ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸತ್ಯ ಧಾರಾವಾಹಿ ಜನಪ್ರಿಯತೆಯಲ್ಲೂ ಮುಂದಿದೆ. ಸತ್ಯಳ ಧೈರ್ಯ, ಅವಳ ಸಾಹಸಗಾಥೆ, ಹೇರ್ ಸ್ಟೈಲ್, ಅವಳ ಮ್ಯಾನರಿಸಂ ಹೀಗೆ ಸಾಕಷ್ಟು ರೀತಿಯಲ್ಲಿ ಪ್ರೇಕ್ಷಕರು ಸತ್ಯಳನ್ನು ಅನುಕರಿಸುತ್ತಾರೆ. ಆದರೆ, ಇದೇ ಸತ್ಯ ಇದೀಗ ತಮಿಳಿನ ಖ್ಯಾತ ನಟಿ ನಯನತಾರಾ ಅವರನ್ನು ಫಾಲೋ ಮಾಡಿದ್ದಾರೆ. ಗೌತಮಿಯ ಫೆವರೇಟ್ ನಟಿ ನಯನತಾರಾ ಆಗಿರುವುದರಿಂದ ಅದೇ ರೀತಿಯಲ್ಲಿ ಫೋಟೋ ಶೂಟ್ ಅನ್ನು ಮಾಡಿಸಿಕೊಂಡಿದ್ದಾರೆ.
ನಯನತಾರಾ ಮದುವೆಯಲ್ಲಿ ವಿಶೇಷ ಕಾಸ್ಟ್ಯೂಮ್ ನಲ್ಲಿ ಕಂಗೊಳಿಸಿದ್ದರು. ಮದುವೆಯಲ್ಲಿ ತೊಟ್ಟಿದ್ದ ಕೆಂಪು ಸೀರೆಗೆ ಅನೇಕರು ಫಿದಾ ಆಗಿದ್ದರು. ಆ ಕಡು ಕೆಂಪು ಬಣ್ಣದ ಸೀರೆಯ ಜೊತೆಗೆ ಹಸಿರು ಬಣ್ಣದ ಜ್ಯುವೆಲರಿ ಕೂಡ ಎಲ್ಲರ ಗಮನ ಸೆಳೆದಿತ್ತು. ಆ ಸೀರೆಯ ಬೆಲೆ ಮತ್ತು ಜ್ಯುವೆಲರಿಯ ಡಿಸೈನ್ ಮೆಚ್ಚುಗೆಗೆ ಪಾತ್ರವಾಗಿತ್ತು. ಹೊಯ್ಸಳ ಕಾಲದ ಲುಕ್ ಹೊಂದಿದ್ದರಿಂದ ಇತಿಹಾಸವನ್ನೂ ಕೆದುಕುವ ಪ್ರಯತ್ನ ಮಾಡಲಾಗಿತ್ತು. ಅದೇ ಸೀರೆಗೆ ಗೌತಮಿ ಫಿದಾ ಆಗಿದ್ದಾರೆ. ಇದನ್ನೂ ಓದಿ: ಮುಗ್ದ ಗಂಡದಿಂದರ ಪಾಲಿಗೆ ಉಡುಗೊರೆಯಾಗಲಿದೆಯಾ ಈ ವೆಡ್ಡಿಂಗ್ ಗಿಫ್ಟ್?
ಗೌತಮಿ ಕೂಡ ಕಡು ಕೆಂಪು ಬಣ್ಣದ ಸೀರೆ ಮತ್ತು ಹಸಿರು ಬಣ್ಣದ ಜ್ಯುವೆಲರ್ ಹಾಕಿಕೊಂಡು ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ಆ ಫೋಟೋಗಳನ್ನು ಅವರು ಇನ್ಸ್ಟಾದಲ್ಲಿ ಶೇರ್ ಮಾಡಿದ್ದಾರೆ. ಆ ಫೋಟೋಗಳು ಇದೀಗ ಸಖತ್ ವೈರಲ್ ಕೂಡ ಆಗಿದೆ. ಸತ್ಯಳನ್ನು ಫಾಲೋ ಮಾಡುತ್ತಿದ್ದವರು, ಸತ್ಯಳ ನೆಚ್ಚಿನ ನಟಿಯ ಬಗ್ಗೆ ತಿಳಿದುಕೊಂಡು, ಇಬ್ಬರನ್ನೂ ಫಾಲೋ ಮಾಡುವುದಾಗಿ ಕೆಲವರು ಕಾಮೆಂಟ್ ಮಾಡಿದ್ದಾರೆ.