ಬೆಂಗಳೂರು: ಸಿಎಂ ಸಿದ್ದರಾಮಯ್ಯ (CM Siddaramaiah) ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ ಬೆನ್ನಲ್ಲೇ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ (Governer Thawar Chand Gehlot) ಅವರು ಬುಲೆಟ್ ಪ್ರೂಫ್ ಕಾರನ್ನು ಬಳಸಲು ಆರಂಭಿಸಿದ್ದಾರೆ.
ಮುಡಾ (MUDA) ಪ್ರಕರಣದ ಹಿನ್ನೆಲೆ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ (Prosecution) ಅನುಮತಿ ನೀಡಿದ ಬಳಿಕ ರಾಜ್ಯದಲ್ಲಿ ಕೆಲವು ಕಡೆ ಪ್ರತಿಭಟನೆಗಳು ನಡೆಯುತ್ತಿವೆ. ಈ ಪ್ರತಿಭಟನೆಯಿಂದಾಗಿ ರಾಜ್ಯಾಪಾಲರು ಎಚ್ಚರಿಕೆಯ ನಡೆಯನ್ನು ತೋರಿಸಿದ್ದಾರೆ.ಇದನ್ನೂ ಓದಿ: MUDA Scam | ಹೊಸ ಟ್ವಿಸ್ಟ್ – ಸಿಎಂ ಪತ್ನಿ ಬರೆದ ಪತ್ರವನ್ನೇ ಅಧಿಕಾರಿಗಳು ತಿರುಚಿದ್ದಾರಾ?
ಇಷ್ಟು ದಿನ ಅವಕಾಶ ಇದ್ದರೂ ನಾರ್ಮಲ್ ಇನ್ನೋವಾ ಕಾರನ್ನು ಬಳಸುತ್ತಿದ್ದ ರಾಜ್ಯಪಾಲರು ಇದೀಗ ಬುಲೆಟ್ ಫ್ರೂಫ್ ಕಾರನ್ನು (BulletProof Car) ಬಳಸಲು ಆರಂಭಿಸಿದ್ದಾರೆ. ರಾಜ್ಯಪಾಲರು ಅಧಿಕಾರ ಸ್ವೀಕರಿಸಿದಾಗಲೇ ಬುಲೆಟ್ ಪ್ರೂಫ್ ಕಾರಿನ ವ್ಯವಸ್ಥೆ ಮಾಡಲಾಗಿತ್ತು. ಆದರೆ ಆ ಕಾರನ್ನು ವಾಪಸ್ ಕಳುಹಿಸಿದ್ದರು. ಈಗ ಮತ್ತೆ ಗುಪ್ತಚರ ಇಲಾಖೆಯಿಂದ ಸೂಚನೆ ಬಂದ ನಂತರ ಬುಲೆಟ್ ಪ್ರೂಫ್ ಕಾರಿನ ವ್ಯವಸ್ಥೆ ಮಾಡಲಾಗಿದೆ.
ಶನಿವಾರ ಮಧ್ಯಾಹ್ನ ಇಂದೋರ್‌ಗೆ ತೆರಳಿದ್ದ ರಾಜ್ಯಪಾಲರು ಮಂಗಳವಾರ ರಾತ್ರಿ ವಾಪಸಾಗಿದ್ದಾರೆ. ಇಂದು ನಡೆಯಬೇಕಿದ್ದ ಸಾರ್ವಜನಿಕ ಕಾರ್ಯಕ್ರಮವೊಂದನ್ನು ಸೇರಿ ಆ.29ರ ತನಕ ಪೂರ್ವ ನಿಗದಿಯಾಗಿದ್ದ ಎಲ್ಲಾ ಸಾರ್ವಜನಿಕ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ.ಇದನ್ನೂ ಓದಿ: ನನ್ನ ಮಕ್ಕಳನ್ನು ಗುಂಡು ಹೊಡೆದು ಸಾಯಿಸಿ – ಪೊಲೀಸರ ಮುಂದೆ ರೌಡಿಶೀಟರ್ ತಂದೆ ಅಳಲು