ದೊಡ್ಮನೆಯ (Bigg Boss Kannada 11) ಆಟ ದಿನದಿಂದ ದಿನಕ್ಕೆ ಸಾಕಷ್ಟು ತಿರುವುಗಳನ್ನು ಪಡೆದು 70ನೇ ದಿನ ಪೂರೈಸಿ ಮುನ್ನುಗ್ಗುತ್ತಿದೆ. ಇದೀಗ ಉಗ್ರಂ ಮಂಜುಗೆ ಕೈ ಕೊಟ್ಟು ಮೋಕ್ಷಿತಾಗೆ ಗೌತಮಿ ಹತ್ತಿರವಾಗ್ತಿದ್ದಾರಾ? ಎಂಬ ಅನುಮಾನ ಎಲ್ಲರನ್ನೂ ಕಾಡುತ್ತಿದೆ. ಉಗ್ರಂ ಮಂಜು ಮುಂದೆಯೇ ಮೋಕ್ಷಿತಾರನ್ನು ಗೌತಮಿ ಹಾಡಿಹೊಗಳಿದ್ದಾರೆ.
ಬಿಗ್ ಬಾಸ್‌ಗೆ ಎಂಟ್ರಿ ಕೊಟ್ಟ ದಿನದಿಂದ ಮೋಕ್ಷಿತಾ, ಮಂಜು (Ugramm Manju) ಹಾಗೂ ಗೌತಮಿ ತುಂಬಾ ಆತ್ಮೀಯ ಸ್ನೇಹಿತರಾಗಿದ್ದರು. ಇದು ವೀಕ್ಷಕರಿಗೂ ಗೊತ್ತಿರುವ ವಿಚಾರ. ಆದರೆ ಆ ಸ್ನೇಹ ಹೆಚ್ಚು ದಿನ ಉಳಿಯೋಕೆ ಸಾಧ್ಯವಾಗಲಿಲ್ಲ. ಆದರೆ ಟಾಸ್ಕ್ ವಿಚಾರಕ್ಕೆ ಈ ಮೂವರ ಮಧ್ಯೆ ಭಿನ್ನಾಭಿಪ್ರಾಯ ಮೂಡಿದ ಹಿನ್ನೆಲೆ ಮೋಕ್ಷಿತಾ ಇಬ್ಬರಿಂದಲೂ ದೂರ ಸರಿದರು. ಇದನ್ನೂ ಓದಿ:ರಾಜ್ಯದ ರಾಜಕಾರಣದಲ್ಲಿ ಬದಲಾವಣೆ ತಂದವರು ಎಸ್‌ಎಂಕೆ: ಅಭಿಷೇಕ್ ಅಂಬರೀಶ್
ಆದರೆ ಇದೀಗ ಮಂಜುಗೆ ಕೈ ಕೊಟ್ಟು ಮೋಕ್ಷಿತಾಗೆ (Mokshitha Pai) ಹತ್ತಿರವಾಗೋಕೆ ಗೌತಮಿ (Gouthami) ಹೊರಟ್ರಾ ಎಂಬ ಅನುಮಾನ ಮೂಡಿದೆ. ಆಟಕ್ಕುಂಟು ಲೆಕ್ಕಕ್ಕೆ ಇಲ್ಲ ಎಂಬ ಟಾಸ್ಕ್‌ನಲ್ಲಿ ತಮ್ಮ ತಂಡಕ್ಕೆ ಸದಸ್ಯರನ್ನು ಆಯ್ಕೆ ಮಾಡುವಾಗ ಮೋಕ್ಷಿತಾರ ಹೆಸರನ್ನು ಗೌತಮಿ ಉಲ್ಲೇಖಿಸಿದ್ದಾರೆ. ಮೋಕ್ಷಿತಾರ ಆಟದ ಬಗ್ಗೆ ಗುಣಗಾನ ಮಾಡಿದ್ದಾರೆ. ಗೌತಮಿ ಮಾತು ಕೇಳಿ ಮೋಕ್ಷಿತಾ ನಾಚಿದ್ದಾರೆ.