ಬೆಂಗಳೂರು: 57 ದಿನಗಳ ಬಳಿಕ ಗೊರಗುಂಟೆ ಪಾಳ್ಯ ಫ್ಲೈಓವರ್ ಸಂಚಾರಕ್ಕೆ ಮುಕ್ತವಾಗಿದೆ. ಆದರೆ, ಲಘುವಾಹನಗಳಿಗೆ ಮಾತ್ರ ಅವಕಾಶ ಕೊಟ್ಟಿದ್ದು, ಭಾರೀ ತೂಕದ ವಾಹನಗಳಿಗೆ ಸಂಪೂರ್ಣ ನಿಷೇಧ ಹೇರಲಾಗಿದೆ.
ರಾಜಧಾನಿ ಬೆಂಗಳೂರಿನಿಂದ ಕಲ್ಯಾಣ ಕರ್ನಾಟಕ, ಮಧ್ಯ ಕರ್ನಾಟಕ, ಕರಾವಳಿ ಕರ್ನಾಟಕದ 21 ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಹೆದ್ದಾರಿ ಮೇಲ್ಸೇತುವೆ ಕಾಮಗಾರಿಯೇ ಕಳಪೆ ಆಗಿದೆ ಅನ್ನೋದು ಜಾಹೀರಾಗಿದೆ. ಜೊತೆಗೆ, ಸರ್ಕಾರಗಳ ಬೇಜವಾಬ್ದಾರಿಯನ್ನೂ ಬಹಿರಂಗಗೊಳಿಸಿದೆ. ಸುಮಾರು 4.5 ಕಿ.ಮೀ. ಉದ್ದದ ಶಿವಕುಮಾರ್ ಸ್ವಾಮೀಜಿಗಳ ಫ್ಲೈಓವರ್ ಅನ್ನು ಧ್ವಂಸ ಮಾಡಬೇಕು ಎಂದು ತಜ್ಞರು ಹೇಳ್ತಿದ್ದಾರೆ. ಉದ್ಘಾಟನೆಗೊಂಡ 12 ವರ್ಷಕ್ಕೆ ಧರಾಶಾಹಿ ಆಗುತ್ತಾ ಅನ್ನೋದು ಎಲ್ಲರ ಆಶ್ಚರ್ಯಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಇಂದು ಸಂಜೆಯಿಂದ ಲಘು ವಾಹನಗಳ ಸಂಚಾರಕ್ಕೆ ಪೀಣ್ಯ ಫ್ಲೈಓವರ್ ಮುಕ್ತ
ಪೀಣ್ಯ ಪ್ಲೈ ಓವರ್ ಸಂಚಾರಕ್ಕೆ ಸುರಕ್ಷಿತವಾಗಿಲ್ಲ. ಲೋಡ್ ಟೆಸ್ಟಿಂಗ್ ನಲ್ಲಿ ಸಂಚಾರಕ್ಕೆ ಸುರಕ್ಷಿತವಾಗಿಲ್ಲ ಎಂದು ತಿಳಿದು ಬಂದಿದೆ. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಪೀಣ್ಯ ಮೇಲ್ಸೇತುವೆಯನ್ನ ನಿರ್ಮಿಸಿತ್ತು. 4.5 ಕೀ.ಮೀ ಉದ್ದದ ಈ ಮೇಲ್ಸೇತುವೆಗೆ ಆದ ವೆಚ್ಚ775..70ಕೋಟಿ ರೂ.ಗಳು ಆಗಿತ್ತು. ಫ್ಲೈಓವರ್ ದುರಸ್ಥಿಯ ಬಗ್ಗೆ ವರದಿ ನೀಡಿದ್ದ ಭಾರತೀಯ ವಿಜ್ಞಾನ ಸಂಸ್ಥೆ ವಾಹನಗಳ ಸಂಚಾರಕ್ಕೆ ಸುರಕ್ಷಿತವಲ್ಲ ಎಂದು ವರದಿಯಲ್ಲಿ ತಿಳಿಸಿದೆ.
ಸುರಕ್ಷಿತ ಕ್ರಮಗಳೊಂದಿಗೆ ಲಘು ವಾಹನ ಸಂಚಾರಕ್ಕೆ ಎನ್‍ಎಚ್‍ಐಎ ಅನುಮತಿ ನೀಡಿದೆ. ಬೆಳಗ್ಗೆ 9 ರಿಂದ ರಾತ್ರಿ 7 ರವರೆಗೆ ಮಾತ್ರ ವಾಹನ ಓಡಾಟಕ್ಕೆ ಅವಕಾಶ ಸಾಧ್ಯತೆ ಇದೆ. ಬೈಕ್, ಆಟೋ, ಕಾರ್‍ಗಳಂಥ ಲಘು ವಾಹನಗಳಿಗೆ ಅವಕಾಶ ನೀಡಿದ್ದು, ಲಾರಿ, ಬಸ್, ಟಿಪ್ಪರ್, ಲಾರಿ, ಲೋಡ್ ಇರೋ ಮಿನಿವಾಹನಗಳಿಗೆ ಸಂಪೂರ್ಣ ನಿರ್ಬಂಧ ಹೇರಲಾಗಿದೆ. ಫ್ಲೈಓವರ್ ಮೇಲೆ ಹೆವಿ ವೆಹಿಕಲ್ ಸಂಚರಿಸದಂತೆ 10 ಅಡಿ ಎತ್ತರಕ್ಕೆ ಕಬ್ಬಿಣದ ತಡೆ ಹಾಕಲಾಗಿದೆ. ಇದನ್ನೂ ಓದಿ: ಪೀಣ್ಯ ಫ್ಲೈಓವರ್ ಧ್ವಂಸವಾಗುತ್ತಾ?- ಅನಾಹುತ ಸಂಭವಿಸಿದರೆ ಹೊಣೆ ಯಾರು ಎಂದ ಸಿಎಂ