ್‍ನಲ್ಲಿ ಬೆಲ್ ಬಾರಿಸ್ತಿದ್ರೆ ಅದು ಶೇಷಾದ್ರಿಪುರ ಪೊಲೀಸ್ ಠಾಣೆಯಲ್ಲಿ ಮಾತ್ರ. ಸಂಜೆ 6 ಗಂಟೆಯಿಂದ ಬೆಳಗಿನ 6 ಗಂಟೆಯವರೆಗೆ ಪ್ರತೀ ಗಂಟೆಗೊಮ್ಮೆ ಬೆಲ್ ಮೊಳಗುತ್ತಿತ್ತು. ವಾಚ್ ಇಲ್ಲದ ಕಾಲದಲ್ಲಿ ಬೀಟ್ ಮಾಡ್ತಿದ್ದ ಪೊಲೀಸ್ರಿಗೆ ಇದು ಸಮಯ ತಿಳಿಯಲು ಸಹಕಾರಿಯಾಗ್ತಿತ್ತು. ಇದನ್ನೂ ಓದಿ: ತ್ರಿವೇಣಿ ಸಂಗಮದಲ್ಲಿ ನೀರು ಕುಡಿಯೋಕೂ ಯೋಗ್ಯ: ಯೋಗಿ ಆದಿತ್ಯನಾಥ್