CrimeLatestNational

ಪೆಟ್ರೋಲ್ ದರವನ್ನು 25 ರೂ ಕಡಿತ ಮಾಡಬಹುದು, ಆದ್ರೆ ಸರ್ಕಾರ ಮಾಡಲ್ಲ: ಚಿದಂಬರಂ

ನವದೆಹಲಿ: ಪ್ರತಿ ಲೀಟರ್ ಪೆಟ್ರೋಲ್ ದರದಲ್ಲಿ 25 ರೂ. ಕಡಿಮೆ ಮಾಡಬಹುದು. ಆದರೆ ಕೇಂದ್ರ ಸರ್ಕಾರ ಈ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ಕಾಂಗ್ರೆಸ್ ಹಿರಿಯ ನಾಯಕ ಪಿ.ಚಿದಂಬರಂ ಆರೋಪಿಸಿದ್ದಾರೆ.

ಈ ಸಂಬಂಧ ನಿತಂತರ ಟ್ವಿಟ್ ಮಾಡಿರುವ ಅವರು, ಪೆಟ್ರೋಲ್ ದರದಲ್ಲಿ ಕೇಂದ್ರ ಸರ್ಕಾರವು ಹೆಚ್ಚು ಹಣ ಉಳಿತಾಯ ಮಾಡುತ್ತಿದೆ. ಕಚ್ಚಾ ತೈಲದಲ್ಲಿ ಕೇಂದ್ರ ಸರ್ಕಾರವು ಪ್ರತಿ ಲೀಟರ್‍ಗೆ 15 ರೂ. ಉಳಿತಾಯ ಮಾಡುತ್ತಿದೆ. ಅಲ್ಲದೇ 10 ರೂ. ಅಬಕಾರಿ ಸುಂಕ ಹಾಕುತ್ತಿದೆ ಎಂದು ಅವರು ಹೇಳಿದ್ದಾರೆ.

ಪ್ರತಿ ಲೀಟರ್ ಪೆಟ್ರೋಲ್ ದರದಲ್ಲಿ 25 ರೂ. ಕಡಿಮೆ ಮಾಡಬಹುದು. ಆದರೆ ಕೇಂದ್ರ ಸರ್ಕಾರ ಇದಕ್ಕೆ ಮುಂದಾಗುತ್ತಿಲ್ಲ. ಬದಲಿಗೆ ಪತ್ರಿ ಲೀಟರ್‍ಗೆ 1 ಅಥವಾ 2 ರೂಪಾಯಿ ಇಳಿಕೆ ಮಾಡಿ ಜನರಿಗೆ ಮೋಸ ಮಾಡುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಕಳೆದ 9 ದಿನಗಳಲ್ಲಿ ಸರ್ಕಾರ ಸ್ವಾಮ್ಯದ ತೈಲ ಕಂಪೆನಿಗಳ ಪೆಟ್ರೋಲ್ ಮತ್ತು ಡೀಸೆಲ್ ದರವು ದಾಖಲೆಯ ಗರಿಷ್ಠಮಟ್ಟವನ್ನು ಮುಟ್ಟಿದೆ. ಪ್ರಸ್ತುತ ಕೇಂದ್ರ ಸರ್ಕಾರದ ಪ್ರತಿ ಲೀಟರ್ ಪೆಟ್ರೋಲ್‍ಗೆ 19.48 ರೂ ಹಾಗೂ ಪ್ರತಿ ಲೀಟರ್ ಡೀಸೆಲ್‍ಗೆ 15.33 ರೂ. ಅಬಕಾರಿ ಸುಂಕವನ್ನು ಹೇರಿದೆ.

ಜಾಗತಿಕ ತೈಲ ಬೆಲೆ ಕುಸಿತವಿದ್ದರೂ, 2014ರ ನವೆಂಬರ್‍ನಿಂದ 2016ರ ಜನವರಿ ನಡುವೆ ಕೇಂದ್ರ ಸರ್ಕಾರವು 9 ಬಾರಿ ಅಬಕಾರಿ ಸುಂಕವನ್ನು ಏರಿಸಿತ್ತು. ಆದರೆ ಕಳೆದ ಅಕ್ಟೋಬರ್ ನಲ್ಲಿ ಪ್ರತಿ ಲೀಟರ್ ಡೀಸೆಲ್ ಮತ್ತು ಪೆಟ್ರೋಲ್ ಮೇಲೆ 2 ರೂ. ಅಬಕಾರಿ ಸುಂಕವನ್ನು ಕಡಿತಗೊಳಿಸಿತ್ತು.

ಅಬಕಾರಿ ಸುಂಕವನ್ನು ಕಡಿತಗೊಳಿಸಿದ ಬಳಿಕ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳಿಗೆ ವ್ಯಾಟ್ ಅನ್ನು ಕಡಿಮೆ ಮಾಡಿ ಗ್ರಾಹಕರ ಮೇಲಿನ ಹೊರಯನ್ನು ಕಡಿಮೆ ಮಾಡುವಂತೆ ಕೇಳಿಕೊಂಡಿತ್ತು. ಈ ವೇಳೆ ಬಿಜೆಪಿ ಆಡಳಿತವಿದ್ದ ಮಹಾರಾಷ್ಟ್ರ, ಗುಜರಾತ್, ಮಧ್ಯಪ್ರದೇಶ ಮತ್ತು ಹಿಮಾಚಲ ಪ್ರದೇಶಗಳು ವ್ಯಾಟ್ ಬೆಲೆಯನ್ನು ಇಳಿಸಿತ್ತು. ಇದನ್ನು ಓದಿ: ಸದ್ಯದಲ್ಲೇ ತೈಲ ದರ ಮತ್ತಷ್ಟು ಏರಿಕೆ: ಬೆಲೆ ಏರುತ್ತಿರುವುದು ಯಾಕೆ? ರಾಜ್ಯ, ಕೇಂದ್ರದ ಪಾಲು ಎಷ್ಟು? ದರ ಇಳಿಕೆಯಾಗುತ್ತಾ?

ಕಳೆದ 15 ತಿಂಗಳಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ 11.77 ರೂ. ಹಾಗೂ ಪ್ರತಿ ಲೀಟರ್ ಡೀಸೆಲ್‍ಗೆ 15.47 ರೂ. ಅಬಕಾರಿ ಸುಂಕ ಏರಿಕೆಯಾದ ಪರಿಣಾಮ ಕೇಂದ್ರದ ಬೊಕ್ಕಸಕ್ಕೆ 2014-15ರಲ್ಲಿ 99,000 ಕೋಟಿ ರೂ. ಬಂದಿದ್ದರೆ 2016-17ರ ವೇಳೆಗೆ 2,42,000 ಕೋಟಿಗೆ ರೂ. ಹಣ ಸಂಗ್ರಹವಾಗಿದೆ.

Leave a Reply

Your email address will not be published.

Back to top button