ಬಿಗ್ ಬಾಸ್ ಮನೆಯ (Bigg Boss Kannada 11) ಆಟ 80ನೇ ದಿನದತ್ತ ಮುನ್ನುಗ್ಗುತ್ತಿದೆ. ಇನ್ನೂ ಸ್ನೇಹಿತರಾಗಿದ್ದ ಉಗ್ರಂ ಮಂಜು, ಗೌತಮಿ ಜಾಧವ್ ನಡುವೆ ಬಿರುಕು ಮೂಡಿದೆ. ತ್ರಿವಿಕ್ರಮ್ ಜೊತೆ ಆಟದ ಲಾಜಿಕ್ ಮತ್ತು ಸ್ಟ್ರಾಟಜಿ ಮಾತನಾಡುವಾಗ ಮಂಜು ಮಧ್ಯೆ ಎಂಟ್ರಿ ಕೊಟ್ಟಿದ್ದಾರೆ. ಇದು ನಟಿಗೆ ಕೋಪ ತರಿಸಿದೆ. ಟೇಕ್ ಆಫ್ ಆಗಿದೆ, ಬಗ್ಗೋ ಮಾತೇ ಇಲ್ಲ ಎಂದು ಉಗ್ರಂ ಮಂಜುಗೆ (Ugramm Manju) ಗೌತಮಿ ಜಾಡಿಸಿದ್ದಾರೆ.
Advertisement
ಗೌತಮಿ (Gouthami) ಅವರು ಟಾಸ್ಕ್ ವಿಚಾರವಾಗಿ ತ್ರಿವಿಕ್ರಮ್ ಜತೆ ಮಾತನಾಡಿದ್ದಾರೆ. ಲಾಜಿಕ್ ಹಾಗೂ ಸ್ಟ್ರಾಟಜಿ ಬಗ್ಗೆ ಮಾತನಾಡಿದ್ದಾರೆ. ಇವರ ಮಾತಿನ ನಡುವೆ ಮಂಜು ಬಂದಿದ್ದಾರೆ. ಆಗ ಮಂಜು ಅವರು ನಾನು ಚಪ್ಪಾಳೆ ಹೊಡೆದೆ ಎಂದಿದ್ದಾರೆ. ಅದಕ್ಕೆ ಗೌತಮಿ ಅವರು, ಮಂಜುಗೆ ಚೆನ್ನಾಗಿ ಮಾತಿನಲ್ಲೇ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ:‘ಅಯೋಗ್ಯ 2’ಗೆ ಅದ್ಧೂರಿ ಮುಹೂರ್ತ- ಮತ್ತೆ ಜೊತೆಯಾದ ಸತೀಶ್ ನೀನಾಸಂ, ರಚಿತಾ ರಾಮ್
Advertisement
Advertisement
ನಿಮಗೆ ಚಪ್ಪಾಳೆಯ ಧ್ವನಿ ಕೇಳೆ ಇಲ್ಲ. ನಾನು ಕೇಳಿದ್ದು. ನಮ್ಮ ಕಥೆ ಜೊತೆ ನಿಮ್ಮ ಕಥೆ ಸೇರಿಸಿಕೊಂಡು ಹೇಳಿದ್ರಿ ಅಂತ. ಇದೇ ಪ್ಲಾಬ್ಲಮ್ ಇರೋದು. ಎಲ್ಲರಿಗೂ ನಿಮ್ಮ ನರೇಶನ್ ಕೊಡುತ್ತೀರಾ. ಇದಕ್ಕೆ ಎಲ್ಲರಿಗೂ ಅನ್ಸೋದು, ಮಂಜು ನಾನು ನಾನು ಅಂತ ಎನ್ನುತ್ತಾರೆ ಅಂತ. ನಾನು ಮೇಲೆ ಹೋಗಿದ್ದಾಗಿದೆ, ಬಗ್ಗೋ ಮಾತೇ ಇಲ್ಲ ಎಂದು ಗೌತಮಿ ತಿರುಗೇಟು ನೀಡಿದ್ದಾರೆ.
Advertisement
View this post on Instagram
ನಾನು ಕ್ಯಾಪ್ಟನ್ ಆಗಿದ್ದಾಗ ನೀವು ನನ್ನನ್ನು ಲೀಡ್ ಮಾಡಬೇಡಿ. ನಿಮ್ಮ ವಾಯ್ಸ್‌ನಿಂದ ನನ್ನ ಧ್ವನಿ ಕೆಳಗೆ ಹೋಗ್ತಿದೆ ಎಂದು ನಟಿ ಮಂಜುಗೆ ಎಚ್ಚರಿಕೆ ನೀಡಿದ್ದಾರೆ.