ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲಿ ಬಾಲನಟಿಯಾಗಿ ಪಾದಾರ್ಪಣೆ ಮಾಡಿದ ನಟಿ ಗೌರಿ ಕಿಶನ್‍ಗೆ (Gouri Kishan) ಬಾಡಿ ಶೇಮಿಂಗ್ ಪ್ರಶ್ನೆ ಎದುರಾಗಿದೆ. ಯೂಟ್ಯೂಬರ್ ಒಬ್ಬ ನಟಿ ಗೌರಿ ಕಿಶನ್‍ಗೆ ತೂಕ ಕೇಳಿ ಅವಮಾನಿಸಿದ್ದಾನೆ. ತೂಕದ ಬಗ್ಗೆ ಕೇಳಲಾದ ಯೂಟ್ಯೂಬರ್ ಪ್ರಶ್ನೆಗೆ ಗರಂ ಆದ ನಟಿ ಪತ್ರಿಕಾಗೋಷ್ಠಿಯಲ್ಲಿ ಆತನ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.
ನವೆಂಬರ್ 6ರಂದು ನಡೆದ `ಅದರ್ಸ್’ ಸಿನಿಮಾದ ಪತ್ರಿಕಾಗೋಷ್ಠಿಯಲ್ಲಿ ತೂಕದ ಬಗ್ಗೆ ಯೂಟ್ಯೂಬರ್ ಪ್ರಶ್ನಿಸಿದ್ದಾನೆ. ಪ್ರಶ್ನೆ ಕೇಳಿದಾಗ ಗಂಭೀರವಾಗಿಯೇ ಅವರು ಉತ್ತರಿಸಿದ್ದಾರೆ. ಬಳಿಕ ನಟಿ ಹಾಗೂ ಯುಟ್ಯೂಬರ್ ನಡುವೆ ಮಾತಿನ ಚಕಮಕಿ ನಡೆದಿದೆ. ಇದನ್ನೂ ಓದಿ: ವಿಶೇಷ ಭದ್ರತೆಗೆ ʻಕೊರಗಜ್ಜʼ ಟೀಮ್ ಮನವಿ – ಗೃಹ ಸಚಿವರಿಂದ ಸಕಾರಾತ್ಮಕ ಸ್ಪಂದನೆ
`ನಾನು ನಿಮ್ಮನ್ನ ಎತ್ತಿದರೆ ನಿಮ್ಮ ತೂಕ ಎಷ್ಟು? ಎಂದು ಪ್ರಶ್ನೆ ಕೇಳಿದ್ದ ಯೂಟ್ಯೂಬರ್. `ನನ್ನ ತೂಕ ತಿಳಿದುಕೊಂಡು ಏನು ಮಾಡುತ್ತೀರಿ? ಇದು ಯಾರನ್ನಾದರೂ ದೈಹಿಕವಾಗಿ ಅವಮಾನಿಸಿದಂತೆ ಅಲ್ಲವೆ?’ ಎಂದು ಮರು ಪ್ರಶ್ನೆ ಮಾಡಿದ್ದ ನಟಿ. `ನಾನು ಒಂದು ಚಿತ್ರದಲ್ಲಿ ನಟಿಸಿದ್ದೇನೆ. ಆ ಸಿನಿಮಾದ ಬಗ್ಗೆ ಕೇಳಿ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದರು. ಮತ್ತೆ ಮತ್ತೆ ಅದೇ ಪ್ರಶ್ನೆ ಮಾಡಿದ್ದ ಯೂಟ್ಯೂಬರ್‌ಗೆ ಖಡಕ್ ಉತ್ತರ ನೀಡಿದ್ದಾರೆ ನಟಿ ಗೌರಿ ಕಿಶನ್.
`ನಾನು ಇಲ್ಲಿರುವ ಏಕೈಕ ಮಹಿಳೆ, ನನ್ನ ಸುತ್ತಲೂ ಪುರುಷರು ಇದ್ದಾರೆ. ನೀವು ನನ್ನ ದೇಹವನ್ನೂ ಅವಮಾನಿಸುತ್ತಿದ್ದೀರಿ. ನಟಿಯ ತೂಕ ತಿಳಿದುಕೊಂಡು ನಿಮಗೆ ಆಗಬೇಕಾಗಿದ್ದು ಏನು? ಸಿನಿಮಾ ಹಾಗೂ ಪಾತ್ರದ ಬಗ್ಗೆ ಪ್ರಶ್ನೆ ಮಾಡಿ’ ಎಂದಿದ್ದರು. ಇದೀಗ ನಟಿ ಆಡಿದ ಮಾತುಗಳ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿವೆ.
ಬಾಲನಟಿಯಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ಗೌರಿ ಕಿಶನ್, `96′ ಚಿತ್ರದ ಮೂಲಕ ಫೇಮಸ್ ಆಗಿದ್ದರು. ಇದನ್ನೂ ಓದಿ: ಕತ್ರಿನಾ ಕೈಫ್, ವಿಕ್ಕಿ ಕೌಶಾಲ್ ಮನೆಗೆ ಬಂದ ಹೊಸ ಅತಿಥಿ

