– ಕೊರೊನಾ ತಡೆಗೆ ಸರ್ಕಾರದ ಮಾಸ್ಟರ್ ಪ್ಲಾನ್
ಬೆಂಗಳೂರು: 21 ದಿನ ಲಾಕ್‍ಡೌನ್ ಮಾಡಿದರೂ ದಿನೇ ದಿನೇ ಕೊರೊನಾ ಸೋಂಕಿತ ಸಂಖ್ಯೆ ಹೆಚ್ಚಾಗುತ್ತಿದೆ. ಇತ್ತ ಏಪ್ರಿಲ್ 14ಕ್ಕೆ ಲಾಕ್‍ಡೌನ್ ಮುಗಿಯುತ್ತಾ, ಇಲ್ಲವಾ ಎಂದು ಜನರು ಗೊಂದಲದಲ್ಲಿದ್ದಾರೆ. ಹೀಗಾಗಿ ಕೊರೊನಾ ಸೋಂಕು ತಡೆಗೆ ಸರ್ಕಾರ ಮಾಸ್ಟರ್ ಪ್ಲಾನ್ ಮಾಡಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಲಾಕ್‍ಡೌನ್ ಸಡಿಲಿಕೆ ಆದರೂ ಕೂಡ ಸಾರ್ವಜನಿಕ ಸಾರಿಗೆ ಇರಲ್ಲ. ಅಂದರೆ ಬರೋಬ್ಬರಿ ಒಂದು ತಿಂಗಳ ಕಾಲ ಸಾರಿಗೆ ಸೇವೆ ಬಂದ್ ಮಾಡಲು ಸರ್ಕಾರ ಚಿಂತನೆ ಮಾಡುತ್ತಿದೆ ಎನ್ನಲಾಗಿದೆ. ಹೀಗಾಗಿ ಒಂದು ತಿಂಗಳು ಕಾಲ ಕೆಎಸ್ಆರ್‌ಟಿಸಿ, ಬಿಎಂಟಿಸಿ, ಮೆಟ್ರೋ, ರೈಲು ಯಾವುದೂ ಇರುವುದಿಲ್ಲ ಎಂದು ಹೇಳಲಾಗುತ್ತಿದೆ.
Advertisement
Advertisement
ಇನ್ನೂ ಆಟೋ, ಕ್ಯಾಬ್‍ಗಳ ಓಡಾಟಕ್ಕೂ ಸರ್ಕಾರ ಬ್ರೇಕ್ ಹಾಕುವುದಕ್ಕೆ ಚಿಂತನೆ ನಡೆಸಿದೆ ಎನ್ನಲಾಗಿದೆ. ತಜ್ಞರ ಮಾಹಿತಿ ಅನುಸಾರ ಸರ್ಕಾರದಿಂದ ಮುಂದಿನ ತೀರ್ಮಾನ ಕೈಗೊಳ್ಳಲಿದೆ. ಆದರೆ ಜನ ಓಡಾಡುವುದಕ್ಕೆ ಸಡಿಲಿಕೆ ಮಾಡಲು ಚಿಂತನೆ ನಡೆಸಿದೆ. ಜೊತೆಗೆ ಖಾಸಗಿಯಾಗಿ ವಾಹನ ಓಡಿಸಲು ಕೂಡ ಅವಕಾಶ ಮಾಡಿಕೊಡಲಿದೆ ಎನ್ನಲಾಗಿದೆ.
Advertisement
ಸದ್ಯಕ್ಕೆ ಇಂದಿನಿಂದ ಬೇಕರಿ, ಕಾಂಡಿಮೆಂಟ್ಸ್ ತೆರೆಯಲು ಸರ್ಕಾರ ಅವಕಾಶ ಮಾಡಿಕೊಡಲಾಗಿದೆ. ಒಂದು ವೇಳೆ ಸರ್ಕಾರ ಒಂದು ತಿಂಗಳು ಕಾಲ ಸಾರಿಗೆ ಸೇವೆಯನ್ನ ಬಂದ್ ಮಾಡಿದರೆ, ಅನಿವಾರ್ಯವಾಗಿ ಜನರು ಸಾರಿಗೆ ಸೇವೆ ಇಲ್ಲದೆ ಓಡಾಡಬೇಕಾಗುತ್ತದೆ.