ಬೆಂಗಳೂರು: ಈ ಹಿಂದೆ ಸುಮ್ಮನಹಳ್ಳಿ ಫ್ಲೈಓವರ್ ಗುಂಡಿ ಬಿದ್ದು ಜನರಲ್ಲಿ ಆತಂಕ ಸೃಷ್ಟಿಸಿತ್ತು. ಈಗಲೂ ಸಹ ಆ ಬ್ರೀಡ್ಜ್ ಮೇಲೆ ಭಾರೀ ವಾಹನಗಳನ್ನ ಬಿಡುತ್ತಿಲ್ಲ. ಅದೇ ಹಂತಕ್ಕೆ ಬೆಂಗಳೂರಿನ ಗೊರಗುಂಟೆಪಾಳ್ಯದ ಫ್ಲೈಓವರ್ ಬಂದಿದೆ.
ಹೌದು…ಇದು ಸಿಲಿಕಾನ್ ಸಿಟಿಯ ಪ್ರಮುಖ ರಸ್ತೆಯಾಗಿದ್ದು, ಪ್ರತಿನಿತ್ಯ ವಾಹನಗಳಿಂದ ರೋಡ್ 24 ಗಂಟೆ ಜ್ಯಾಮ್ ಆಗಿರುತ್ತೆ. ಇದು ತುಮಕೂರು, ಹಾಸನ, ಮೈಸೂರು, ಮುಖ್ಯ ರಸ್ತೆಯಿಂದ ಹೊಸೂರು, ತಮಿಳುನಾಡು, ತಿರುಪತಿ, ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗೊದಕ್ಕೆ ಇರೋ ಮಾರ್ಗ ಇದಾಗಿದೆ. ಇಲ್ಲಿ ಯಾವಾಗಲೂ ಟ್ರಾಫಿಕ್ ಜಾಸ್ತಿಯೇ ಇರುತ್ತೆ.
Advertisement
Advertisement
ಗೊರಗುಂಟೆಪಾಳ್ಯದಿಂದ ಹೆಬ್ಬಾಳಕ್ಕೆ ಹೋಗುವ ರಸ್ತೆಯಲ್ಲಿ ರೈಲ್ವೇ ಟ್ರಾಕ್‍ನಿಂದ ಆಗುತ್ತಿದ್ದ ಟ್ರಾಫಿಕ್ ಸಮಸ್ಯೆಗೆ ಪರಿಹಾರವಾಗಿ ಇಲ್ಲಿ ಫ್ಲೈಓವರ್ ನಿರ್ಮಾಣ ಮಾಡಿದ್ದಾರೆ. ಆದರೆ ಈ ಫ್ಲೈಓವರ್ ನ ನಿರ್ವಹಣೆ ಮಾಡದೇ ಇಂದು ಫ್ಲೈಓವರ್ ಯಾವಾಗ ಬಿದ್ದೋಗುತ್ತೋ ಅನ್ನೋ ಆಗಿದೆ. ಗುಂಡಿಗಳಿಂದ ತುಂಬಿರೋ ಈ ರೋಡ್‍ನಲ್ಲಿ ಕೆಲ ಗುಂಡಿಗಳಿಂದ ಕಬ್ಬಿಣದ ರಾಡ್‍ಗಳು ಹೊರಬಂದಿವೆ. ಭಾರೀ ವಾಹನಗಳು ಇದೇ ಮಾರ್ಗವಾಗಿ ಸಂಚಾರ ಮಾಡಬೇಕಾಗಿದೆ. ಹೀಗಾಗಿ ಇಲ್ಲಿ ವಾಹನ ಚಾಲನೆ ಮಾಡುವುದು ಕಷ್ಟವಾಗಿದೆ. ಸೇತುವೆ ಮೇಲೆ ಟ್ರಾಫಿಕ್ ಜ್ಯಾಮ್ ಆಗಿ ವಾಹನಗಳು ನಿಂತರೆ ಸೇತುವೆ ಶೇಕ್ ಕೂಡ ಆಗುತ್ತಿದೆ.
Advertisement
ಈ ಮೇಲ್ಸೇತುವೆಯ ಬಗ್ಗೆ ಬಿಬಿಎಂಪಿ ಕಮಿಷನರ್ ಅವರನ್ನು ಕೇಳಿದರೆ, ಇದು ನಮ್ಮ ಗಮನಕ್ಕೆ ಬಂದಿದೆ. ಸರಿಯಾದ ಕ್ರಮಕೈಗೊಳ್ಳುವುದಕ್ಕೆ ಯೋಚನೆ ಮಾಡುತ್ತಿದ್ದೇನೆ. ಯೋಚನೆಯಾದ ಮೇಲೆ ಯೋಜನೆ ತಂದು ರಸ್ತೆ ಸರಿ ಮಾಡುತ್ತೇವೆ ಎಂದು ಬಿಬಿಎಂಪಿ ಕಮಿಷನರ್ ಅನಿಲ್ ಕುಮಾರ್ ಹೇಳಿದ್ದಾರೆ.
Advertisement
ಈ ಮೇಲ್ಸೇತುವೆಯಿಂದ ಯಾವುದಾದರೂ ದೊಡ್ಡ ಅನಾಹುತ ಆಗೋವರೆಗೆ ಕಾಯದೇ ಆದಷ್ಟು ಬೇಗ ದುರಸ್ತಿ ಕಾರ್ಯ ಮಾಡಬೇಕು. ಇಲ್ಲವಾದರೆ ಇಲ್ಲಿ ದೊಡ್ಡ ಅನಾಹುತ ಆಗೋದಂತು ಪಕ್ಕ. ಬೆಂಗಳೂರಿನ ಮೇಲ್ಸೇತುವೆಗಳ ಕಳಪೆ ಕಾಮಗಾರಿಯ ಕರ್ಮಕಾಂಡಗಳು ಒಂದರ ಒಂದರಂತೆ ಹೊರ ಬರತ್ತಲೇ ಇದೆ ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ.