ನವದೆಹಲಿ: ಒಂದಕ್ಕಿಂತ ಹೆಚ್ಚು ಪ್ಯಾನ್‍ಕಾರ್ಡ್‍ಗಳನ್ನ ಹೊಂದುವ ಮೂಲಕ ವಂಚನೆ ಎಸಗುವುದನ್ನ ತಡೆಯಲು ಕೇಂದ್ರ ಸರ್ಕಾರ ಈ ವರ್ಷ ಜುಲೈ 27ರವರೆಗೆ ಸುಮಾರು 11.4 ಲಕ್ಷ ಪ್ಯಾನ್‍ಕಾರ್ಡ್‍ಗಳನ್ನ ನಿಷ್ಕ್ರಿಯಗೊಳಿಸಿದೆ.
ಇನ್‍ಕಮ್ ಟ್ಯಾಕ್ಸ್ ರಿಟನ್ರ್ಸ್ ಫೈಲ್ ಮಾಡಲು ಪ್ಯಾನ್‍ಕಾರ್ಡ್‍ನೊಂದಿಗೆ ಆಧಾರ್ ನಂಬರ್ ಸಂಯೋಜನೆಯನ್ನು ಕೇಂದ್ರ ಸರ್ಕಾರ ಕಡ್ಡಾಯ ಮಾಡಿತ್ತು. ಜುಲೈ 1 ರಿಂದ ಪ್ಯಾನ್‍ಕಾರ್ಡ್ ಪಡೆಯಲು ಆಧಾರ್ ಕಡ್ಡಾಯವಾಗಿದೆ. ನಿಯಮಗಳ ಪ್ರಕಾರ ಒಬ್ಬ ವ್ಯಕ್ತಿ ಒಂದು ಪ್ಯಾನ್‍ಕಾರ್ಡ್ ಮಾತ್ರ ಹೊಂದಬಹುದಾಗಿದೆ. ಈ ಹಿಂದೆ ಸುಳ್ಳು ಮಾಹಿತಿಯುಳ್ಳ ನಕಲಿ ಪ್ಯಾನ್‍ಕಾರ್ಡ್‍ಗಳಿಗೆ ಸಂಬಂಧಿಸಿದ ಪ್ರಕರಣಗಳನ್ನ ಸರ್ಕಾರ ತನಿಖೆ ಮಾಡಿತ್ತು.
Advertisement
ನಿಮ್ಮ ಪ್ಯಾನ್‍ಕಾರ್ಡ್ ವ್ಯಾಲಿಡಿಟಿ ಚೆಕ್ ಮಾಡೋದು ಹೇಗೆ:
1. ಇನ್‍ಕಮ್ ಟ್ಯಾಕ್ಸ್ ರಿಟನ್ರ್ಸ್ ಫೈಲ್ ಮಾಡಲು ಇರುವ ಅಧಿಕೃತ ವೆಬ್‍ಸೈಟ್ incometaxindiaefiling.gov.in ಗೆ ಲಾಗ್ ಇನ್ ಆಗಬೇಕು.
Advertisement
2. ವೆಬ್‍ಸೈಟ್‍ನ ಹೋಮ್‍ಪೇಜ್‍ನಲ್ಲಿ ಎಡಬದಿಯ ಕಾಲಮ್‍ನಲ್ಲಿ ಸರ್ವೀಸಸ್ ಎಂಬ ಶೀರ್ಷಿಕೆಯಡಿಯಿರುವ ನೋ ಯುವರ್ ಪ್ಯಾನ್ ಆಯ್ಕೆಯನ್ನು ಸೆಲೆಕ್ಟ್ ಮಾಡಿ
Advertisement
Advertisement
3. ನಿಮ್ಮ ಹೆಸರು, ಲಿಂಗ, ಜನ್ಮದಿನಾಂಕ, ಪ್ಯಾನ್‍ಕಾರ್ಡ್ ನೊಂದಾಯಿಸಲು ಬಳಸಿದ ಮೊಬೈಲ್ ನಂಬರ್ ಸೇರಿದಂತೆ ಎಲ್ಲಾ ಅಗತ್ಯ ವಿವರಗಳನ್ನ ನೀಡಿ ಸಬ್‍ಮಿಟ್ ಬಟನ್ ಒತ್ತಿ. ನಿಮ್ಮ ನೊಂದಾಯಿಯ ಮೊಬೈಲ್ ನಂಬರ್‍ಗೆ ಒಂದು ಒಟಿಪಿ(ಒನ್ ಟೈಮ್ ಪಾಸ್‍ವರ್ಡ್) ಬರುತ್ತದೆ.
4. ಒಂದು ವೇಳೆ ನಿಮ್ಮ ಹೆಸರಿನಲ್ಲಿ ಒಂದಕ್ಕಿಂತ ಹೆಚ್ಚು ಪ್ಯಾನ್ ನಂಬರ್ ನೋಂದಣಿಯಾಗಿದ್ದರೆ ಒಂದು ನೋಟಿಸ್ ಪಾಪ್ ಅಪ್ ಆಗುತ್ತದೆ. “ಒಂದಕ್ಕಿಂತ ಹೆಚ್ಚು ದಾಖಲೆ ಇದೆ. ದಯವಿಟ್ಟು ಹೆಚ್ಚಿನ ಮಾಹಿತಿ ನೀಡಿ ಎಂದು ಕೇಳುತ್ತದೆ”. ನಂತರ ಹೊಸ ಪೇಜ್‍ಗೆ ನಿಮ್ಮನ್ನು ಕೊಂಡೊಯ್ದು ನಿಮ್ಮ ಪ್ಯಾನ್ ವ್ಯಾಲಿಡಿಟಿ ಬಗ್ಗೆ ತೋರಿಸುತ್ತದೆ.
5. ನಿಮ್ಮ ಪ್ಯಾನ್‍ಕಾರ್ಡ್ ಆ್ಯಕ್ಟೀವ್ ಆಗಿದ್ದರೆ ಆ್ಯಕ್ಟೀವ್ ಎಂದು ತೋರಿಸುತ್ತದೆ.
ಇದನ್ನೂ ಓದಿ: ಜಸ್ಟ್ 1 ನಿಮಿಷದಲ್ಲಿ ಪಾನ್ ಕಾರ್ಡ್ ಗೆ ಆಧಾರ್ ನಂಬರ್ ಸೇರಿಸುವುದು ಹೇಗೆ?