ವಾಷಿಂಗ್ಟನ್: ಗೊರಿಲ್ಲಾಗಳು ಒಮ್ಮೊಮ್ಮೆ ಮನುಷ್ಯನ ರೀತಿ ಎರಡು ಕಾಲುಗಳ ಮೇಲೆ ನಡೆದಾಡೋದು ಹೊಸದೇನಲ್ಲ. ಹಾಗಂತ ಯಾವಾಗಲೂ ಅದು ಕಾಣಸಿಗುವುದಿಲ್ಲ. ಆದ್ರೆ ಅಮೆರಿಕದ ಮೃಗಾಲಯದಲ್ಲಿರೋ ಈ ಗೊರಿಲ್ಲಾ ತನ್ನ ಕೈ ತುಂಬಾ ತಿಂಡಿ ಇದ್ದರೆ ಅಥವಾ ನೆಲ ಕೆಸರಾಗಿದ್ದರೆ ತನ್ನ ಕೈಗಳು ಕೊಳೆಯಾಗಬಾರದೆಂದು ಎರಡು ಕಾಲುಗಳ ಮೇಲೆ ಮನುಷ್ಯನಂತೆ ನಡೆದಾಡುತ್ತದೆ.
ಇಲ್ಲಿನ ಫಿಲಡೆಲ್ಫಿಯಾದ ಮೃಗಾಲಯದಲ್ಲಿರೋ ಈ ಗೊರಿಲ್ಲಾ ಹೆಸರು ಲೂಯಿಸ್. ಮೃಗಾಲಯದ ಸಿಬ್ಬಂದಿ 18 ವರ್ಷದ ಈ ವೆಸ್ಟರ್ನ್ ಲೋಲ್ಯಾಂಡ್ ಗೊರಿಲ್ಲಾದ ವಿಡಿಯೋವನ್ನ ಟ್ವಿಟ್ಟರ್ ಹಾಗೂ ಫೇಸ್‍ಬುಕ್‍ನಲ್ಲಿ ಹಂಚಿಕೊಂಡಿದ್ದಾರೆ. ಸಾಮಾನ್ಯವಾಗಿ ಗೊರಿಲ್ಲಾಗಳು ಇತರೆ ಪ್ರಾಣಿಗಳಂತೆ ನಾಲ್ಕು ಕಾಲುಗಳ ಮೇಲೆ ನಡೆದಾಡಿದ್ರೆ ಇದು ಮಾತ್ರ ಮನುಷ್ಯರಂತೆ ಓಡಾಡೋದನ್ನ ವಿಡಿಯೋದಲ್ಲಿ ಕಾಣಬಹುದು.
Advertisement
Advertisement
‘ಸಿಕ್ಕಾಪಟ್ಟೆ ಕ್ಲೀನ್’ ಎನಿಸಿಕೊಂಡಿರೋ ಈ ಲೂಯಿಸ್‍ಗಾಗಿ ಕೆಸರು ಹೊಂಡದ ಮೇಲೆ ಅಗ್ನಿಶಾಮಕ ಕೊಳಾಯಿ ಹಾಕಬೇಕಾಯಿತು ಎಂದು ಮೃಗಾಲಯದ ಅಧಿಕಾರಿಯೊಬ್ಬರು ಹೇಳಿದ್ದಾರೆ. ಗೊರಿಲ್ಲಾಗಳು ಹೀಗೆ ಮನುಷ್ಯರಂತೆ ಓಡಾಡೋದು ತುಂಬಾ ಅಪರೂಪ ಎಂದು ಅವರು ಹೇಳಿದ್ದಾರೆ.
Advertisement
ಆದ್ರೆ ಇದನ್ನ ನೋಡಿದವರು ತಮಾಷೆ ಮಾಡಿದ್ದು, ಇದು ಫೇಕ್. ಮನುಷ್ಯನೇ ಗೊರಿಲ್ಲಾ ರೀತಿ ವೇಷ ಧರಿಸಿರುವಂತಿದೆ. ಎರಡು ಕಾಲುಗಲ ಮೇಲೆ ನಡೆಯುವಾಗ ಕಯಲ್ಲಿ ಹೆಚ್ಚಿಗೆ ತಿಂಡಿ ಹಿಡಿದುಕೊಳ್ಳಬಹುದು. ಆದ್ದರಿಂದ ಇದರ ಬಗ್ಗೆ ದೂರಲು ಆಗಲ್ಲ ಎಂದು ಕಮೆಂಟ್ ಮಾಡಿದ್ದಾರೆ.
Advertisement
ಗೊರಿಲ್ಲಾ ಲೂಯಿಸ್, 6 ಅಡಿ ಎತ್ತರ ಹಾಗೂ 200 ಕೆಜಿ ತೂಕವಿದ್ದು, 1999ರಲ್ಲಿ ಮಿಸ್ಸೌರಿಯ ಸೆಂಟ್ ಲೂಯಿಸ್ ಮೃಗಾಲಯದಲ್ಲಿ ಜನಿಸಿತ್ತು. 2004ರಲ್ಲಿ ಫಿಲಡೆಲ್ಫಿಯಾದ ಮೃಗಾಲಯಕ್ಕೆ ಕರೆತರಲಾಗಿದೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.
Although gorillas occasionally walk on two legs (bipedal), it is less common. Not for Louis though – he can often be seen walking bipedal when his hands are full of snack or when the ground is muddy (so he doesn't get his hands dirty)! pic.twitter.com/6xrMQ1MU9S
— Philly Zoo (@phillyzoo) March 5, 2018