ಕೊಲಂಬೋ: ಕೆಲವು ದಿನಗಳ ಹಿಂದೆ ಶ್ರೀಲಂಕಾದಾದ್ಯಂತ ಭಾರೀ ಪ್ರತಿಭಟನೆ ನಡೆದ ಹಿನ್ನೆಲೆ ಶ್ರೀಲಂಕಾ ತೊರೆದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಮಾಜಿ ಅಧ್ಯಕ್ಷ ಗೊತಬಯ ರಾಜಪಕ್ಸೆ ಅಮೆರಿಕದಲ್ಲಿ ನೆಲೆಸಲು ಗ್ರೀನ್ ಕಾರ್ಡ್ಗಾಗಿ ಅರ್ಜಿ ಸಲ್ಲಿಸಿರುವುದಾಗಿ ವರದಿಯಾಗಿದೆ.
ರಾಜಪಕ್ಸೆ ಅವರ ಪತ್ನಿ ಹಾಗೂ ಮಗನೊಂದಿಗೆ ಅಮೆರಿಕ ತೆರಳಿ ಅಲ್ಲಿಯೇ ನೆಲೆಸಲು ತಮ್ಮ ವಕೀಲರ ಮೂಲಕ ಗ್ರೀನ್ ಕಾರ್ಡ್ ಪಡೆಯಲು ಕಳೆದ ತಿಂಗಳೇ ಅರ್ಜಿ ಸಲ್ಲಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ. ಇದನ್ನೂ ಓದಿ: ಸಿದ್ದರಾಮಯ್ಯ ಮೇಲೆ ಮೊಟ್ಟೆ ಎಸೆತ ಪ್ರಕರಣ – ತಡರಾತ್ರಿ ಬಿಜೆಪಿಯ 9 ಮಂದಿ ಬಂಧನ, ಬಿಡುಗಡೆ
Advertisement
Advertisement
ರಾಜಪಕ್ಸೆ ಅವರು ಶ್ರೀಲಂಕಾ ಸೇನೆಯಿಂದ ಬೇಗನೆ ನಿವೃತ್ತಿ ಪಡೆದು 1998ರಲ್ಲಿ ಅಮೆರಿಕಗೆ ವಲಸೆ ಹೋಗಿದ್ದರು. ಬಳಿಕ 2005ರಲ್ಲಿ ಶ್ರೀಲಂಕಾಗೆ ಮರಳಿದ್ದರು. 2019ರ ಅಧ್ಯಕ್ಷೀಯ ಚುನಾವಣೆಗಾಗಿ ಅವರು ತಮ್ಮ ಅಮೆರಿಕದ ಪೌರತ್ವವನ್ನು ತ್ಯಜಿಸಿದ್ದರು ಎನ್ನಲಾಗಿದೆ. ಇದನ್ನೂ ಓದಿ: ರಾಜ್ಯಪಾಲರಾಗ್ತಾರಾ ಸೂಪರ್ ಸ್ಟಾರ್ ರಜನಿಕಾಂತ್?
Advertisement
ಗೊತಬಯ ರಾಜಪಕ್ಸೆ ಪ್ರಸ್ತುತ ಬ್ಯಾಂಕಾಕ್ನ ಹೋಟೆಲ್ನಲ್ಲಿ ಉಳಿದುಕೊಂಡಿದ್ದು, ತಮ್ಮ ಪತ್ನಿಯೊಂದಿಗೆ ಆಗಸ್ಟ್ 25ರಂದು ಶ್ರೀಲಂಕಾಗೆ ಮರಳುವ ಸಾಧ್ಯತೆಯಿದೆ. ಮೊದಲೇ ಯೋಜಿಸಿದಂತೆ ಥೈಲ್ಯಾಂಡ್ಗೆ ಹೋಗುವ ನಿರ್ಧಾರವನ್ನು ಕೈಬಿಡಲಾಗಿದೆ ಎಂದು ವರದಿಗಳು ತಿಳಿಸಿವೆ.